ಹೈದರಾಬಾದ್: 3 ಜಿ / 4 ಜಿ ಮೊಬೈಲ್ ಸಂಪರ್ಕದ ಮೂಲಕ ಮತ್ತು ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಸಂಪರ್ಕದ ಮೂಲಕ ಸರ್ಕಾರ ಮತ್ತು ಟೆಲಿಕಾಂ ಸೇವಾ ಪೂರೈಕೆದಾರರು (ಟಿಎಸ್‌ಪಿ) ಗ್ರಾಮೀಣ ಪ್ರದೇಶಗಳಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಒದಗಿಸಲಾಗುತ್ತಿದೆ.
ಭಾರತದಲ್ಲಿ ಜನಗಣತಿಯ ಪ್ರಕಾರ 37,439 ಗ್ರಾಮಗಳು ಹೆಚ್ಚಿನ ವೇಗದ 3 ಜಿ / 4ಜಿ ಮೊಬೈಲ್ ಸಂಪರ್ಕ ಹೊಂದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ವೇಗ ಸುಧಾರಿಸಲು ಹಾಗೂ ದೇಶದ ಬ್ರಾಡ್‌ಬ್ಯಾಂಡ್ / ಹೈಸ್ಪೀಡ್ ಇಂಟರ್ನೆಟ್ ಮೂಲಸೌಕರ್ಯವನ್ನು ಎಲ್ಲ ಗ್ರಾಮ ಪಂಚಾಯಿತಿಗಳಿಗೆ (ಅಂದಾಜು 2.5 ಲಕ್ಷ) ಭಾರತ್‌ನೆಟ್ ಯೋಜನೆ ಮೂಲಕ ಸಂಪರ್ಕಿಸಲಾಗುತ್ತದೆ.
ಗುಜರಾತ್ ರಾಜ್ಯದಲ್ಲಿ 775 ಹಳ್ಳಿಗಳು ಹೆಚ್ಚಿನ ವೇಗದ 3ಜಿ / 4ಜಿ ಮೊಬೈಲ್ ಸಂಪರ್ಕದಿಂದ ವಂಚಿತವಾಗಿವೆ. ಹಂತಹಂತವಾಗಿ ಸರ್ಕಾರ ಮತ್ತು ಟೆಲಿಕಾಂ ಸೇವಾ ಪೂರೈಕೆದಾರರ ಯೋಜನೆಗಳ ಅಡಿ ಗ್ರಾಮಗಳನ್ನು ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕರ್ನಾಟಕ 27,397 ಹಳ್ಳಿಗಳಲ್ಲಿ ಹೈಸ್ಪೀಡ್ ಇಂಟರ್ನೆಟ್ ಇದ್ದರೇ 608 ಗ್ರಾಮಗಳು ವಂಚಿತವಾಗಿವೆ.
ಕ್ರ.ಸಂ | ರಾಜ್ಯ/ ಕೇಂ.ಪ್ರದೇಶ | 2011ರ ಜನಗತಿಯಂತೆ ಹಳ್ಳಿಗಳ ಸಂಖ್ಯೆ | ವೇಗದ ಇಂಟರ್ನೆಟ್ ಹೊಂದಿರದ ಹಳ್ಳಿಗಳ ಸಂಖ್ಯೆ |
1 | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | 396 | 311 |
2 | ಆಂಧ್ರ ಪ್ರದೇಶ | 16158 | 2095 |
3 | ಅರುಣಾಚಲ ಪ್ರದೇಶ | 5258 | 3343 |
4 | ಅಸ್ಸೋಂ | 25372 | 1231 |
5 | ಬಿಹಾರ್ | 39073 | 321 |
6 | ಚಂಡೀಗಢ | 5 | 0 |
7 | ಚತ್ತೀಸ್ಗಢ | 19567 | 2793 |
8 | ದಾದ್ರ ನಗರ ಹವೇಲಿ | 84 | 11 |
9 | ದೆಹಲಿ | 103 | 0 |
10 | ಗೋವಾ | 320 | 21 |
11 | ಗುಜರಾತ್ | 17843 | 775 |
12 | ಹರಿಯಾಣ | 6642 | 1 |
13 | ಹಿಮಾಚಲ ಪ್ರದೇಶ | 17882 | 974 |
14 | ಜಮ್ಮು ಮತ್ತು ಕಾಶ್ಮೀರ | 6101 | 388 |
15 | ಜಾರ್ಖಂಡ್ | 29492 | 2069 |
16 | ಕರ್ನಾಟಕ | 27397 | 608 |
17 | ಕೇರಳ | 1017 | 0 |
18 | ಲಡಾಖ್ | 236 | 155 |
19 | ಲಕ್ಷದ್ವೀಪ | 6 | 0 |
20 | ಮಧ್ಯಪ್ರದೇಶ | 51929 | 2450 |
21 | ಮಹಾರಾಷ್ಟ್ರ | 40959 | 2014 |
22 | ಮನಿಪುರ | 2515 | 806 |
23 | ಮೆಘಾಲಯ | 6459 | 2418 |
24 | ಮಿಜೋರಾಂ | 704 | 296 |
25 | ನಾಗಾಲ್ಯಾಂಡ್ | 1400 | 378 |
26 | ಒಡಿಶಾ | 47677 | 8947 |
27 | ಪಂಜಾಬ್ | 12168 | 1 |
28 | ಪುದುಚೆರಿ | 90 | 0 |
29 | ರಾಜಸ್ಥಾನ್ | 43264 | 1453 |
30 | ಸಿಕ್ಕಿಂ | 425 | 16 |
31 | ತಮಿಳುನಾಡು | 15049 | 74 |
32 | ತೆಲಂಗಾಣ | 10128 | 375 |
33 | ತ್ರಿಪುರ | 863 | 60 |
34 | ಉತ್ತರಾಖಂಡ್ | 15745 | 2410 |
35 | ಉತ್ತರ ಪ್ರದೇಶ | 97813 | 620 |
36 | ಪಶ್ವಿಮ ಬಂಗಾಳ | 37478 | 25 |
ಒಟ್ಟು | 5,97,618 | 37439 |