ನವದೆಹಲಿ: ಕೋಟ್ಯಂತರ ಜನರಿಗೆ ಲಸಿಕೆ ನೀಡಲು ಭಾರತ ಸಜ್ಜಾಗುತ್ತಿದ್ದಂತೆ, ತನ್ನ ರಾಷ್ಟ್ರಕ್ಕೂ ಲಸಿಕೆ ಸಾಗಣೆಗೆ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಬ್ರೆಜಿಲ್ ಭಾರತಕ್ಕೆ ಪತ್ರ ಬರೆದಿದೆ.
ಕೊರೊನಾ ವೈರಸ್ ಲಸಿಕೆಗಳನ್ನು ದೇಶಕ್ಕೆ ಸಾಗಿಸುವುದನ್ನು ತ್ವರಿತಗೊಳಿಸುವಂತೆ ಕೋರಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಅಸ್ಟ್ರಾಜೆನೆಕಾದ ಕೊರೊನಾ ವೈರಸ್ನ 2 ಮಿಲಿಯನ್ ಲಸಿಕೆ ಪ್ರಮಾಣ ರವಾನಿಸಲಾಗುತ್ತದೆ.
ನಮ್ಮ ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮದ ತಕ್ಷಣದ ಅನುಷ್ಠಾನಕ್ಕೆ ಅನುವು ಮಾಡಿಕೊಡಿಕೊಡಲು ಬ್ರೆಜಿಲ್‌ಗೆ ಲಸಿಕೆ ಸರಬರಾಜು ಮಾಡುವುದನ್ನು ನಾನು ಪ್ರಶಂಸಿಸುತ್ತೇನೆ. ಭಾರತೀಯ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಅಪಾಯವನ್ನುಂಟುಮಾಡದೇ, 2 ಮಿಲಿಯನ್ ಪ್ರಮಾಣದಲ್ಲಿ ತುರ್ತಾಗಿ ಲಸಿಕೆ ಕಳುಹಿಸುವಂತೆ ಎಂದು ಬೋಲ್ಸೊನಾರೊ ಅವರು ಭಾರತದ ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ನೀರವ್ ಮೋದಿ ಗಡಿಪಾರು ಫೆ.25ಕ್ಕೆ ನಿರ್ಧಾರ: 'ಮುಂಬೈ ಜೈಲಲ್ಲೇ ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ'
ಸಕ್ರಿಯ ಘಟಕಾಂಶವನ್ನು ಬ್ರೆಜಿಲ್‌ಗೆ ರವಾನಿಸಲು ಸಿದ್ಧವಾಗಿದೆ. ಆದರೆ, ಚೀನಾದಿಂದ ರಫ್ತು ಪರವಾನಗಿಗಾಗಿ ಕಾಯುತ್ತಿದೆ, ಅಲ್ಲಿ ಅದನ್ನು ಉತ್ಪಾದಿಸಲಾಗುತ್ತದೆ.
ಚೀನಾದ ಔಷಧೀಯ ಸಂಸ್ಥೆ ಸಿನೋವಾಕ್ ಮತ್ತು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಎರಡು ಕೋವಿಡ್ -19 ಲಸಿಕೆಗಳ ತಯಾರಕರು ಬ್ರೆಜಿಲ್‌ನಲ್ಲಿ ನಿಯಂತ್ರಕ ಅನುಮೋದನೆಗಾಗಿ ಶುಕ್ರವಾರ ಮೊದಲ ಅರ್ಜಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆಡರಲ್ ಹೆಲ್ತ್ ರೆಗ್ಯುಲೇಟರ್ ಅನ್ವಿಸಾ ಈಗ ಅರ್ಜಿಗಳಿಗೆ ಪ್ರತಿಕ್ರಿಯಿಸಲು 10 ದಿನಗಳ ಗಡುವು ತೆಗೆದುಕೊಂಡಿದೆ. ಪ್ರಾಯೋಜಕರಿಂದ ಹೆಚ್ಚಿನ ಮಾಹಿತಿಯನ್ನು ಆರೋಗ್ಯ ಪ್ರಾಧಿಕಾರ ಕೇಳಿಕೊಳ್ಳಬಹುದು. ಹತ್ತು ದಿನಗಳ ತನಕ ಕಾಯುವ ಬದಲು ಬ್ರೆಜಿಲ್ ಭಾರತದತ್ತ ಸಹಾಯದ ಹಸ್ತ ಚಾಚಿ, ಆದಷ್ಟು ಬೇಗನೆ ಲಸಿಕೆ ಕಳುಹಿಸುವಂತೆ ಪತ್ರ ಬರೆದಿದೆ.