ETV Bharat / business

ರೆಕ್ಕೆ ಬಿಚ್ಚದ ವಿಮಾನಗಳು: ಮೇ 17ರ ತನಕ ದೇಶಿ, ಅಂತಾರಾಷ್ಟ್ರೀಯ ಹಾರಾಟ ಬಂದ್ - ಲಾಕ್​ಡೌನ್

ಕೇಂದ್ರ ಗೃಹ ಸಚಿವಾಲಯವು ಈಗಿನ ಲಾಕ್​ಡೌನ್ ಅವಧಿಯನ್ನು ಮೇ 17ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ದೇಶಿಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಹಾರಾಟದ ನಿಷೇಧವನ್ನು ಮೇ 17ರ 23:59 ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಸಿವಿಲ್ ಡೈರೆಕ್ಟರೇಟ್ ಜನರಲ್ ಏವಿಯೇಷನ್ ​​(ಡಿಜಿಸಿಎ) ಹೇಳಿದೆ.

international flights
ವಿಮಾನ ಹಾರಾಟ
author img

By

Published : May 2, 2020, 5:33 PM IST

ನವದೆಹಲಿ: ಲಾಕ್‌ಡೌನ್ ಅವಧಿ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಮೇ 17ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಕೇಂದ್ರ ಗೃಹ ಸಚಿವಾಲಯವು ಈಗಿನ ಲಾಕ್​ಡೌನ್ ಅವಧಿಯನ್ನು ಮೇ 17ರ ವರೆಗೆ ವಿಸ್ತರಿಸಿರುವ ಆದೇಶ ಹೊರಡಿಸಿದೆ. ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ದೇಶಿಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಹಾರಾಟದ ನಿಷೇಧವನ್ನು ಮೇ 17ರ 23:59 ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಸಿವಿಲ್ ಡೈರೆಕ್ಟರೇಟ್ ಜನರಲ್ ಏವಿಯೇಷನ್ ​​(ಡಿಜಿಸಿಎ) ಹೇಳಿದೆ.

ಡಿಜಿಸಿಎ ಸುತ್ತೋಲೆಯಲ್ಲಿ ವಿದೇಶಿ ಮತ್ತು ದೇಶೀಯ ವಿಮಾನಯಾನ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಆರಂಭಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಈ ನಿರ್ಬಂಧವು ಅಂತಾರಾಷ್ಟ್ರೀಯ ಕಾರ್ಗೋ ಮತ್ತು ಡಿಜಿಸಿಎ ನಿರ್ದಿಷ್ಟವಾಗಿ ಅನುಮೋದಿಸಿದ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದಿದೆ.

ಮಾರ್ಚ್ 25ರಿಂದ ದೇಶಿಯ ಮತ್ತು ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಹಾರಾಟದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಭಾರತವು ಪ್ರಸ್ತುತ ಒಟ್ಟು 650 ವಿಮಾನಗಳನ್ನು ಹೊಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.