ETV Bharat / business

ಬಜಾಜ್ ಫೈನ್​​ಸರ್ವ್​​ನಿಂದ 'BEYOND' ಹೊಸ ಬ್ರ್ಯಾಂಡ್​ ಅನಾವರಣ - ಬ್ಯಾಂಕಿಂಗ್

ಹೊಸ ಬ್ಯಾನರ್ ಅಡಿ, ಭಾರತದ ಅತಿದೊಡ್ಡ ಹಣಕಾಸು ಸಮೂಹಗಳಲ್ಲಿ ಒಂದಾದ ಬಜಾಜ್ ಫೈನ್​​ಸರ್ವ್ 'BEYOND' ಎಂಬ ಹೊಸ ಪ್ರಮಾಣಪತ್ರ ಕಾರ್ಯಕ್ರಮ ಅನಾವರಣಗೊಳಿಸಿದ್ದು, ಆ ಮೂಲಕ ಉದ್ಯೋಗಾವಕಾಶ ಒದಗಿಸಲಿದೆ. ಇದು ಪದವೀಧರರಿಗೆ ಸಂಬಂಧಿತ ವೃತ್ತಿ ಅವಕಾಶಗಳನ್ನು ಹುಡುಕಲು ಸಹಾಯ ಮಾಡುತ್ತದೆ.

BEYOND
'BEYOND' ಹೊಸ ಬ್ರ್ಯಾಂಡ್​ ಅನಾವರಣ
author img

By

Published : Sep 16, 2021, 2:21 PM IST

ಪುಣೆ: ಭಾರತದ ಅತಿದೊಡ್ಡ ಹಣಕಾಸು ಸಮೂಹಗಳಲ್ಲಿ ಒಂದಾದ ಬಜಾಜ್ ಫೈನ್​​ಸರ್ವ್​​, ತನ್ನ ಪ್ರಮುಖ ಉದ್ಯೋಗದ ಉಪಕ್ರಮಕ್ಕಾಗಿ ಹೊಸ ಬ್ರಾಂಡ್ 'BEYOND' ಅನ್ನು ಇಂದು ಅನಾವರಣಗೊಳಿಸಿದೆ, ಇದು ಕಸ್ಟಮೈಸ್ಡ್ ತರಬೇತಿ ಕಾರ್ಯಕ್ರಮಗಳ ಮೂಲಕ ಪದವೀಧರರಿಗೆ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ ನೀಡುವ ಗುರಿ ಹೊಂದಿದೆ.

ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (ಬಿಎಫ್‌ಎಸ್‌ಐ) ವಲಯದಲ್ಲಿ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳಲು ಉತ್ಸುಕರಾಗಿರುವ ಭಾರತದ ಯುವ ಪದವೀಧರರ ಸಾಮರ್ಥ್ಯಗಳನ್ನು ಸುಧಾರಿಸಲು ಬಜಾಜ್ ಫೈನ್​​ಸರ್ವ್ ತನ್ನ ಉದ್ಯೋಗದ ಕಾರ್ಯಕ್ರಮವನ್ನು 2015 ರಲ್ಲಿ ಆರಂಭಿಸಿತ್ತು.

ಅಂದಿನಿಂದ, ಈ ಕಾರ್ಯಕ್ರಮವು ಸಣ್ಣ ಪಟ್ಟಣಗಳ ಪದವೀಧರರಿಗೆ ಮತ್ತು ಸೀಮಿತ ಅವಕಾಶಗಳಿಗೆ ನೆರವಾಗಲು, ಅವರ ಆಕಾಂಕ್ಷೆಗಳು ಮತ್ತು ವೃತ್ತಿ ಗುರಿಗಳನ್ನು ಸಾಧಿಸಲು ಯಶಸ್ವಿಯಾಗಿದೆ. ಅಂದಿನಿಂದ, 10 ರಾಜ್ಯಗಳಾದ್ಯಂತ 10,000 ಕ್ಕೂ ಹೆಚ್ಚು ಪದವೀಧರರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದಿದ್ದಾರೆ ಮತ್ತು ಈ ವರ್ಷಕ್ಕೆ 10,000 ಮಂದಿಗೆ ದಾಖಲಾತಿ ನೀಡಲು ಯೋಜಿಸಲಾಗಿದೆ.

ಈ ಹೊಸ ಬ್ಯಾನರ್ ಅಡಿ, ಬಜಾಜ್ ಫೈನ್​​ಸರ್ವ್ ಹೊಸ ಸರ್ಟಿಫಿಕೆಟ್ ಕಾರ್ಯಕ್ರಮಗಳನ್ನು ಪರಿಚಯಿಸಲಿದೆ ಮತ್ತು ಉದ್ಯೋಗಾವಕಾಶ ವಿಭಾಗವನ್ನು ನಿರ್ಮಿಸಲಿದ್ದು, ಇದು ಹಳೆಯ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗಾವಕಾಶ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಬ್ಯಾಂಕಿಂಗ್, ಹಣಕಾಸು ಮತ್ತು ವಿಮೆ (CPBFI) ಯಲ್ಲಿ ಬಜಾಜ್ ಫೈನ್​​ಸರ್ವ್​​ನ ಪ್ರಮಾಣಪತ್ರ ಕಾರ್ಯಕ್ರಮವು ಈಗ 'BEYOND' ಅಡಿ ಆರಂಭವಾದ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

ಹೊಸ ಬ್ರಾಂಡ್ ಗುರುತಿನ ಬಗ್ಗೆ ಪ್ರತಿಕ್ರಿಯಿಸಿದ ಸಂಜೀವ್ ಬಜಾಜ್, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಬಜಾಜ್ ಫೈನ್​​ಸರ್ವ್ ಲಿಮಿಟೆಡ್, "ಉದ್ಯೋಗದ ಎಲ್ಲ ಅಂಶಗಳಾದ ಮನೋಭಾವ, ಕೌಶಲ್ಯ ಮತ್ತು ಜ್ಞಾನವನ್ನು ತಿಳಿಸುವ ಕಸ್ಟಮೈಸ್ಡ್ ತರಬೇತಿ ಕಾರ್ಯಕ್ರಮಗಳ ಮೂಲಕ, ಮೊದಲಿನಿಂದಲೂ ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿರುವ ಈ ಪೀಳಿಗೆಯ ಪದವೀಧರರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ಹಣಕಾಸು ಸೇವೆಗಳ ಉದ್ಯಮದಲ್ಲಿ ಯಶಸ್ವಿ ವೃತ್ತಿಜೀವನವನ್ನು ಕಂಡುಕೊಳ್ಳಲು ಇದು ಸಹಾಯಕವಾಗಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.