ಸ್ಯಾನ್ ಫ್ರಾನ್ಸಿಸ್ಕೋ: ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಮ್, ಚೀನಾ ಮೂಲದ ಟಿಕ್‌ಟಾಕ್ ಮತ್ತು ಗೂಗಲ್ ಒಡೆತನದ ಯೂಟ್ಯೂಬ್‌ನ ಕನಿಷ್ಠ 235 ಮಿಲಿಯನ್ (235 ಕೋಟಿ) ಬಳಕೆದಾರರ ಬೃಹತ್ ಗಾತ್ರದ ಡೇಟಾ ಸೋರಿಕೆಯಾಗಿ ಹಾನಿಗೊಳಗಾಗಿದೆ ಮತ್ತು ಸೋರಿಕೆಯಾದವರ ಪ್ರೊಫೈಲ್‌ಗಳು ಡಾರ್ಕ್ ವೆಬ್‌ನ ಹಿಡಿತದಲ್ಲಿದೆ ಎಂದು ವರದಿಯೊಂದು ತಿಳಿಸಿದೆ.
ಪ್ರೊ - ಕಂಸೂಮರ್ ವೆಬ್‌ಸೈಟ್ ಕಂಪಾರಿಟೆಕ್‌ನ ಭದ್ರತಾ ಸಂಶೋಧಕರ ಪ್ರಕಾರ, ಈ ಡೇಟಾ ಸೋರಿಕೆಯ ಹಿಂದೆ ಅಸುರಕ್ಷಿತ ಡೇಟಾಬೇಸ್ನ ಕೈವಾಡವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸೋರಿಕೆಯ ಡೇಟಾವು ಹಲವು ಡೇಟಾಸೆಟ್‌ಗಳಲ್ಲಿ ಹರಡಿದೆ. ಅವುಗಳಲ್ಲಿ ಎರಡು ತಲಾ 100 ಮಿಲಿಯನ್‌ಗಿಂತ ಕಡಿಮೆ ಪ್ರಮಾಣದಲ್ಲಿ ಬರುತ್ತಿವೆ. ಇನ್‌ಸ್ಟಾಗ್ರಾಮ್‌ನಿಂದ ಸೋರಿಕೆ ಮಾಡಲಾದ ಬಳಕೆದಾರರ ಪ್ರೊಫೈಲ್ ದಾಖಲೆಗಳು ಸಹ ಒಳಗೊಂಡಿದೆ ಎಂದು ಭದ್ರತಾ ಸಂಶೋಧಕರನ್ನು ಉಲ್ಲೇಖಿಸಿ ಫೋರ್ಬ್ಸ್ ವರದಿ ಮಾಡಿದೆ.
ಮೂರನೇ ಅತಿದೊಡ್ಡ ಸುಮಾರು 42 ಮಿಲಿಯನ್ ಟಿಕ್‌ಟಾಕ್ ಬಳಕೆದಾರರ ಡೇಟಾಸೆಟ್ ಸಹ ಲೀಕ್ ಆಗಿದೆ. ಈ ನಂತರ ಸುಮಾರು 4 ಮಿಲಿಯನ್ ಯೂಟ್ಯೂಬ್ ಬಳಕೆದಾರರ ಪ್ರೊಫೈಲ್‌ಗಳಿವೆ. ಸೋರಿಕೆಯಲ್ಲಿ ಬಳಕೆದಾರರ ದೂರವಾಣಿ ಸಂಖ್ಯೆ ಅಥವಾ ಇಮೇಲ್ ವಿಳಾಸ, ಪ್ರೊಫೈಲ್ ಹೆಸರು, ಪೂರ್ಣವಾದ ನೈಜ ಹೆಸರು, ಪ್ರೊಫೈಲ್ ಫೋಟೋ, ಖಾತೆ ವಿವರಣೆ ಮತ್ತು ಹಿಂಬಾಲಕರು ಸೇರಿದಂತೆ ಇತರೆ ಮಾಹಿತಿ ಸೋರಿಕೆ ಆಗಬಹುದು ಎಂದು ಹೇಳಿದೆ.
ಫಿಶಿಂಗ್ ನಡೆಸುತ್ತಿರುವ ಸ್ಪ್ಯಾಮರ್ ಮತ್ತು ಸೈಬರ್ ಅಪರಾಧಿಗಳಿಗೆ ಈ ಮಾಹಿತಿಯು ಬಹುಶಃ ಹೆಚ್ಚು ಮೌಲ್ಯಯುತವಾಗಿದೆ ಎಂದು ಕಂಪಾರಿಟೆಕ್‌ನ ಸಂಪಾದಕ ಪಾಲ್ ಬಿಸ್ಚಾಫ್ ಹೇಳಿದರು.