ಬೆಂಗಳೂರು : ಕೊರೊನಾ ವೈರಸ್ ಸಾಂಕ್ರಾಮಿಕ ಪ್ರೇರೇಪಿತ ಲಾಕ್ಡೌನ್ ಮಧ್ಯೆ ಕಳೆದ ಮೂರು ತಿಂಗಳಲ್ಲಿ ಕರ್ನಾಟಕದ ಭಾರತೀಯ ಸಾಫ್ಟ್‌ವೇರ್ ತಂತ್ರಜ್ಞಾನ ಪಾರ್ಕ್ (ಎಸ್‌ಟಿಪಿಐ) ಘಟಕಗಳು 36,459 ಕೋಟಿ ರೂ. ಸೇವೆಯನ್ನು ರಫ್ತು ಮಾಡಿವೆ.
ರಾಜ್ಯದಲ್ಲಿ ಪ್ರಥಮ ಬಾರಿಗೆ ಆರಂಭವಾದ ಬೆಂಗಳೂರು ಕೇಂದ್ರದ ಅವಧಿಯಿಂದ 2018-19ರವರೆಗೆ ತಂತ್ರಜ್ಞಾನ ಸೇವೆಗಳ ರಫ್ತು 5.6 ಕೋಟಿ ರೂ.ಯಿಂದ 17,4894 ಕೋಟಿ ರೂ.ಗೆ ಏರಿದೆ. ಇದು ಪ್ರಸ್ತುತ ರಾಷ್ಟ್ರೀಯ ರಫ್ತಿನ ಸರಿಸುಮಾರು ಶೇ. 41ರಷ್ಟಾಗಿದೆ ಎಂದು ಎಸ್‌ಟಿಪಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದ 191 ಬಿಲಿಯನ್ ಡಾಲರ್ ಮೌಲ್ಯದ ಐಟಿ-ಬಿಪಿಎಂ ಉದ್ಯಮವು ಸುಮಾರು 18,000 ಕಂಪನಿಗಳು ನೇರವಾಗಿ 4.3 ಮಿಲಿಯನ್ ಜನರಿಗೆ ಉದ್ಯೋಗ ನೀಡುತ್ತಿವೆ. ಇದು ಒಟ್ಟು ಜಿಡಿಪಿಯಲ್ಲಿ ಶೇ 7.7ರಷ್ಟು ಕೊಡುಗೆ ನೀಡುತ್ತದೆ. ಎಸ್‌ಟಿಪಿಐ ನೋಂದಾಯಿತ ಘಟಕಗಳು ರಫ್ತು ಮಾಡಿದ ರಫ್ತು 2018-19ರ ಅವಧಿಯಲ್ಲಿ 4,21,103 ಕೋಟಿ ರೂ. ಆಗಿದೆ.