ETV Bharat / business

ಟ್ಯಾಕ್ಸ್​ ಸರಳೀಕರಣ, ತೆರಿಗೆದಾರರ ಸಂಕಷ್ಟ ಆಲಿಸಲು ದೇಶಾದ್ಯಂತ ಪ್ರವಾಸ:  ಸೀತಾರಾಮನ್​ - ತೆರಿಗೆ ಪಾವತಿ

ತೆರಿಗೆ, ಮೂಲ ಸೌಕರ್ಯ, ಆರ್‌ಬಿಐ ಮತ್ತು ಸರ್ಕಾರದ ಸಂಬಂಧ ವೃದ್ಧಿ, ವಿಳಂಬವಾದ ಪಾವತಿ ತಡೆ ಮತ್ತು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಳಂತಹ (ಸಿಎಸ್‌ಆರ್) ಅಂಶಗಳೇ ನಮ್ಮ ಮೊದಲ ಆದ್ಯತೆ ಆಗಿರುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ. ಶುಕ್ರವಾರ ಭಾರತೀಯ ಉದ್ಯಮಿಗಳ ಒಕ್ಕೂಟದ (ಸಿಐಐ) ರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು.

ನಿರ್ಮಲಾ ಸೀತಾರಾಮನ್​
author img

By

Published : Aug 9, 2019, 8:53 PM IST

ನವದೆಹಲಿ: ