ನವದೆಹಲಿ: 2020ರ ಡಿಸೆಂಬರ್‌ನಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಸಂಗ್ರಹ 2,303.79 ಕೋಟಿ ರೂ.ಗೆ ತಲುಪಿದ್ದು, ಹಿಂದಿನ ತಿಂಗಳಿಗಿಂತ 201 ಕೋಟಿ ರೂ. ಹೆಚ್ಚಳವಾಗಿದೆ ಎಂದು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ (ಎನ್‌ಎಚ್‌ಎಐ) ತಿಳಿಸಿದೆ.
ಫಾಸ್ಟ್‌ಟ್ಯಾಗ್‌ಗಳ ಟೋಲ್ ವಹಿವಾಟು 2019ರ ಡಿಸೆಂಬರ್‌ನಲ್ಲಿ 1.35 ಕೋಟಿಯಷ್ಟು ಬೆಳವಣಿಗೆ ದಾಖಲಿಸಿದೆ. ಜನರಿಗೆ ಅನಾನುಕೂಲತೆ ತಪ್ಪಿಸಲು ಫೆಬ್ರವರಿ 15ರವರೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೈಬ್ರಿಡ್ ಲೇನ್‌ಗಳನ್ನು ಅನುಮತಿಸಲಾಗಿದೆ. 2021ರ ಜನವರಿ 1ರಿಂದ ಫಾಸ್ಟ್‌ಟ್ಯಾಗ್ ಹೊಂದುವುದು ಕಡ್ಡಾಯವೆಂದು ಕೇಂದ್ರ ಸರ್ಕಾರ ಘೋಷಿಸಿದೆ.
ಇದನ್ನೂ ಓದಿ: ಕೋವಿಡ್ ಪೆಟ್ಟು ತಿಂದ ಭಾರತದ ಆರ್ಥಿಕ ಚೇತರಿಕೆ 'ವಿ'ಕಾರವಾಗಿ ಸಾಗುತ್ತಿದೆ: ಹಣಕಾಸು ಸಚಿವಾಲಯ
ಡಿಸೆಂಬರ್‌ನಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಸಂಗ್ರಹವು ಗಮನಾರ್ಹವಾಗಿ 201 ಕೋಟಿ ರೂ.ಯಷ್ಟು ಹೆಚ್ಚಳವಾಗಿ 2,303.79 ಕೋಟಿ ರೂ.ಗೆ ತಲುಪಿದೆ. 2020ರ ನವೆಂಬರ್‌ನಲ್ಲಿ 2,102 ಕೋಟಿ ರೂ.ಗಳಷ್ಟಿತ್ತು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪ್ರಕಟಣೆಯಲ್ಲಿ ತಿಳಿಸಿದೆ.
ಫಾಸ್ಟ್‌ಟ್ಯಾಗ್ ಮೂಲಕ ಮಾಸಿಕ ವಹಿವಾಟು ಡಿಸೆಂಬರ್‌ನಲ್ಲಿ 1.35 ಕೋಟಿ ಹೆಚ್ಚಾಗಿದೆ. ಫಾಸ್ಟ್‌ಟ್ಯಾಗ್ ಡಿಸೆಂಬರ್‌ನಲ್ಲಿ 13.84 ಕೋಟಿ ವಹಿವಾಟು ದಾಖಲಿಸಿದೆ. 2020ರ ನವೆಂಬರ್ನ 12.48 ಕೋಟಿ ವಹಿವಾಟುಗಳಿಗೆ ಹೋಲಿಸಿದರೆ ಶೇ 10.83ರಷ್ಟು ಹೆಚ್ಚಳವಾಗಿದೆ.