ETV Bharat / business

ಕೊರೊನಾ ಅಪಘಾತಕ್ಕೆ ವಾಹನೋದ್ಯಮದ ಮಾರಾಟ ಶೇ.51ರಷ್ಟು ಛಿದ್ರ ಛಿದ್ರ.. - ವಾಹನೋದ್ಯಮ ಮಾರಾಟ ಕುಸಿತ

ಆದಾಯದಲ್ಲಿ ತೀವ್ರವಾದ ಹೊಡೆತ ಅನುಭವಿಸುತ್ತಿದ್ದಂತೆ ಒಇಎಂಗಳು ನಿಗದಿತ ವೆಚ್ಚ ಮತ್ತು ಕಾರ್ಯನಿರತ ಬಂಡವಾಳದ ಅಗತ್ಯತೆಗಳನ್ನು ಪೂರೈಸುವಲ್ಲಿ ಹೆಣಗಾಡುವಂತಾಗಿದೆ ಎಂದರು. ಸಿಯಾಮ್​ ಅಂದಾಜಿನ ಪ್ರಕಾರ ವಾಹನೋದ್ಯಮ ಸ್ಥಗಿತಗೊಳಿಸಿದ್ದರಿಂದ ನಿತ್ಯದ ಉತ್ಪಾದನಾ ವಹಿವಾಟಿನಲ್ಲಿ 2,300 ಕೋಟಿ ರೂ. ನಷ್ಟವಾಗುತ್ತಿದೆ.

passenger vehicle
ವಾಹನೋದ್ಯಮ
author img

By

Published : Apr 13, 2020, 7:26 PM IST

ನವದೆಹಲಿ : ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ವಿಧಿಸಲಾದ ಲಾಕ್​ಡೌನ್​ನಿಂದಾಗಿ ದೇಶಿ ಪ್ರಯಾಣಿಕ ವಾಹನಗಳ ಮಾರಾಟವು ಮಾರ್ಚ್‌ನಲ್ಲಿ ಶೇ.51ರಷ್ಟು ಕುಸಿದಿದೆ.

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರು (ಸಿಯಾಮ್) ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಪ್ರಯಾಣಿಕರ ವಾಹನಗಳ ಮಾರಾಟವು ಕಳೆದ ತಿಂಗಳು 1,43,014ಕ್ಕೆ ಇಳಿದಿತ್ತು. 2019ರ ಮಾರ್ಚ್‌ನಲ್ಲಿ 2,91,861 ಯುನಿಟ್‌ಗಳಿಗೆ ಹೋಲಿಸಿದರೆ ಇದು ಶೇ.51ರಷ್ಟು ಕುಸಿದಿದೆ. ಕಳೆದ ತಿಂಗಳು ವಾಣಿಜ್ಯ ವಾಹನಗಳ ಮಾರಾಟವು ಶೇ. 88.95ರಷ್ಟು ತಗ್ಗಿ 13,027ಕ್ಕೆ ಇಳಿದಿದ್ದು, 2019ರ ಮಾರ್ಚ್‌ನಲ್ಲಿ 1,09,022 ಯುನಿಟ್‌ಗಳಷ್ಟಿತ್ತು. ದ್ವಿಚಕ್ರ ವಾಹನಗಳ ಮಾರಾಟ ಸಹ ಮಾರ್ಚ್‌ನಲ್ಲಿ ಶೇ.39.83ರಷ್ಟು ಕುಸಿದು 8,66,849 ಕ್ಕೆ ತಲುಪಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 14,40,593 ಯುನಿಟ್‌ಗಳಷ್ಟಿತ್ತು. ಒಟ್ಟಾರೆ ವಾಹನ ಮಾರಾಟವು ಕಳೆದ ತಿಂಗಳು ಶೇ.44.95 ರಷ್ಟು ಇಳಿಕೆಯಾಗಿ 1,050,367ಕ್ಕೆ ತಲುಪಿದೆ. 2019ರ ಮಾರ್ಚ್‌ನಲ್ಲಿ 19,08,097 ಯುನಿಟ್‌ಗಳಷ್ಟಿತ್ತು. 21 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿದ್ದರಿಂದ 2020ರ ಮಾರ್ಚ್ ತಿಂಗಳು ವಾಹನ ವಲಯಕ್ಕೆ ಅತ್ಯಂತ ಸವಾಲಿನ ತಿಂಗಳುಗಳಲ್ಲಿ ಒಂದಾಗಿದೆ ಎಂದು ಸಿಯಾಮ್ ಅಧ್ಯಕ್ಷ ರಾಜನ್ ವಾಧೇರಾ ಹೇಳಿದ್ದಾರೆ.

