ETV Bharat / business

ಐಸಿಯುನಲ್ಲಿ ದಾಖಲಾದ 'ಗೂಳಿ'; ಸೆನ್ಸೆಕ್ಸ್‌ ಕುಸಿತಕ್ಕೆ ಇಲ್ಲಿದೆ ಐದು ಕಾರಣಗಳು!

ಕೊರೊನಾವನ್ನು ಸಾಂಕ್ರಾಮಿಕ ರೋಗ ಎಂದು ವಿಶ್ಚ ಆರೋಗ್ಯ ಸಂಸ್ಥೆಯಿಂದ ಘೋಷಣೆ, ಯುರೋಪ್​ ರಾಷ್ಟ್ರಗಳ ಮೇಲೆ ಅಮೆರಿಕ ಹೇರಿದ ಪ್ರಯಾಣ ನಿಷೇಧದ ಬಳಿಕ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರಿ ಏರಿಳಿತವಾಗಿದೆ. ಸೆನ್ಸೆಕ್ಸ್​ ಭಾರಿ ಕುಸಿತದೊಂದಿಗೆ ಗೂಳಿ ಐಸಿಯು ಸೇರಿದೆ. ಮಾರುಕಟ್ಟೆಯ ಈ ಅಲ್ಲೋಲ ಕಲ್ಲೋಲಗಳಿಗೆ ಕಾರಣವೇನು ಗೊತ್ತಾ?

Bulls in ICU
ಸೆನ್ಸೆಕ್ಸ್‌ ಕುಸಿತ
author img

By

Published : Mar 12, 2020, 2:23 PM IST

ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿ ಭಾರಿ ಏರಿಳಿತವಾಗಿದೆ. ಸೆನ್ಸೆಕ್ಸ್​ ಭಾರಿ ಕುಸಿತದೊಂದಿಗೆ ಗೂಳಿ ಐಸಿಯು ಸೇರಿದೆ.

BSE(ಬಾಂಬೇ ಸ್ಟಾಕ್​ ಎಕ್ಸ್​ಚೇಂಜ್​) ಸೆನ್ಸೆಕ್ಸ್ 2,400 ಅಂಕಗಳ ಕುಸಿತ ಕಂಡು 33,302 ಕ್ಕೆ ಬಂದು ತಲುಪಿದ್ದರೆ, NSE(ನ್ಯಾಷನಲ್​ ಸ್ಟಾಕ್​ ಎಕ್ಸ್​ಚೇಂಜ್​) ನಿಫ್ಟಿ 730 ಪಾಯಿಂಟ್‌ಗಳ ಕುಸಿತದೊಂದಿಗೆ 9,727ರಲ್ಲಿ ವಹಿವಾಟು ನಡೆಸಿದೆ.

ಈ ಷೇರುಗಳ ಕುಸಿತವು 10.98 ಲಕ್ಷ ಕೋಟಿ ರೂ. ಈಕ್ವಿಟಿ ಹೂಡಿಕೆದಾರರ ಸಂಪತ್ತನ್ನು ಕೆಲವೇ ಸೆಕೆಂಡುಗಳಲ್ಲಿ ಅಳಿಸಿಹಾಕಿದೆ. ಮಾರುಕಟ್ಟೆಯ ಈ ಅಲ್ಲೋಲ ಕಲ್ಲೋಲಗಳಿಗೆ ಕಾರಣವೇನು ಗೊತ್ತಾ?

1.ಕೊರೊನಾ ವೈರಸ್ಅನ್ನು​ ಸಾಂಕ್ರಾಮಿಕ ರೋಗವೆಂದು ಘೋಷಿಸಿದ WHO...

