ETV Bharat / business

ಗ್ರಾಹಕರೆ ಎಚ್ಚರ! ಈ ತಿಂಗಳ 4 ದಿನ ಬ್ಯಾಂಕ್ ಸೇವೆ ಬಂದ್, ಬೇಗ ಹಣಕಾಸಿನ ಕೆಲಸ ಮುಗಿಸಿಕೊಳ್ಳಿ..

author img

By

Published : Sep 14, 2019, 11:20 PM IST

ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿರುವುದರಿಂದ ಕರ್ನಾಟಕದಲ್ಲೂ ಬ್ಯಾಂಕ್​ಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಸೆ.25ರ ಮಧ್ಯರಾತ್ರಿಯಿಂದ 27ರ ಮಧ್ಯರಾತ್ರಿಯವರೆಗೆ ಬ್ಯಾಂಕ್​ ಸೇವೆ ಕಡಿತವಾಗಲಿದೆ. ಜೊತೆಗೆ ಸೆ.28ರಂದು 4ನೇ ಶನಿವಾರ ಹಾಗೂ 29ರಂದು ಭಾನವಾರದ ರಜೆ ಇರಲಿದೆ. ಸತತವಾಗಿ ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆ ಸ್ಥಗಿತಗೊಳ್ಳಲಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್​ಗಳ ವಿಲೀನ ವಿರೋಧಿಸಿ ನಾಲ್ಕು ಬ್ಯಾಂಕ್​ ಅಧಿಕಾರಿಗಳ ಸಂಘಗಳು ಸೆಪ್ಟೆಂಬರ್​ 26 ಮತ್ತು 27ರಂದು ಎರಡು ದಿನ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.

ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿರುವುದರಿಂದ ಕರ್ನಾಟಕದಲ್ಲೂ ಬ್ಯಾಂಕ್​ಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಸೆ.25ರ ಮಧ್ಯರಾತ್ರಿಯಿಂದ 27ರ ಮಧ್ಯರಾತ್ರಿಯವರೆಗೆ ಬ್ಯಾಂಕ್​ ಸೇವೆ ಕಡಿತವಾಗಲಿದೆ. ಜೊತೆಗೆ ಸೆ.28ರಂದು 4ನೇ ಶನಿವಾರ ಹಾಗೂ 29ರಂದು ಭಾನುವಾರದ ರಜೆ ಇರಲಿದೆ. ಸತತವಾಗಿ ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆ ಸ್ಥಗಿತಗೊಳ್ಳಲಿದೆ.

ಈ ಅವಧಿಯಲ್ಲಿ ಬ್ಯಾಂಕ್​ಗಳ ಯಾವುದೇ ಸೇವೆಗಳು ಸಾರ್ವಜನಿಕರಿಗೆ ಲಭಿಸುವುದಿಲ್ಲ. ಸೆಪ್ಟೆಂಬರ್​ 24ಕ್ಕೂ ಮೊದಲೇ ಬ್ಯಾಂಕಿಂಗ್​ ಮತ್ತು ಹಣಕಾಸು ಕೆಲಸಗಳನ್ನು ಮುಗಿಸಿಕೊಳ್ಳುವುದು ಉತ್ತಮ. ಅಗತ್ಯವಾದ ಹಣ ಇರಿಸಿಕೊಳ್ಳುವಿಕೆ, ಹಣ ಪಾವತಿ, ಮನಿ ಟ್ರಾನ್ಸ್ಪಫರ್​, ಸಾಲದ ಕಂತು ಪಾವತಿ ಸೇರಿದಂತೆ ಇತರೆ ಕೆಲಸಗಳನ್ನು ಪ್ರತಿಭಟನೆಗೂ ಮುನ್ನ ಮುಗಿಸಿಕೊಳ್ಳುವುದು ಉತ್ತಮ.

ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಇಂಡಿಯನ್​ ನ್ಯಾಷನಲ್​ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್​ (ಐಎನ್​ಬಿಒಸಿ) ಮತ್ತು ನ್ಯಾಷನಲ್​ ಆರ್ಗನೈಸೇಷನ್​ ಆಫ್ ಬ್ಯಾಂಕ್​ ಅಧಿಕಾರಿಗಳ (ನೊಬೊ) ಜಂಟಿಯಾಗಿ ಮುಷ್ಕರ ನಡೆಸಲಿವೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.