ನ್ಯೂಯಾರ್ಕ್: ಒಂದೇ ಒಂದು ಆನ್ಲೈನ್ ಮೀಟಿಂಗ್ನಲ್ಲಿ ಏಕಾಏಕಿ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಬಿಟ್ಟರೆ ಹೇಗಾಗಬಹುದು? ಆ ಕೆಲಸಗಾರರ ಪರಿಸ್ಥಿತಿಯನ್ನು ಊಹಿಸುವುದು ಕಷ್ಟ. ನ್ಯೂಯಾರ್ಕ್ ಮೂಲದ ಒಂದು ಕಂಪನಿ ದಿಢೀರ್ ಎಂಬಂತೆ ಜೂಮ್ ಆನ್ಲೈನ್ ಮೀಟಿಂಗ್ನಲ್ಲಿ ತನ್ನ ಕಂಪನಿ ಉದ್ಯೋಗಿಗಳನ್ನು ತೆಗೆದುಹಾಕಿದೆ.
ಜೂಮ್ ಕರೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ ಬಾಸ್:
ಕೊರೊನಾದಿಂದ ಅನೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದು ಕಂಪನಿಯ ಸ್ಥಿತಿಯನ್ನು ಚರ್ಚಿಸಲು Better.com ಕಂಪನಿಯ ಮಾಲೀಕ ವಿಶಾಲ್ ಗಾರ್ಗ್ ಎಂಬುವರು ಜೂಮ್ ಆನ್ಲೈನ್ ಮೀಟಿಂಗ್ ಕರೆದಿದ್ದರು. ಆದರೆ, ಕಂಪನಿ ಬಗ್ಗೆ ಚರ್ಚಿಸದೇ ಇದ್ದಕ್ಕಿದ್ದಂತೆ ಅಲ್ಲಿಯ 900ಕ್ಕೂ ಹೆಚ್ಚು ಕೆಲಸಗಾರರನ್ನು ಅದೇ ಆನ್ಲೈನ್ ಮೀಟಿಂಗ್ನಲ್ಲೇ ತೆಗೆದುಹಾಕಿದ್ದಾರೆ.
-
Vishal Garg: “I wish I didn’t have to lay off 900 of you over a zoom call but I’m gonna lay y’all off right before the holidays lmfaooo”pic.twitter.com/6bxPGTemEG
— litquidity (@litcapital) December 5, 2021 " class="align-text-top noRightClick twitterSection" data="
">Vishal Garg: “I wish I didn’t have to lay off 900 of you over a zoom call but I’m gonna lay y’all off right before the holidays lmfaooo”pic.twitter.com/6bxPGTemEG
— litquidity (@litcapital) December 5, 2021Vishal Garg: “I wish I didn’t have to lay off 900 of you over a zoom call but I’m gonna lay y’all off right before the holidays lmfaooo”pic.twitter.com/6bxPGTemEG
— litquidity (@litcapital) December 5, 2021
ಕೆಲವು ಅನಿವಾರ್ಯ ಕಾರಣಗಳಿಂದ ಕೆಲವರನ್ನು ಕಂಪನಿಯಿಂದ ವಜಾ ಮಾಡಬೇಕಾಗಿದೆ. ಆ ನತದೃಷ್ಟರು ನಿಮ್ಮ ನಡುವೆಯೂ ಇದ್ದಾರೆ. ಈಗಾಗಲೇ ಶೇ 9ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದಿದ್ದಾರೆ. ಕಂಪನಿ ಮಾಲೀಕ ವಿಶಾಲ್ ಅವರ ದಿಢೀರ್ ಆದೇಶಕ್ಕೆ ಜೂಮ್ ಆನ್ಲೈನ್ ಮೀಟಿಂಗ್ಗೆ ಹಾಜರಾಗಿದ್ದವರಿಗೆಲ್ಲ ಶಾಕ್ ಆಗಿದೆ.
ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಕೆವಿನ್ ರಯಾನ್ ಈ ಕುರಿತು ಪ್ರತಿಕ್ರಿಯಿಸಿದ್ದು, ಮಾರುಕಟ್ಟೆಯಲ್ಲಿ ದಿನನಿತ್ಯ ಬರುತ್ತಿರುವ ಪ್ರಮುಖ ಬದಲಾವಣೆಗಳಿಂದಾಗಿ ಇದು ನಮಗೆ ಅನಿವಾರ್ಯವಾಗಿತ್ತು. ಹಾಗಾಗಿ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಗೂಗಲ್ ಶೀಟ್ ಬಗ್ಗೆ ಪಾಠ ಮಾಡುವ ಈ ಸುಂದರಿಯ ಸಂಬಳ ಎಷ್ಟು ಗೊತ್ತಾ?