ETV Bharat / business

ಆಟೋಮೊಬೈಲ್​ ಚಟುವಟಿಕೆಗಳ ಪುನರಾರಂಭಕ್ಕೆ ಕಾರ್ಮಿಕರ ಲಭ್ಯತೆ ದೊಡ್ಡ ಸವಾಲು: ಸಿಯಾಮ್ - ಭಾರತೀಯ ವಾಹನ ಮಾರಾಟ ಸಂಘಟನೆ

ಕೋವಿಡ್​-19 ಸಾಂಕ್ರಾಮಿಕ ರೋಗ ತಡೆಗಟ್ಟಲು ಮತ್ತು ಆರ್ಥಿಕ ಚಟುವಟಿಕೆಗಳನ್ನು ಭಾಗಶಃ ತೆರೆಯಲು ಗೃಹ ಸಚಿವಾಲಯವು ಇತ್ತೀಚೆಗೆ ಕೆಲವು ಮಾರ್ಗಸೂಚಿಗಳ ಮೂಲಕ ಅನುಮತಿ ನೀಡಿದೆ. 'ಮಾರಾಟ ಜಾಲ ಸ್ಥಗಿತ ಸೇರಿದಂತೆ ವಿವಿಧ ಸವಾಲುಗಳ ಹೊರತಾಗಿಯೂ ವಾಹನೋದ್ಯಮವು ಸುರಕ್ಷತಾ ಪ್ರೋಟೋಕಾಲ್‌ ಅನುಸರಿಸಿ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆಸುತ್ತಿದೆ' ಎಂದು ಸಿಯಾಮ್ ಅಧ್ಯಕ್ಷ ರಾಜನ್ ವಾಧೇರಾ ತಿಳಿಸಿದ್ದಾರೆ.

Auto industry
ಆಟೋಮೊಬೈಲ್
author img

By

Published : Apr 17, 2020, 6:32 PM IST

ನವದೆಹಲಿ: ಏಪ್ರಿಲ್ 20ರಿಂದ ಆರ್ಥಿಕ ಚಟುವಟಿಕೆಯನ್ನು ಭಾಗಶಃ ಪುನರಾರಂಭಿಸಲು ಕಾರ್ಮಿಕರ ಲಭ್ಯತೆ ಮತ್ತು ಸಂಪೂರ್ಣ ಕಾರ್ಯಾಚರಣೆಯ ಪೂರೈಕೆ ಸರಪಳಿ ನಡೆಸಲು ಕೆಲ ಸವಾಲುಗಳು ಎದುರಾಗಲಿವೆ ಎಂದು ಭಾರತೀಯ ವಾಹನ ಮಾರಾಟ ಸಂಘಟನೆ (ಸಿಯಾಮ್) ಕಳವಳ ವ್ಯಕ್ತಪಡಿಸಿದೆ.

ಮಾರಾಟ ಜಾಲ ಸ್ಥಗಿತ ಸೇರಿದಂತೆ ವಿವಿಧ ಸವಾಲುಗಳ ಹೊರತಾಗಿಯೂ ವಾಹನೋದ್ಯಮವು ಸುರಕ್ಷತಾ ಪ್ರೋಟೋಕಾಲ್‌ ಅನುಸರಿಸಿ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂದು ಸಿಯಾಮ್ ಅಧ್ಯಕ್ಷ ರಾಜನ್ ವಾಧೇರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್​-19 ಸಾಂಕ್ರಾಮಿಕ ರೋಗ ತಡೆಗಟ್ಟಲು ಮತ್ತು ಆರ್ಥಿಕ ಚಟುವಟಿಕೆಗಳನ್ನು ಭಾಗಶಃ ತೆರೆಯಲು ಗೃಹ ಸಚಿವಾಲಯವು ಇತ್ತೀಚೆಗೆ ಕೆಲವು ಮಾರ್ಗಸೂಚಿಗಳ ಮೂಲಕ ಅನುಮತಿ ನೀಡಿದೆ.

ಪುರಸಭೆ ವ್ಯಾಪ್ತಿ ಹೊರಗಿನ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಮೂಲ ಸಲಕರಣೆಗಳ ತಯಾರಕರು (ಒಇಎಂ), ಕೈಗಾರಿಕಾ ಎಸ್ಟೇಟ್ ಮತ್ತು ಕೈಗಾರಿಕಾ ಟೌನ್‌ಶಿಪ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಆಯಾ ರಾಜ್ಯ / ಜಿಲ್ಲಾಡಳಿತಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ತಮ್ಮ ಕಾರ್ಯಾಚರಣೆಯನ್ನು ಹೇಗೆ ಮರು ಆರಂಭಿಸಬಹುದು ಎಂಬುದನ್ನು ಅನ್ವೇಷಿಸಲು ಏಪ್ರಿಲ್ 20ರ ಬಳಿಕ ತಿಳಿಯಲಿದೆ ಎಂದರು.

ಕಾರ್ಮಿಕರ ಲಭ್ಯತೆ ಮತ್ತು ಸಂಪೂರ್ಣ ಕಾರ್ಯಾಚರಣೆಯ ಪೂರೈಕೆ ಸರಪಳಿ ಕಾರ್ಯಗತಗೊಳಿಸಲು ನಮ್ಮ ಮುಂದೆ ಹಲವು ಸವಾಲುಗಳಿವೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಕಂಪನಿಗಳು ತಮ್ಮ ವೈಯಕ್ತಿಕದತ್ತ ಗಮನಹರಿಸಬೇಕಾಗುತ್ತದೆ ಎಂದು ಹೇಳಿದರು.

ಮಾರಾಟ ವಿಭಾಗ ಮುಚ್ಚುವುದು ಸಹ ಒಂದು ಪ್ರಮುಖ ಸವಾಲಾಗಿದೆ. ಉದ್ಯಮ ತನ್ನ ಚಟುವಟಿಕೆಗಳನ್ನು ತೆರೆದುಕೊಳ್ಳಲು ವಿವರವಾದ ಪ್ರೋಟೋಕಾಲ್​​ ಜತೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ. ಕೆಲಸದ ಸ್ಥಳ ಮತ್ತು ಕಾರ್ಖಾನೆಗಳಲ್ಲಿ ಸಾಮಾಜಿಕ ಅಂತರದ ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.