ವಿಶ್ವ ಆರೋಗ್ಯ ಸಂಸ್ಥೆ(WHO)ಯು ಕೊರೊನಾ ವೈರಸ್​ಅನ್ನು ಜಾಗತಿಕ ಸಾಂಕ್ರಾಮಿಕ ರೋಗವೆಂದು ಘೋಷಿಸಿತು. ಇದು ವಿಶ್ವದಾದ್ಯಂತ ಮಾರುಕಟ್ಟೆಗಳಲ್ಲಿ ಎಚ್ಚರಿಕೆಯ ಶಬ್ಧವಾಗಿ ಪರಿಣಮಿಸಿದೆ. ಈ ಸಾಂಕ್ರಾಮಿಕ ರೋಗವು ಹೆಚ್ಚಿನ ದೇಶಗಳ ಮೇಲೆ ಪರಿಣಾಮ ಬೀರುತ್ತಿದೆ. ಇದು ಮಾರುಕಟ್ಟೆ ಏರಿಳಿತಕ್ಕೆ ಕಾರಣವಾಗಿದೆ

"ಸಾಂಕ್ರಾಮಿಕ ರೋಗ ಎಂಬುವುದು ಲಘುವಾಗಿ ಅಥವಾ ಅಜಾಗರೂಕತೆಯಿಂದ ಬಳಸುವ ಪದವಲ್ಲ" ಎಂದು WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ. ಆದರೆ ಪರಿಸ್ಥಿತಿಯನ್ನು ಸಾಂಕ್ರಾಮಿಕ ಎಂದು ವಿವರಿಸುವುದರಿಂದ ವೈರಸ್‌ನಿಂದ ಉಂಟಾಗುವ ಭೀತಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮೌಲ್ಯಮಾಪನವು ಬದಲಾಗುವುದಿಲ್ಲ ಎಂಬುದನ್ನು ಅವರು ಒತ್ತಿ ಹೇಳಿದರು.

ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1,24,000 ಕ್ಕಿಂತ ಹೆಚ್ಚಾಗಿದೆ. ಚೀನಾ, ಇರಾನ್,ಇಟಲಿ ಸೇರಿದಂತೆ 4,500 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

2. ಯುರೋಪ್​ಗೆ ಪ್ರಯಾಣ ನಿರ್ಬಂಧ ವಿಧಿಸಿದ ದೊಡ್ಡಣ್ಣ...

ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ವೈರಸ್​ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕೋವಿಡ್ -19 ಹರಡುವ ಭೀತಿಯಿಂದಾಗಿ ಯುರೋಪಿನಿಂದ ಅಮೆರಿಕಕ್ಕೆ 30 ದಿನಗಳ ಪ್ರಯಾಣ ನಿಷೇಧವನ್ನು ಘೋಷಿಸಿದರು. ವ್ಯವಹಾರದ ಸುಗಮ ಕಾರ್ಯನಿರ್ವಹಣೆಗೆ ಈ ನಿರ್ಬಂಧ ಭೀತಿ ತಂದಿದೆ.

ಆದರೆ, ಈ ನಿರ್ಬಂಧಗಳಿಂದ ವ್ಯಾಪಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಅದಾಗ್ಯೂ ಹೂಡಿಕೆದಾರರು ಮಾತ್ರ ವ್ಯವಹಾರ ಹಾಗೂ ಜಾಗತಿಕ ಆರ್ಥಿಕತೆಗೆ ಈ ನಿರ್ಬಂಧ ಹೆಚ್ಚಿನ ಅಡೆತಡೆಗಳನ್ನು ಎದುರಿಸೋ ಭೀತಿಯಲ್ಲಿದ್ದಾರೆ.

