ETV Bharat / business

ತಪ್ಪು ಜಾಹೀರಾತು ಕೊಟ್ಟ ಕಂಪನಿ, ಸೆಲೆಬ್ರಿಟಿಗೆ 5 ವರ್ಷ ಜೈಲು, 50 ಲಕ್ಷ ರೂ. ದಂಡ! - misleading advertisements

ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಗ್ರಾಹಕ ಸಂರಕ್ಷಣಾ ಮಸೂದೆ 2019 ಮಂಡಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಹಕರನ್ನು ದಾರಿ ತಪ್ಪಿಸುವ ಜಾಹೀರಾತು ನೀಡಿದ ತಯಾರಕರು ಹಾಗೂ ಸೆಲೆಬ್ರಿಟಿಗಳಿಗೆ ನೂತನ ಮಸೂದೆ ಅನ್ವಯ ಗರಿಷ್ಠ ಐದು ವರ್ಷ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ಗಳ ದಂಡವನ್ನು ವಿಧಿಸಬಹುದಾಗಿದೆ. ಇದು ಗ್ರಾಹಕರ ಹಕ್ಕುಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಕಾಯ್ದೆ ಎಂದು ಹೇಳಿದರು.

ಸಾಂದರ್ಭಿಕ ಚಿತ್ರ
author img

By

Published : Jul 31, 2019, 7:30 PM IST

ನವದೆಹಲಿ: ಗ್ರಾಹಕ ಮತ್ತು ಖರೀದಿದಾರರನ್ನು ದಾರಿ ತಪ್ಪಿಸುವ ಅಥವಾ ತಪ್ಪು ದಾರಿಗೆ ಎಳೆಯುವ ಜಾಹೀರಾತು ನೀಡಿದ ಸೆಲೆಬ್ರಿಟಿ ಹಾಗೂ ಉತ್ಪಾದಕರಿಗೆ ಗರಿಷ್ಠ 5 ವರ್ಷ ಜೈಲು ಹಾಗೂ 50 ಲಕ್ಷ ರೂ. ದಂಡ ವಿಧಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.

ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಗ್ರಾಹಕ ಸಂರಕ್ಷಣಾ ಮಸೂದೆ 2019 ಮಂಡಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಹಕರನ್ನು ದಾರಿ ತಪ್ಪಿಸುವ ಜಾಹೀರಾತು ನೀಡಿದ ತಯಾರಕರು ಹಾಗೂ ಸೆಲೆಬ್ರಿಟಿಗಳಿಗೆ ನೂತನ ಮಸೂದೆ ಅನ್ವಯ ಗರಿಷ್ಠ ಐದು ವರ್ಷ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ಗಳ ದಂಡವನ್ನು ವಿಧಿಸಬಹುದಾಗಿದೆ. ಇದು ಗ್ರಾಹಕರ ಹಕ್ಕುಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಕಾಯ್ದೆ ಎಂದು ಹೇಳಿದರು.

ತಯಾರಕರು ಮತ್ತು ಸೇವಾ ಪೂರೈಕೆದಾರರು ತಪ್ಪಿತಸ್ಥರೆಂದು ಸಾಬೀತಾದರೆ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷ ಹಾಗೂ 10 ರೂ. ದಂಡ ಹಾಕಲಾಗುತ್ತದೆ. ಸೆಲೆಬ್ರಿಟಿಗಳು ಇಂತಹ ಜಾಹೀರಾತಿನಲ್ಲಿ ಕಾಣಿಸಿಕೊಂಡು ಪ್ರಚಾರ ನೀಡಿದ್ದಲ್ಲಿ 10 ಲಕ್ಷ ರೂ. ದಂಡ ತೆರಬೇಕಾಗುತ್ತದೆ. ಮತ್ತೆ ಇದು ಪುನರಾವರ್ತನೆಯಾದರೆ ₹ 50 ಲಕ್ಷದವರೆಗೆ ದಂಡ ಮತ್ತು ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಜೊತೆಗೆ ಸೆಲಿಬ್ರಿಟಿಗಳನ್ನು ಒಂದು ವರ್ಷದವರೆಗೆ ಜಾಹೀರಾತುಗಳಿಂದ ನಿಷೇಧಿಸಬಹುದು. ಮತ್ತೆ ಮತ್ತೆ ತಪ್ಪು ಎಸಗಿದರೆ ನಿಷೇಧವನ್ನು ಮೂರು ವರ್ಷಗಳವರೆಗೆ ವಿಸ್ತರಿಸಬಹುದು ಎಂದು ಮಸೂದೆಯಲ್ಲಿ ಹೇಳಲಾಗಿದೆ.

ಗ್ರಾಹಕ ಸಂರಕ್ಷಣಾ ಮಸೂದೆ 2019ರ ಅನ್ವಯ, ದೂರದರ್ಶನ, ರೆಡಿಯೋ, ಟೆಲಿಮಾರ್ಕೆಟಿಂಗ್, ಇ-ಕಾಮರ್ಸ್, ಮುದ್ರಣ, ಹೊರಾಂಗಣ ಜಾಹೀರಾತುಗಳು ಮತ್ತು ನೇರ ಮಾರಾಟ ಸೇರಿದಂತೆ ಮಾಧ್ಯಮಗಳಲ್ಲಿ ಪ್ರಸಾರ ಆಗುವ ದಾರಿ ತಪ್ಪಿಸುವಂತಹ ಜಾಹೀರಾತುಗಳು ಈ ಮಸೂದೆಯ ವ್ಯಾಪ್ತಿಗೆ ಬರುತ್ತವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.