ಆದಾಯದಲ್ಲಿ ತೀವ್ರವಾದ ಹೊಡೆತ ಅನುಭವಿಸುತ್ತಿದ್ದಂತೆ ಒಇಎಂಗಳು ನಿಗದಿತ ವೆಚ್ಚ ಮತ್ತು ಕಾರ್ಯನಿರತ ಬಂಡವಾಳದ ಅಗತ್ಯತೆಗಳನ್ನು ಪೂರೈಸುವಲ್ಲಿ ಹೆಣಗಾಡುವಂತಾಗಿದೆ ಎಂದರು. ಸಿಯಾಮ್​ ಅಂದಾಜಿನ ಪ್ರಕಾರ ವಾಹನೋದ್ಯಮ ಸ್ಥಗಿತಗೊಳಿಸಿದ್ದರಿಂದ ನಿತ್ಯದ ಉತ್ಪಾದನಾ ವಹಿವಾಟಿನಲ್ಲಿ 2,300 ಕೋಟಿ ರೂ. ನಷ್ಟವಾಗುತ್ತಿದೆ. ಭಾರತದ ಆರ್ಥಿಕತೆಯ ಮೇಲೆ ಮತ್ತು ವಿಶೇಷವಾಗಿ ದೇಶಿ ವಾಹನ ಉದ್ಯಮದ ಮೇಲೆ ಕೋವಿಡ್​-19 ಪರಿಣಾಮ ಕಡಿಮೆ ಮಾಡುವಂತಹ ಕ್ರಮಗಳ ಕುರಿತು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಪೂರೈಕೆ ಭಾಗದಲ್ಲಿ ಕೂಡ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. ಬೇಡಿಕೆ ಮತ್ತು ಹಣಕಾಸಿನ ಲಭ್ಯತೆಯ ಬೆಳವಣಿಗೆಯನ್ನು ಮರಳಿ ತರಲು ಎಲ್ಲರೂ ಗಮನ ಹರಿಸಬೇಕಾಗಿದೆ ಎಂದರು. ಕಳೆದ ಹಣಕಾಸು ವರ್ಷದಲ್ಲಿ (2019ರ ಏಪ್ರಿಲ್ 1, 2020ರ ಮಾರ್ಚ್ 31) ಪ್ರಯಾಣಿಕರ ವಾಹನಗಳ ಮಾರಾಟವು ಹಿಂದಿನ ಹಣಕಾಸು ವರ್ಷದಲ್ಲಿ 33,77,389 ಯುನಿಟ್‌ಗಳಿಗೆ ಹೋಲಿಸಿದರೆ ಶೇ.17.82ರಷ್ಟು ಇಳಿಕೆ ಕಂಡು 27,75,679ಕ್ಕೆ ತಲುಪಿದೆ.

ವಾಣಿಜ್ಯ ವಾಹನಗಳ ಮಾರಾಟವು 2020ರ ಏಪ್ರಿಲ್-ಮಾರ್ಚ್ ಅವಧಿಯಲ್ಲಿ ಶೇ.28.75ರಷ್ಟು ಇಳಿದು 7,17,688ಕ್ಕೆ ತಲುಪಿದೆ. 2019ರ ಏಪ್ರಿಲ್-ಮಾರ್ಚ್​​ನಲ್ಲಿ 10,07,311 ಯುನಿಟ್ ಮಾರಾಟವಾಗಿದೆ. ದ್ವಿಚಕ್ರ ವಾಹನಗಳ ಮಾರಾಟವೂ ಸಹ ಕಳೆದ ಹಣಕಾಸು ವರ್ಷದಲ್ಲಿ ಶೇ.17.76ರಷ್ಟು ಕುಸಿದು 1,74,17,616ಕ್ಕೆ ತಲುಪಿದೆ. 2018-19ರ ಆರ್ಥಿಕ ವರ್ಷದಲ್ಲಿ 2,62,66,179 ಯುನಿಟ್‌ಗಳಿಗೆ ಹೋಲಿಸಿದರೆ ಕಳೆದ ಹಣಕಾಸು ವರ್ಷದಲ್ಲಿ ಒಟ್ಟು ಮಾರಾಟವು ಶೇ.17.96ರಷ್ಟು ಇಳಿದು 2,15,48,494ಕ್ಕೆ ತಲುಪಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.