ETV Bharat / business

ವಾಹನ ಮಾರಾಟ: ಮಾರುತಿ, ಎಂಜಿ ಮೋಟಾರ್​ ಶೈನಿಂಗ್​... ಕಳೆಗುಂದಿದ ಮಹೀಂದ್ರಾ, ಟೊಯೋಟಾ, ಹುಂಡೈ - ಮಹೀಂದ್ರಾ ಆಗಸ್ಟ್​ ಮಾರಾಟ ಶೇ 16ರಷ್ಟು ಕುಸಿತ

ವಾಹನ ತಯಾರಿಕಾ ಪ್ರಮುಖ ಕಂಪನಿಗಳ ಆಗಸ್ಟ್​ ತಿಂಗಳ ದೇಶಿ ಹಾಗೂ ವಿದೇಶಿ ಮಾರಾಟದಲ್ಲಿ ಮಿಶ್ರ ಬೆಳವಣಿಗೆ ಕಂಡು ಬಂದಿದೆ. ಮಾರುತಿ, ಎಂಜಿ ಮೋಟರ್‌ ವಾಹನ ಮಾರಾಟ ಏರಿಕೆ ಆಗಿದ್ದರೆ, ಹುಂಡೈ, ಟೊಯೋಟಾ ಕಿರ್ಲೋಸ್ಕರ್, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಗಳ ಬೆಳವಣಿಗೆ ಕ್ಷೀಣಿಸಿದೆ.

Automobile
ಆಟೋಮೊಬೈಲ್
author img

By

Published : Sep 1, 2020, 4:10 PM IST

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಆಗಸ್ಟ್‌ ಮಾಸಿಕದ ವಾಹನ ಮಾರಾಟದಲ್ಲಿ ಶೇ. 17.1ರಷ್ಟು ಏರಿಕೆ ಕಂಡು 1,24,624 ಯುನಿಟ್‌ ಮಾರಾಟ ಮಾಡಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಕಂಪನಿಯು 1,06,413 ಯುನಿಟ್‌ ಮಾರಾಟ ಮಾಡಿದೆ ಎಂದು ಎಂಎಸ್‌ಐ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶಿಯ ಮಾರಾಟ ಕಳೆದ ತಿಂಗಳು ಶೇ. 20.2ರಷ್ಟು ಏರಿಕೆಯಾಗಿ 1,16,704ಕ್ಕೆ ತಲುಪಿದೆ. 2019ರ ಆಗಸ್ಟ್‌ನಲ್ಲಿ 97,061 ಯುನಿಟ್‌ಗಳಷ್ಟಿತ್ತು.

ಆಲ್ಟೊ ಮತ್ತು ವ್ಯಾಗನರ್​ನಂತಹ ಮಿನಿ ಕಾರುಗಳ ಮಾರಾಟವು ಕಳೆದ ವರ್ಷ ಇದೇ ತಿಂಗಳಲ್ಲಿನ 10,123 ಯುನಿಟ್​ಗಳಿಗೆ ಹೋಲಿಸಿದರೆ 19,709 ಯುನಿಟ್​ಗಳಾಗಿ ಶೇ. 94.7ರಷ್ಟು ಏರಿಕೆಯಾಗಿದೆ.

ಕಾಂಪ್ಯಾಕ್ಟ್ ವಿಭಾಗದ ಸ್ವಿಫ್ಟ್, ಸೆಲೆರಿಯೊ, ಇಗ್ನಿಸ್, ಬಲೆನೊ ಮತ್ತು ಡಿಜೈರ್ ಸೇರಿದಂತೆ ಇತರೆ ಕಾರುಗಳ ಮಾರಾಟವು ಶೇ. 14.2ರಷ್ಟು ಏರಿಕೆಯಾಗಿ 61,956ಕ್ಕೆ ತಲುಪಿದೆ. ಕಳೆದ ವರ್ಷ ಆಗಸ್ಟ್​ನಲ್ಲಿ 54,274 ಕಾರುಗಳು ಮಾರಾಟ ಆಗಿದ್ದವು.

