ನವದೆಹಲಿ: ಶೇಕಡಾ 100ರಷ್ಟು ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್) ಅಡಿಯಲ್ಲಿ ಮಂಜೂರು ಮಾಡಿದ 1,27,582.60 ಕೋಟಿ ರೂ.ಗಳಲ್ಲಿ ಜುಲೈ 20ರ ವೇಳೆಗೆ 77,613.06 ಕೋಟಿ ರೂ.ಗಳನ್ನು ಬ್ಯಾಂಕ್ಗಳು ವಿತರಿಸಿವೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
"ಜುಲೈ 20, 2020ರ ವೇಳೆಗೆ, ಸಾರ್ವಜನಿಕ ವಲಯದ ಮತ್ತು ಖಾಸಗಿ ಬ್ಯಾಂಕ್ಗಳು ಶೇ 100ರಷ್ಟು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯಡಿ ಮಂಜೂರು ಮಾಡಿದ ಒಟ್ಟು ಮೊತ್ತವು 1,27,582.60 ಕೋಟಿ ರೂ. ಆಗಿದ್ದು, ಅದರಲ್ಲಿ 77,613.06 ಕೋಟಿ ರೂ.ಗಳನ್ನು ಈಗಾಗಲೇ ವಿತರಿಸಲಾಗಿದೆ" ಎಂದು ಟ್ವೀಟ್ ಸಚಿವರು ಟ್ವೀಟ್ ಮಾಡಿ ಲೆಕ್ಕ ಕೊಟ್ಟಿದ್ದಾರೆ. ಅಲ್ಲದೇ ರಾಜ್ಯವಾರು ಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ.
-
Under the 100% ECLGS, the loan amounts sanctioned by Public Sector Banks increased to Rs 70,894.59 crore, of which Rs 45,797.29 crore has been disbursed as of July 20. Here are the bank-wise & State-wise details: #AatmanirbharBharat #MSMEs pic.twitter.com/tCY1PHMr2v
— NSitharamanOffice (@nsitharamanoffc) July 21, 2020 " class="align-text-top noRightClick twitterSection" data="
">Under the 100% ECLGS, the loan amounts sanctioned by Public Sector Banks increased to Rs 70,894.59 crore, of which Rs 45,797.29 crore has been disbursed as of July 20. Here are the bank-wise & State-wise details: #AatmanirbharBharat #MSMEs pic.twitter.com/tCY1PHMr2v
— NSitharamanOffice (@nsitharamanoffc) July 21, 2020Under the 100% ECLGS, the loan amounts sanctioned by Public Sector Banks increased to Rs 70,894.59 crore, of which Rs 45,797.29 crore has been disbursed as of July 20. Here are the bank-wise & State-wise details: #AatmanirbharBharat #MSMEs pic.twitter.com/tCY1PHMr2v
— NSitharamanOffice (@nsitharamanoffc) July 21, 2020
"ಶೇ100 ಇಸಿಎಲ್‌ಜಿಎಸ್ ಅಡಿಯಲ್ಲಿ, ಸಾರ್ವಜನಿಕ ವಲಯದ ಬ್ಯಾಂಕ್ಗಳು ಮಂಜೂರು ಮಾಡಿದ ಸಾಲದ ಮೊತ್ತವು 70,894.59 ಕೋಟಿ ರೂ.ಗೆ ಏರಿದೆ. ಅದರಲ್ಲಿ ಜುಲೈ 20ರವರೆಗೆ 45,797.29 ಕೋಟಿ ರೂ. ವಿತರಿಸಲಾಗಿದೆ" ಎಂದು ಮತ್ತೊಂದು ಟ್ವೀಟ್ನಲ್ಲಿ ವಿವರಣೆ ನೀಡಲಾಗಿದೆ.
ಮಂಜೂರಾದ ಸಾಲಗಳ ಒಟ್ಟು ಮೊತ್ತದಲ್ಲಿ 4,237.44 ಕೋಟಿ ರೂ.ಗಳ ಹೆಚ್ಚಳವಿದೆ ಮತ್ತು ಪಿಎಸ್‌ಬಿಗಳು ಮತ್ತು ಖಾಸಗಿ ವಲಯದ ಬ್ಯಾಂಕ್ಗಳು ವಿತರಿಸಿದ ಸಾಲಗಳ ಸಂಚಿತ ಮೊತ್ತದಲ್ಲಿ 9,301.51 ಕೋಟಿ ರೂ.ಗಳ ಹೆಚ್ಚಳವಾಗಿದೆ ಎಂದು ಸೀತಾರಾಮನ್ ಕಚೇರಿ ತಿಳಿಸಿದೆ.
ಕೋವಿಡ್-19ನಿಂದ ಉಂಟಾದ ಆರ್ಥಿಕ ಬಿಕ್ಕಟ್ಟು ಮತ್ತು ಲಾಕ್ಡೌನ್ಗೆ ಪ್ರತಿಕ್ರಿಯೆಯಾಗಿ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್) ಅನ್ನು ರೂಪಿಸಲಾಗಿದ್ದು, ಇದು ಎಂಎಸ್ಎಂಇ ವಲಯದಲ್ಲಿ ಉತ್ಪಾದನೆ ಮತ್ತು ಇತರ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ.