ನವದೆಹಲಿ: ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಎಂಟು ಪ್ರಮುಖ ಮೂಲಸೌಕರ್ಯ ಕೈಗಾರಿಕೆಗಳ ಉತ್ಪಾದನೆಯು ಏಪ್ರಿಲ್‌ನಲ್ಲಿ ಶೇಕಡಾ 38.1ರಷ್ಟು ಕುಸಿದಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾಗಾರ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಕ್ಷೇತ್ರಗಳ ಉತ್ಪಾದನೆಯು ಶೇಕಡಾ 9ರಷ್ಟು ಕುಸಿತ ಕಂಡಿದೆ.
"ಕೋವಿಡ್ -19ನಿಂದಾಗಿ ಎಪ್ರಿಲ್‌ನಲ್ಲಿ ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆ ಕೈಗಾರಿಕೆಗಳು ಗಣನೀಯ ಪ್ರಮಾಣದ ಉತ್ಪಾದನಾ ನಷ್ಟವನ್ನು ಅನುಭವಿಸಿವೆ" ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.