ETV Bharat / business

ರಾಷ್ಟ್ರ ರಾಜಧಾನಿಯಲ್ಲಿ ಜೆಟ್​ ಇಂಧನ ದರ ಶೇ.23ರಷ್ಟು ಇಳಿಕೆ

ರಾಷ್ಟ್ರ ರಾಜಧಾನಿಯಲ್ಲಿ ಏವಿಯೇಷನ್ ​​ಟರ್ಬೈನ್ ಫ್ಯುಯೆಲ್ (ಎಟಿಎಫ್) ಬೆಲೆಯನ್ನು ಕಿಲೋ ಲಿಟರ್‌ಗೆ 6,812.62 ರೂ. ಅಥವಾ ಶೇಕಡಾ 23.2 ರಷ್ಟು ಕಡಿತಗೊಳಿಸಲಾಗಿದೆ. ಇದರಿಂದ ಪ್ರತಿ ಕಿಲೋ ಲೀಟರ್​ಗೆ ಇಂಧನ ದರ 22,544.75 ರೂ.ಗಳಿಗೆ ಇಳಿದಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಬೆಲೆ ಅಧಿಸೂಚನೆ ತಿಳಿಸಿದೆ.

ATF price cut 23%, costs
ಜೆಟ್​ ಇಂಧನ ದರ ಶೇ.23ರಷ್ಟು ಇಳಿಕೆ
author img

By

Published : May 3, 2020, 4:34 PM IST

ನವದೆಹಲಿ : ಅಂತಾರಾಷ್ಟ್ರೀಯ ತೈಲ ಬೆಲೆಗಳ ಕುಸಿತಕ್ಕೆ ಅನುಗುಣವಾಗಿ ಜೆಟ್ ಇಂಧನ (ಎಟಿಎಫ್) ಬೆಲೆಯನ್ನು ಶೇಕಡಾ 23 ರಷ್ಟು ಕಡಿತಗೊಳಿಸಲಾಗಿದೆ. ಇದರಿಂದಾಗಿ ಸದ್ಯ ಜೆಟ್​ ಇಂಧನದ ಬೆಲೆ ಸಾಮಾನ್ಯವಾಗಿ ಬಳಸುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಮೂರನೆ ಒಂದು ಭಾಗದಷ್ಟಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಏವಿಯೇಷನ್ ​​ಟರ್ಬೈನ್ ಫ್ಯುಯೆಲ್ (ಎಟಿಎಫ್) ಬೆಲೆಯನ್ನು ಕಿಲೋ ಲಿಟರ್‌ಗೆ 6,812.62 ರೂ. ಅಥವಾ ಶೇ 23.2 ರಷ್ಟು ಕಡಿತಗೊಳಿಸಲಾಗಿದೆ. ಇಂಧನ ದರ ಪ್ರತಿ ಕಿಲೋ ಲೀಟರ್​ಗೆ 22,544.75 ರೂ.ಗಳಿಗೆ ಇಳಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಬೆಲೆ ಅಧಿಸೂಚನೆ ತಿಳಿಸಿದೆ. ಇದರಿಂದಾಗಿ ಎಟಿಎಫ್​ ಇಂಧನಕ್ಕೆ ಕಾರುಗಳು ಮತ್ತು ದ್ವಿಚಕ್ರ ವಾಹನಗಳಲ್ಲಿ ಬಳಸುವ ಪೆಟ್ರೋಲ್ ಬೆಲೆಯ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಖರ್ಚಾಗುತ್ತದೆ. ಸದ್ಯ ದೆಹಲಿಯಲ್ಲಿ ಒಂದು ಲೀಟರ್​ ಪೆಟ್ರೋಲ್ ಬೆಲೆ 69.59 ರೂ. ಇದೆ. ಜೆಟ್​ ಇಂಧನ ಬೆಲೆ ಪ್ರತೀ ಲೀಟರ್​ಗೆ 22.54 ರೂ. ಇದೆ.

ಮಾರುಕಟ್ಟೆಯ ಬೆಲೆಯ ಅಥವಾ ಸಬ್ಸಿಡಿ ರಹಿತ ಸೀಮೆಎಣ್ಣೆ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಗಿಂತ ಅಗ್ಗವಾಗಿದೆ. ಅದರ ದರವನ್ನು ಶೇ. 13.3 ರಷ್ಟು ಕಡಿತಗೊಳಿಸಿದ ನಂತರ ಪ್ರತಿ ಕಿಲೋ ಲೀಟರ್​ಗೆ 39,678.47 ರೂ. ಮತ್ತು ಪ್ರತೀ ಲೀಟರ್​ಗೆ 39.67 ರೂ. ಇದೆ. ಫೆಬ್ರವರಿಯಿಂದ ಎಟಿಎಫ್ ಬೆಲೆಯಲ್ಲಿ ಇದು 6ನೇ ಕಡಿತವಾಗಿದ್ದು, ಫೆಬ್ರವರಿಯಲ್ಲಿ ಇಂಧನ ದರ ಕಡಿತಗೊಳ್ಳಲು ಪ್ರಾರಂಭವಾಗುವ ಮೊದಲು ದೆಹಲಿಯಲ್ಲಿ ಎಟಿಎಫ್ ಬೆಲೆ ಪ್ರತಿ ಕಿಲೋ ಲೀಟರ್​ಗೆ 64,323.76 ರೂ. ಮತ್ತು ಈಗ ಪ್ರತಿ ಕಿಲೋ ಲೀಟರ್​ಗೆ 22,544.75 ರೂ. ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.