ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಜುಲೈ - ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಚಾಲ್ತಿ ಖಾತೆ ಕೊರತೆ 15.5 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ ಶೇ 2.4ರಷ್ಟಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ವಾಣಿಜ್ಯ ವಹಿವಾಟಿನ ಕೊರತೆಯ ಹೆಚ್ಚಳದಿಂದಾಗಿ ಹಿಂದಿನ ಮೂರು ತಿಂಗಳಲ್ಲಿ ಇದು 19.2 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ ಶೇ 3.8ರಷ್ಟಿತ್ತು. 2019-20ರ ಎರಡನೇ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆ ಕೊರತೆ 7.6 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ ಶೇ 1.1ರಷ್ಟು ದಾಖಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನದ ಸಾಲಕ್ಕೆ ಚೀನಾ ಜಾಮೀನು ಕೊಟ್ಟು ಆನೆಗೆ ಚಡ್ಡಿ ತೊಡಿಸಲು ಹೊರಟಿತಾ..!?
2019-20ರ ಇದೇ ಅವಧಿಯಲ್ಲಿ ಚಾಲ್ತಿ ಖಾತೆಯ ಹೆಚ್ಚುವರಿಯು ಜಿಡಿಪಿಯ ಶೇ 3.1ರಷ್ಟನ್ನು ಹಣಕಾಸು ವರ್ಷದ ಮೊದಲಾರ್ಧದಲ್ಲಿ ದಾಖಲಿಸಿತ್ತು. ಇದು ವ್ಯಾಪಾರ ಕೊರತೆಯ ತೀವ್ರ ಸಂಕೋಚನದಿಂದ ಉಂಟಾಯಿತು.
2020-21ರ ಎರಡನೇ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆ ಮಿಗತೆ ಕಡಿಮೆಯಾಗಿದ್ದು, ಹಿಂದಿನ ತ್ರೈಮಾಸಿಕದಲ್ಲಿ ಸರಕುಗಳ ವ್ಯಾಪಾರ ಕೊರತೆಯು 14.8 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.