ಮುಂಬೈ : 2021-22ರ ಹಣಕಾಸು ವರ್ಷದ ಆರಂಭಿಕ ಏಪ್ರಿಲ್ ಮಾಸಿಕದಲ್ಲಿ ಬ್ಯಾಂಕ್ಗಳಿಗೆ ಸಾಲು ಸಾಲು ರಜೆಗಳಿವೆ. ಬ್ಯಾಂಕ್ ಗ್ರಾಹಕರು ತಮ್ಮ ಸಂಬಂಧಿತ ಶಾಖೆಗಳಿಗೆ ತೆರಳುವ ಮುನ್ನ ಒಮ್ಮೆ ಕ್ಯಾಲೆಂಡರ್ ನೋಡುವುದು ಉತ್ತಮ.
ಪ್ರತಿ ವರ್ಷವೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ದೇಶಾದ್ಯಂತದ ಎಲ್ಲಾ ಬ್ಯಾಂಕ್ಗಳು ಕೆಲ ಸಂದರ್ಭಗಳಲ್ಲಿ ಮುಚ್ಚಲ್ಪಡುತ್ತವೆ ಎಂದು ಹೇಳುತ್ತದೆ. ನೆಗೋಷಬಲ್ ಇನ್ಸ್ಟ್ರುಮೆಂಟ್ಸ್ ಆ್ಯಕ್ಟ್ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ ಅಡಿ ರಜಾದಿನಗಳಾಗಿ ಘೋಷಿಸಬಹುದು.
ಬ್ಯಾಂಕಿಂಗ್ ರಜಾದಿನಗಳು ನಿರ್ದಿಷ್ಟ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳ ಮೇಲೆ ಅವಲಂಬಿತವಾಗಿರುತ್ತವೆ. ಒಂದು ರಾಜ್ಯದಿಂದ ಇನ್ನೊಂದಕ್ಕೆ ಭಿನ್ನವಾಗಿರುತ್ತವೆ ಎಂಬುದನ್ನು ಗ್ರಾಹಕರು ಗಮನದಲ್ಲಿರಿಸಿಕೊಳ್ಳಬೇಕು. ಎಲ್ಲಾ ಅಂಶಗಳನ್ನು ಪರಿಗಣಿಸಿ 2021ರ ಏಪ್ರಿಲ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ ಈ ರೀತಿಯಾಗಿದೆ.
ಇದನ್ನೂ ಓದಿ: 5 ವರ್ಷಗಳ ವಿದೇಶಿ ವ್ಯಾಪಾರ ನೀತಿಯ ಗಡುವು ಮತ್ತೆ ಮುಂದೂಡಿಕೆ
ಏಪ್ರಿಲ್ 1: ಒಡಿಶಾ ದಿನ, ಈ ರಾಜ್ಯವು ರಜಾದಿನವೆಂದು ಘೋಷಿಸಿತು. ಹೊಸ ಹಣಕಾಸು ವರ್ಷವು ಏಪ್ರಿಲ್ 1ರಿಂದ ಪ್ರಾರಂಭವಾಗುವುದರಿಂದ ಬ್ಯಾಂಕ್ಗಳಿಗೆ ರಾಷ್ಟ್ರೀಯ ರಜಾದಿನವಾಗಿದೆ. ವಾರ್ಷಿಕ ಖಾತೆಗಳನ್ನು ಬ್ಯಾಂಕ್ಗಳು ಸಮಯೋಚಿತವಾಗಿ ಮುಚ್ಚುತ್ತವೆ. ಈ ದಿನ ಯಾವುದೇ ಬ್ಯಾಂಕ್ ಕಾರ್ಯಾಚರಣೆಗಳನ್ನು ಕೈಗೊಳ್ಳುವುದಿಲ್ಲ.
ಏಪ್ರಿಲ್ 2: ಗುಡ್ ಫ್ರೈಡೇ. ಜಮ್ಮು, ಕಾಶ್ಮೀರ, ಹರಿಯಾಣ ಹೊರತುಪಡಿಸಿ ಎಲ್ಲೆಡೆ ರಾಷ್ಟ್ರೀಯ ಹಬ್ಬವಾಗಿ ಆಚರಣೆ
ಏಪ್ರಿಲ್ 5: ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ನಿರ್ದಿಷ್ಟ ರಜಾದಿನ.
ಏಪ್ರಿಲ್ 6: ತಮಿಳುನಾಡು ವಿಧಾನಸಭಾ ಚುನಾವಣೆಯ ಕಾರಣ ರಾಜ್ಯಾದ್ಯಂತ ನಿರ್ದಿಷ್ಟ ರಜೆ
ಏಪ್ರಿಲ್ 10: ತಿಂಗಳ ಎರಡನೇ ಶನಿವಾರ
ಏಪ್ರಿಲ್ 13: ಗುಡಿಪಾಡ್ಯ', ತೆಲುಗು ಹೊಸ ವರ್ಷದ ದಿನ, ಯುಗಾದಿ
ಏಪ್ರಿಲ್ 14: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ/ತಮಿಳು ಹೊಸ ವರ್ಷದ ದಿನ/ ಬಿಜು ಉತ್ಸವ
ಏಪ್ರಿಲ್ 15: ಹಿಮಾಚಲ ದಿನ/ಬಂಗಾಳಿ ಹೊಸ ವರ್ಷದ ದಿನ
ಏಪ್ರಿಲ್ 21: ಶ್ರೀರಾಮ ನವಮಿ/ಗರಿಯಾ ಪೂಜಾ. ಇದು ಪಶ್ಚಿಮ ಬಂಗಾಳ, ಅಸ್ಸೋಂ, ಗೋವಾ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಲಕ್ಷದ್ವೀಪ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಿಜೋರಾಂ, ಪುದುಚೇರಿ, ತಮಿಳುನಾಡುಗಳಲ್ಲಿ ರಾಷ್ಟ್ರೀಯ ರಜಾದಿನ.
ಏಪ್ರಿಲ್ 24 : ತಿಂಗಳ ನಾಲ್ಕನೇ ಶನಿವಾರವಾರದಂದು ಬ್ಯಾಂಕ್ಗಳಿಗೆ ರಜೆ
ಏಪ್ರಿಲ್ 25 : ಮಹರ್ಷಿ ಪಶುರಾಮರ ಜಯಂತಿ. ಹಿಮಾಚಲ ಪ್ರದೇಶ, ಗುಜರಾತ್, ಹರಿಯಾಣ, ರಾಜಸ್ಥಾನಗಳ ನಿರ್ದಿಷ್ಟ ರಜಾದಿನ