3.ಅಡೆತಡೆಯಿಲ್ಲದೆ ಮುಂದುವರಿದ ಎಫ್‌ಐಐ ಮಾರಾಟ

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (Foreign institutional investors) ಭಾರತೀಯ ಷೇರುಗಳ ಮಾರಾಟವನ್ನು ಮುಂದುವರೆಸಿದ್ದಾರೆ. ಮಾರ್ಚ್‌ ತಿಂಗಳೊಂದರಲ್ಲೇ ಅವರು ದೇಶೀಯ ಮಾರುಕಟ್ಟೆಗಳಿಂದ 20,831 ಕೋಟಿ ರೂ. ಹಿಂತೆಗೆದುಕೊಂಡಿದ್ದಾರೆ. ಫೆಬ್ರವರಿ 24 ರಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಪ್ರತಿದಿನ ನಿವ್ವಳ ಮಾರಾಟಗಾರರಾಗಿದ್ದಾರೆ ಎಂದು ಎನ್‌ಎಸ್‌ಇ ದತ್ತಾಂಶ ತಿಳಿಸಿದೆ.

ಇಟಿಎಫ್ ವಿಮೋಚನೆಯಿಂದಾಗಿ ಮಾರಾಟವು ಹೆಚ್ಚಾಗಿ ಸಂಭವಿಸಿದೆ ಎಂದು ದಲಾಲ್ ಸ್ಟ್ರೀಟ್ ತಜ್ಞರು ವಾದಿಸಿದ್ದಾರೆ. ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ದಿವಾಳಿಯಾಗಿಸುವುದರೊಂದಿಗೆ, ಹಣದ ವ್ಯವಸ್ಥಾಪಕರು ಮಾರಾಟ ಮಾಡಲು ಒತ್ತಾಯಿಸಲ್ಪಟ್ಟಿದ್ದಾರೆ. ಇದು ದೇಶೀಯ ಷೇರುಗಳ ಮೇಲೆ ಮತ್ತಷ್ಟು ಒತ್ತಡವನ್ನು ಬೀರುತ್ತಿದೆ ಎಂದು ಹೇಳಲಾಗಿದೆ.

4.ಬಾಂಡ್ ಮಾರುಕಟ್ಟೆಯಲ್ಲಿ ಅನಿಶ್ಚಿತತೆ!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೆಲವು ಪ್ರತಿಕೂಲ ಪ್ರಸ್ತಾಪದಿಂದಾಗಿ ಬಾಂಡ್ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯು ಹೂಡಿಕೆದಾರರನ್ನು ಕೆರಳಿಸಿದೆ. YES ಬ್ಯಾಂಕ್​ NSE -11.81% ಅನ್ನು ಪುನರ್​ರಚಿಸುವ ಕರಡು ಯೋಜನೆಯಲ್ಲಿ ಬ್ಯಾಂಕಿಂಗ್ ನಿಯಂತ್ರಕವು ಹೆಚ್ಚುವರಿ ಶ್ರೇಣಿ I (AT1) ಬಾಂಡ್‌ಗಳನ್ನು ಬರೆಯಲು ಪ್ರಸ್ತಾಪಿಸಿರುವುದು ಹಣ ವ್ಯವಸ್ಥಾಪಕರನ್ನು ಆಶ್ಚರ್ಯಗೊಳಿಸಿತು.

ಆರ್‌ಬಿಐ ತನ್ನ ಪ್ರಸ್ತಾಪಗಳೊಂದಿಗೆ ಹೋದರೆ ಅನೇಕ ಮ್ಯೂಚುವಲ್ ಫಂಡ್ ಹೂಡಿಕೆದಾರರು ನಷ್ಟ ಅನುಭವಿಸುತ್ತಾರೆ. ಆರ್‌ಬಿಐ ಯಾವುದೇ ಪರಿಹಾರ ನೀಡದಿದ್ದಲ್ಲಿ ಎಟಿ1 ಬಾಂಡ್ ಮಾರುಕಟ್ಟೆ ಬೀಳಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.

