ETV Bharat / business

ಕೊರೊನಾ ಎಫೆಕ್ಟ್.. ಕಾಫಿ ಡೇ ಗ್ಲೋಬಲ್​ಗೆ 59.38 ಕೋಟಿ ನಷ್ಟ

ಕಾಫಿ ಡೇ ಗ್ಲೋಬಲ್ ಲಿಮಿಟೆಡ್‌ನ ಈ ವರ್ಷದ ಒಟ್ಟು ಆದಾಯವು 78.69 ಕೋಟಿ ರೂಪಾಯಿಗಳಾಗಿದ್ದು, ಹಿಂದಿನ ವರ್ಷದ ಅವಧಿಯಲ್ಲಿ ಸಂಸ್ಥೆಯ ಒಟ್ಟು ಆದಾಯ 364.24 ಕೋಟಿ ರೂಪಾಯಿಗಳಷ್ಟಿತ್ತು..

Coffee Day Global
ಕಾಫಿ ಡೇ ಗ್ಲೋಬಲ್
author img

By

Published : Nov 25, 2020, 5:52 PM IST

ನವದೆಹಲಿ : ಕಾಫಿ ಡೇ ಎಂಟರ್​​​ಪ್ರೈಸಸ್​​ನ ಅಂಗಸಂಸ್ಥೆಯಾದ ಕಾಫಿ ಡೇ ಗ್ಲೋಬಲ್ ಲಿಮಿಟೆಡ್​​​ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ 59.38 ಕೋಟಿ ರೂಪಾಯಿ ನಷ್ಟಕ್ಕೆ ಒಳಗಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಸೆಪ್ಟೆಂಬರ್ 30ಕ್ಕೆ ಈ ವರ್ಷದ ಎರಡನೇ ತ್ರೈಮಾಸಿಕದ ಅವಧಿ ಪೂರ್ಣಗೊಂಡಿದ್ದು, ಹಿಂದಿನ ವರ್ಷ ಇದೇ ಅವಧಿಯಲ್ಲಿ ಸುಮಾರು 98.42 ಕೋಟಿ ರೂಪಾಯಿ ನಷ್ಟವಾಗಿತ್ತು ಎಂದು ಕಾಫಿ ಡೇ ಗ್ಲೋಬಲ್ ಲಿಮಿಟೆಡ್​​​ ಹೇಳಿಕೆ ನೀಡಿದೆ.

ಕಾಫಿ ಡೇ ಗ್ಲೋಬಲ್ ಲಿಮಿಟೆಡ್‌ನ ಈ ವರ್ಷದ ಒಟ್ಟು ಆದಾಯವು 78.69 ಕೋಟಿ ರೂಪಾಯಿಗಳಾಗಿದ್ದು, ಹಿಂದಿನ ವರ್ಷದ ಅವಧಿಯಲ್ಲಿ ಸಂಸ್ಥೆಯ ಒಟ್ಟು ಆದಾಯ 364.24 ಕೋಟಿ ರೂಪಾಯಿಗಳಷ್ಟಿತ್ತು.

ಸಿದ್ದಾರ್ಥ್​ ಹಾಸನದ ಕಾಫಿ ಕಂಪನಿಯಲ್ಲಿ 12 ಕೋಟಿ ರೂ ವ್ಯವಹಾರ ನಡೀತಿತ್ತು!

ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಉತ್ಪಾದನೆ, ಖರೀದಿ ಮತ್ತು ರಫ್ತು ವಿಭಾಗವು 7.52 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಆದಾಯ 36.31 ಕೋಟಿ ರೂಪಾಯಿಗಳಷ್ಟಿತ್ತು.

ಚಿಲ್ಲರೆ ವ್ಯಾಪಾರವು 79.68 ಕೋಟಿ ರೂ.ಗಳ ಆದಾಯವನ್ನು ಹೊಂದಿದ್ದು, ಕಳೆದ ಹಣಕಾಸು ವರ್ಷದಲ್ಲಿ ಇದೇ ತ್ರೈಮಾಸಿಕದಲ್ಲಿ 368.93 ಕೋಟಿ ರೂಪಾಯಿಗಳಷ್ಟಿತ್ತು ಎಂದು ಕಾಫಿ ಡೇ ಗ್ಲೋಬಲ್ ಲಿಮಿಟೆಡ್​​​ ಹೇಳಿದೆ.

ಕೊರೊನಾ ಸೋಂಕಿನಿಂದಾಗಿ ಲಾಕ್​ಡೌನ್ ಜಾರಿಯಾದ ಕಾರಣದಿಂದ ಮಾರ್ಚ್ 2020ರಿಂದ ಕಾಫಿ ಡೇ ಗ್ಲೋಬಲ್ ವಹಿವಾಟನ್ನು ಮುಚ್ಚಿತ್ತು. ಮೊದಲ ತ್ರೈಮಾಸಿಕದಲ್ಲಿ ವ್ಯಾಪಾರ ಸಂಪೂರ್ಣ ಸ್ಥಗಿತವಾಗಿತ್ತು. ಜುಲೈ ತಿಂಗಳಿಂದ ವ್ಯಾಪಾರ ಆರಂಭವಾಗಿದ್ದು, ಸದ್ಯಕ್ಕೆ ಸುಧಾರಣೆ ಕಾಣುತ್ತಿದೆ ಎಂದು ಕಂಪನಿ ಸ್ಪಷ್ಟನೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.