ಮಧ್ಯಮ ಗಾತ್ರದ ಸೆಡಾನ್ ಸಿಯಾಜ್ 1,223 ಯುನಿಟ್ ಮಾರಾಟವಾಗಿದ್ದು, ಈ ಹಿಂದೆ 1,596 ಯುನಿಟ್ ಮಾರಾಟವಾಗಿ ಶೇ. 23.4ರಷ್ಟು ಕ್ಷೀಣಿಸಿದೆ.

ವಿಟಾರಾ ಬ್ರೆಝಾ, ಎಸ್-ಕ್ರಾಸ್ ಮತ್ತು ಎರ್ಟಿಗಾ ಸೇರಿದಂತೆ ಯುಟಿಲಿಟಿ ವಾಹನಗಳ ಮಾರಾಟವು ಶೇ. 13.5ರಷ್ಟು ಹೆಚ್ಚಳಗೊಂಡು 21,030ಕ್ಕೆ ತಲುಪಿದೆ. ಹಿಂದಿನ ವರ್ಷ 18,522 ಯೂನಿಟ್​ ಮಾರಾಟ ಆಗಿದ್ದವು ಎಂದು ಎಂಎಸ್‌ಐ ತಿಳಿಸಿದೆ.

ಆಗಸ್ಟ್‌ನಲ್ಲಿ ರಫ್ತು ಶೇ. 15.3ರಷ್ಟು ಇಳಿಕೆ ಕಂಡು 7,920ಕ್ಕೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 9,352 ಯುನಿಟ್‌ಗಳಷ್ಟಿತ್ತು.

ಎಂಜಿ ಮೋಟಾರ್ ಇಂಡಿಯಾ ಚಿಲ್ಲರೆ ಮಾರಾಟ ಶೇ. 41.2ರಷ್ಟು ಹೆಚ್ಚಳ

ಎಂಜಿ ಮೋಟಾರ್ ಇಂಡಿಯಾ ತನ್ನ ಚಿಲ್ಲರೆ ಮಾರಾಟದಲ್ಲಿ ಶೇ. 41.2ರಷ್ಟು ಏರಿಕೆ ಕಂಡಿದ್ದು, ಆಗಸ್ಟ್‌ನಲ್ಲಿ 2,851 ಯುನಿಟ್‌ ಮಾರಾಟ ಮಾಡಿದೆ.

ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯು 2,018 ಯುನಿಟ್ ಮಾರಾಟ ಮಾಡಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಟೊಯೋಟಾ ಕಿರ್ಲೋಸ್ಕರ್ ಮಾರಾಟ ಶೇ. 48ರಷ್ಟು ನಷ್ಟ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಮಾರಾಟದಲ್ಲಿ ಆಗಸ್ಟ್‌ನಲ್ಲಿ ಶೇ. 48.08ರಷ್ಟು ಇಳಿಕೆ ಕಂಡು 5,555ಕ್ಕೆ ತಲುಪಿದೆ. 2019ರ ಆಗಸ್ಟ್‌ನಲ್ಲಿ 10,701 ಯುನಿಟ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿತ್ತು.

ಮಹೀಂದ್ರಾ ಶೇ. 16ರಷ್ಟು ಕುಸಿತ

ಮಹೀಂದ್ರಾ & ಮಹೀಂದ್ರಾ (ಎಂ&ಎಂ) ಆಗಸ್ಟ್‌ ಮಾಸಿಕದಲ್ಲಿ ಒಟ್ಟು ಮಾರಾಟವು ಶೇ. 16ರಷ್ಟು ಕುಸಿತ ಕಂಡಿದ್ದು, 30,426 ಯುನಿಟ್‌ಗಳಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯು 36,085 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.

ದೇಶಿಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಶೇ. 13ರಷ್ಟು ಇಳಿದು 29,257ಕ್ಕೆ ತಲುಪಿದೆ. 2019ರ ಆಗಸ್ಟ್‌ನಲ್ಲಿ 33,564 ಯುನಿಟ್‌ ಖರೀದಿ ಆಗಿದ್ದವು. ರಫ್ತು ಪ್ರಮಾಣ ಸಹ ಶೇ. 54ರಷ್ಟು ಕುಸಿದು 1,169ಕ್ಕೆ ತಲುಪಿದೆ. ಹಿಂದಿನ ವರ್ಷ 2,521 ಯುನಿಟ್‌ ರಫ್ತಾಗಿದ್ದವು.

ಪ್ರಯಾಣಿಕರ ವಾಹನಗಳ ವಿಭಾಗದ ಯುಟಿಲಿಟಿ ವಾಹನಗಳು (ಯುವಿ), ಕಾರು ಮತ್ತು ವ್ಯಾನ್‌ ಸೇರಿ 13,651 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 13,507 ವಾಹನಗಳು ಖರೀದಿ ಆಗಿದ್ದವು.

ವಾಣಿಜ್ಯ ವಾಹನಗಳ ವಿಭಾಗದಲ್ಲಿ ಕಂಪನಿಯು 15,299 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಈ ಹಿಂದೆ 14,684 ಯುನಿಟ್‌ಗಳಂತೆ ಶೇ. 4ರಷ್ಟು ಏರಿಕೆ ಕಂಡಿದೆ.

ಆಗಸ್ಟ್​​ನಲ್ಲಿ ಟ್ರ್ಯಾಕ್ಟರ್ ಮಾರಾಟವು ಶೇ. 65ರಷ್ಟು ಹೆಚ್ಚಾಗಿ, 24,458 ಯುನಿಟ್‌ ಮಾರಾಟ ಆಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯು 14,817 ಟ್ರ್ಯಾಕ್ಟರ್​ಗಳನ್ನು ಮಾರಾಟ ಮಾಡಿದೆ. ದೇಶಿಯ ಟ್ರ್ಯಾಕ್ಟರ್ ಮಾರಾಟವು ಕಳೆದ ತಿಂಗಳು ಶೇ. 69ರಷ್ಟು ಏರಿಕೆಯಾಗಿ 23,503ಕ್ಕೆ ತಲುಪಿದೆ. 2019ರ ಆಗಸ್ಟ್‌ನಲ್ಲಿ 13,871 ಯುನಿಟ್‌ಗಳಷ್ಟಿತ್ತು.

ಕಳೆದ ತಿಂಗಳು ರಫ್ತು 955 ಯುನಿಟ್ ಆಗಿದ್ದು, 2019ರ ಆಗಸ್ಟ್‌ನಲ್ಲಿ 946 ಯುನಿಟ್‌ಗಳಿಂದ ಶೇ. 1ರಷ್ಟು ಏರಿಕೆಯಾಗಿದೆ.

ಹ್ಯುಂಡೈ ಮಾರಾಟ ಕುಸಿತ

ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ಆಗಸ್ಟ್‌ನಲ್ಲಿ ತನ್ನ ಒಟ್ಟು ಮಾರಾಟದಲ್ಲಿ ಶೇ. 6.06ರಷ್ಟು ಕುಸಿತ ಕಂಡಿದ್ದು, 52,609 ಯುನಿಟ್ ಮಾರಾಟ ದಾಖಲಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯು 56,005 ಯುನಿಟ್‌ ಮಾರಾಟ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ದೇಶಿಯ ಮಾರಾಟವು ಶೇ. 19.9ರಷ್ಟು ಏರಿಕೆಯಾಗಿ 45,809ಕ್ಕೆ ತಲುಪಿದ್ದು, 2019ರ ಆಗಸ್ಟ್‌ನಲ್ಲಿ 38,205 ಯುನಿಟ್‌ಗಳಷ್ಟಿತ್ತು. ಕಳೆದ ತಿಂಗಳು ಕಂಪನಿಯ ರಫ್ತು 6,800 ಯುನಿಟ್ ಆಗಿದ್ದು, 2019ರ ಆಗಸ್ಟ್‌ನಲ್ಲಿ 17,800 ಯುನಿಟ್‌ಗಳಿಂದ ಶೇ. 61.79ರಷ್ಟು ಇಳಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.