ETV Bharat / business

ಭಾರತಕ್ಕೆ ಚೀನಾ ಗಾರ್ಮೆಂಟ್​ ಕಂಪನಿಗಳ ಸ್ಥಳಾಂತರ; ವಿಯೆಟ್ನಾಂ, ಬಾಂಗ್ಲಾ ಪ್ರಬಲ ಪ್ರತಿಸ್ಪರ್ಧಿ

ಉದ್ಯಮಿಗಳು ತಮ್ಮ ಉತ್ಪಾದನಾ ನೆಲೆಯನ್ನು ಚೀನಾದಿಂದ ಹೊರಗೆ ಸ್ಥಳಾಂತರಿಸಲು ಬಯಸಿದ್ದಾರೆ. ಭಾರತ ಅವರನ್ನು ಆಕರ್ಷಿಸುವ ಪ್ರಬಲ ಸ್ಥಾನದಲ್ಲಿದೆ. ಚೀನಾವನ್ನು ತೊರೆಯುವ ದೇಶಗಳು ಭಾರತದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಲಿವೆ. ಇದು ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಹೆಚ್ಚಿಸುವ ನಿರೀಕ್ಷೆಯಿದ್ದು, ಮುಖ್ಯವಾಗಿ ನೇಯ್ಗೆ ಮತ್ತು ರೆಡಿಮೇಡ್ ಗಾರ್ಮೆಂಟ್ ಕ್ಷೇತ್ರಕ್ಕೆ ವರದಾನವಾಗಲಿದೆ.

garment sector
ಗಾರ್ಮೆಂಟ್
author img

By

Published : Jul 6, 2020, 9:09 PM IST

ಚೆನ್ನೈ: ಇಡೀ ಜಗತ್ತನ್ನು ಆವರಿಸಿರುವ ಕೊರೊನಾ ವೈರಸ್​ನ ಉಗಮ ಸ್ಥಾನವಾದ ಚೀನಾ ವಿರುದ್ಧ ವಿಶ್ವ ಸಮುದಾಯ ತಿರುಗಿ ಬಿದ್ದಿವೆ. ಬೀಜಿಂಗ್‌ನೊಂದಿಗಿನ ತಮ್ಮ ವ್ಯಾಪಾರ ಸಂಬಂಧಗಳ ಬಗ್ಗೆ ಪುನರ್ವಿಮರ್ಶಿಸುವ ಒತ್ತಡಕ್ಕೆ ಒಳಗಾಗಿವೆ. ಚೀನಾದ ಮೇಲೆ ಅನುಮಾನ ಮತ್ತು ಅಪನಂಬಿಕೆ ಹೆಚ್ಚುತ್ತಿದ್ದು, ಅದಾಗಿಯೂ ವಿಶ್ವದ ಇತರ ಭಾಗಗಳೊಂದಿಗೆ ವ್ಯಾಪಾರ ಪಾಲುದಾರನಾಗಿ ಡ್ರ್ಯಾಗನ್​ ಮುಂದುವರೆದಿದೆ.

ಚೀನಾದ ವುಹಾನ್ ಪ್ರಾಂತ್ಯದಿಂದ ಸಾಂಕ್ರಾಮಿಕ ರೋಗ ಹರಡಿರುವ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಕೋರಿ ಚೀನಾದ ಮಿತ್ರರಾಷ್ಟ್ರಗಳು ತನ್ನೊಂದಿಗೆ ಸೇರಿಕೊಂಡಿದ್ದಾರೆ ಎಂದು ಅಮೆರಿಕ ಬೀಜಿಂಗ್ ವಿರುದ್ಧ ಧ್ವನಿ ಎತ್ತುತ್ತಿದೆ. ಜೊತೆಗೆ ಸಾಂಕ್ರಾಮಿಕ ರೋಗದ ಬಗ್ಗೆ ಸಮಯಕ್ಕೆ ಸರಿಯಾಗಿ ಚೀನಾ ವಿಶ್ವಕ್ಕೆ ಎಚ್ಚರಿಕೆ ನೀಡಲಿಲ್ಲ ಎಂದಿದೆ.

ಇದರ ಪರಿಣಾಮವಾಗಿ ಉದ್ಯಮಿಗಳು ತಮ್ಮ ಉತ್ಪಾದನಾ ನೆಲೆಯನ್ನು ಚೀನಾದಿಂದ ಹೊರಗೆ ಸ್ಥಳಾಂತರಿಸಲು ಬಯಸಿದ್ದಾರೆ. ಭಾರತ ಅವರನ್ನು ಆಕರ್ಷಿಸುವ ಪ್ರಬಲ ಸ್ಥಾನದಲ್ಲಿದೆ. ಚೀನಾವನ್ನು ತೊರೆಯುವ ದೇಶಗಳು ಭಾರತದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಲಿವೆ. ಇದು ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಹೆಚ್ಚಿಸುವ ನಿರೀಕ್ಷೆಯಿದ್ದು, ಮುಖ್ಯವಾಗಿ ನೇಯ್ಗೆ ಮತ್ತು ರೆಡಿಮೇಡ್ ಗಾರ್ಮೆಂಟ್ ಕ್ಷೇತ್ರಕ್ಕೆ ವರದಾನವಾಗಲಿದೆ.

ಭಾರತವು ಚೀನಾ ವಿರುದ್ಧ ಸಂಪೂರ್ಣ ವ್ಯವಹಾರವನ್ನು ಭದ್ರಪಡಿಸುವಂತಹ ಅವಕಾಶ ಇರುವ ಸಂದರ್ಭ ಒದಗಿ ಬಂದಿದ್ದರೂ, ಅದನ್ನು ಸಾಕಾರಗೊಳಿಸಲು ಬೇಕಾದ ಅಗತ್ಯ ಸಂಪನ್ಮೂಲಗಳು ದೇಶದಲ್ಲಿಲ್ಲ. ನಮ್ಮಲ್ಲಿ ತರಬೇತಿ ಪಡೆದ ಮಾನವಶಕ್ತಿ ಮತ್ತು ಉತ್ಪಾದನಾ ಸಾಮರ್ಥ್ಯವಿಲ್ಲದಿರುವುದೇ ಇದಕ್ಕೆ ಕಾರಣ ಎಂದು ತಿರುಪುರ ರಫ್ತುದಾರರ ಸಂಘದ (ಟಿಇಎ) ಅಧ್ಯಕ್ಷ ರಾಜಾ ಷಣ್ಮುಖಂ ಹೇಳಿದರು.

ಚೀನಾ ಜಾಗತಿಕ ವಸ್ತ್ರ ನೇಯ್ಗೆ ಮಾರುಕಟ್ಟೆಯಲ್ಲಿ ಶೇ 39 ರಷ್ಟು ಬೃಹತ್ ಪಾಲು ಹೊಂದಿದೆ. ಇದಕ್ಕೆ ಹೋಲಿಸಿದರೆ ಭಾರತದ ಪಾಲು ಅಲ್ಪವಾಗಿದ್ದು, ಶೇ 3.8 ರಷ್ಟಿದೆ. ಚೀನಾದ ಹೊರಗೆ ವ್ಯಾಪಾರ ಮಾಡಬಯಸುವ ಪಾಲುದಾರರನ್ನು ಆಕರ್ಷಿಸುವಲ್ಲಿ ವಿಯೆಟ್ನಾಂ ಮತ್ತು ಬಾಂಗ್ಲಾದೇಶ ಭಾರತಕ್ಕಿಂತ ಉತ್ತಮವಾಗಿವೆ. ಆ ದೇಶಗಳ ಉಡುಪು ಉತ್ಪಾದನಾ ವಲಯ ಉತ್ತಮ ಸೌಕರ್ಯಗಳನ್ನು ಹೊಂದಿದೆ. ಆ ರಾಷ್ಟ್ರಗಳ ಸರ್ಕಾರಗಳು ಅನೇಕ ರಿಯಾಯಿತಿಗಳನ್ನು ಕೂಡ ಈ ವಲಯಕ್ಕೆ ನೀಡಿವೆ. ಇದರಿಂದಾಗಿ ಉದ್ಯಮವು ಸ್ಪರ್ಧಾತ್ಮಕವಾಗಿರುತ್ತದೆ ಎಂದು ಅವರು ವಿಶ್ಲೇಷಿಸಿದರು.

ಪಾಶ್ಚಿಮಾತ್ಯ ರಾಷ್ಟ್ರಗಳು ಚೀನಾವನ್ನು ಹಿಮ್ಮೆಟ್ಟಿಸುತ್ತವೆ. ಬಾಂಗ್ಲಾದೇಶ ಮತ್ತು ವಿಯೆಟ್ನಾಂನಿಂದ ಉಳಿದದ್ದನ್ನು ಮಾತ್ರ ನಾವು ಪಡೆಯುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.