ETV Bharat / business

ಚೀನಾದಿಂದ ಮುತ್ತು, ಚಿನ್ನಾಭರಣ ಖರೀದಿ ನಿಲ್ಲಿಸಿದ ಬೆಂಗಳೂರಿನ ಪ್ರತಿಷ್ಠಿತ ಜ್ಯುವೆಲ್ಲರ್ಸ್​

ಕಳೆದ ವಾರ ಲಡಾಖ್‌ ಗಡಿಯಲ್ಲಿ ಚೀನಾ-ಭಾರತ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಕನಿಷ್ಠ 20 ಯೋಧರು ಹುತಾತ್ಮರಾಗಿದ್ದರು. ಈ ನಂತರ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಕೂಗು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ..

China India
ಚೀನಾ ಭಾರತ
author img

By

Published : Jun 22, 2020, 9:28 PM IST

ಬೆಂಗಳೂರು : ಚೀನಿ ಮೂಲದ ಮುತ್ತುಗಳ ಆಮದು ಮಾಡಿಕೊಳ್ಳೋದನ್ನ ರಾಜ್ಯದ ಬೆಂಗಳೂರು ಮೂಲದ ಸಿ ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್‌ ನಿಲ್ಲಿಸಿದೆ. ಅದರ ಬದಲಾಗಿ ನೆರೆಯ ದೇಶದಿಂದ ಮುತ್ತುಗಳನ್ನ ತರಿಸಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಕೂಡ ಚೀನಾ ಮೂಲದ ಆಮದನ್ನು ನಿರುತ್ಸಾಹಗೊಳಿಸಬೇಕೆಂದು ಒತ್ತಾಯಿಸಿದೆ.

150 ವರ್ಷಗಳಷ್ಟು ಹಳೆಯದಾದ ಆಭರಣ ಗ್ರೂಪ್​, ಚೀನಿ ಮೂಲದ ಮುತ್ತುಗಳ ಸಂಗ್ರಹಣೆ ಮತ್ತು ಬಳಕೆ ನಿಲ್ಲಿಸುತ್ತಿದೆ. ಬದಲಾಗಿ ಜಪಾನ್​, ವೆನೆಜುವೆಲಾದ ಅಥವಾ ಭಾರತೀಯ ಮುತ್ತುಗಳನ್ನು ಬಳಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವಾರ ಲಡಾಖ್‌ ಗಡಿಯಲ್ಲಿ ಚೀನಾ-ಭಾರತ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಕನಿಷ್ಠ 20 ಯೋಧರು ಹುತಾತ್ಮರಾಗಿದ್ದರು. ಈ ನಂತರ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಕೂಗು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಚೀನಿ ವಸ್ತುಗಳನ್ನ ನಿಷೇಧಿಸಿ ಇಲ್ಲವೇ ಸುಂಕ ಏರಿಕೆ ಮಾಡಿ ಎಂದು ನೆಟ್ಟಿಗರು ಕೇಂದ್ರವನ್ನು ಆಗ್ರಹಿಸಿದ್ದರು.

ಚೀನಿ ಮುತ್ತುಗಳು ಹೆಚ್ಚು ಅಗ್ಗ ಮತ್ತು ಸಮೃದ್ಧವಾಗಿವೆ. ಆ ಲಾಭದಾಯಕ ಮತ್ತು ಈ ಆಮದು ಚಟುವಟಿಕೆ ನಿರುತ್ಸಾಹಗೊಳಿಸಲು ಆಮದು ಸುಂಕ ಹೆಚ್ಚಿಸಬೇಕು. ಜಾಗತಿಕ ಸಾಂಕ್ರಾಮಿಕ ರೋಗದ ಹಿಂದೆ ಚೀನಾದ ಕೈವಾಡದ ಸಾಧ್ಯತೆಯಿದೆ. ಭಾರತೀಯ ಆಭರಣಗಳಿಂದ ಚೀನಿ ರತ್ನಗಳ ಬಳಕೆಯನ್ನು ನಾವು ಸಂಪೂರ್ಣ ನಿಷೇಧಿಸುತ್ತೇವೆ ಎಂದು ಜ್ಯುವೆಲ್ಲರಿ ಗ್ರೂಪ್​ನ ಎಂಡಿ/ ನಿರ್ದೇಶಕ ಸಿ ವಿನೋದ್ ಹಯಾಗ್ರಿವ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.