"PNB ಯಿಂದ ಪ್ರಾರಂಭಗೊಂಡು, IL&FS, DHFL ಮತ್ತು PMC ಬ್ಯಾಂಕ್​ನಲ್ಲಿ ಉಲ್ಬಣಗೊಳ್ಳುತ್ತಿರುವ ಸರಣಿಯ ಬಿಕ್ಕಟ್ಟುಗಳಿಂದಾಗಿ ಭಾರತದ ಹಣಕಾಸು ವ್ಯವಸ್ಥೆಯು ತೀವ್ರ ಒತ್ತಡಕ್ಕೆ ಸಿಲುಕಿದೆ. ಇದು ಸಾಲದೆಂಬಂತೆ ಈಗ YES ಬ್ಯಾಂಕಿನ ಪೂರ್ಣ ಪ್ರಮಾಣದ ಬಿಕ್ಕಟ್ಟಿನೊಂದಿಗೆ ಪರಿಸ್ಥಿತಿ ಗಂಭೀರವಾಗಿದೆ. ಲೆಕ್ಕಪರಿಶೋಧನೆ, ಕ್ರೆಡಿಟ್ ರೇಟಿಂಗ್ ಮತ್ತು ನಿಯಂತ್ರಕ ಮೇಲ್ವಿಚಾರಣೆಯಲ್ಲಿನ ಅಸಮರ್ಪಕತೆ ಸೇರಿದಂತೆ ತಪ್ಪುಗಳು ಮತ್ತು ವೈಫಲ್ಯಗಳಿಂದ ನಾವು ಕಲಿಯುತ್ತೇವೆ "ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ.ವಿಜಯ್‌ಕುಮಾರ್ ಹೇಳಿದ್ದಾರೆ.

5.ಜಾಗತಿಕ ಮಾರುಕಟ್ಟೆ ಮಾರಾಟ

ಜಪಾನ್‌ನ ಹೊರಗಿನ ಏಷ್ಯಾ ಪೆಸಿಫಿಕ್ ಷೇರುಗಳ MSCIನ ಬ್ರಾಡೆಸ್ಟ್​ ಸೂಚ್ಯಂಕವು 2019 ರ ಆರಂಭದಿಂದೀಚೆಗೆ ಶೇಕಡಾ 4.1 ರಷ್ಟು ಕುಸಿದಿದ್ದರೆ, ಜಪಾನ್‌ನ ನಿಕ್ಕಿ ಶೇಕಡಾ 5.3 ರಷ್ಟು ಕುಸಿದಿದೆ. ದಕ್ಷಿಣ ಕೊರಿಯಾದ ಕೋಸ್ಪಿ ಸಹ ಶೇ 4.16 ರಷ್ಟು ಕುಸಿದಿದೆ. ಶಾಂಘೈ ಕಾಂಪೋಸಿಟ್ ಶೇ. 0.96 ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಶೇಕಡಾ 3.59 ರಷ್ಟು ಕುಸಿದಿದೆ.

ಡೌ ಜೋನ್ಸ್ ಕೈಗಾರಿಕಾ ಸರಾಸರಿಯು 1,464.94 ಅಂಕಗಳು ಅಥವಾ ಶೇ. 5.86 ರಷ್ಟು ಕುಸಿದು 23,553.22 ಕ್ಕೆ ತಲುಪಿ ಕರಡಿ ಮಾರುಕಟ್ಟೆಯನ್ನು ಪ್ರವೇಶಿಸಿತು. S&P 500, 140.85 ಅಂಕಗಳು ಅಥವಾ ಶೇ 4.89 ಕಳೆದುಕೊಂಡು, 2,741.38 ಕ್ಕೆ ಬಂದು ತಲುಪಿದೆ. ಇನ್ನೊಂದೆಡೆ ನಾಸ್ಡಾಕ್ ಕಾಂಪೊಸಿಟ್ 392.20 ಅಂಕಗಳನ್ನು ಕಳೆದುಕೊಂಡು 7,952.05 ಕ್ಕೆ ತಲುಪಿದೆ.

ಈ ಎಲ್ಲಾ ಕಾರಣಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸಂಭವಿಸಿದ್ದು, ಹೂಡಿಕೆದಾರರು ಮಾರುಕಟ್ಟೆ ಮೇಲೇಳಲು ಇಲ್ಲದ ಕಸರತ್ತು ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.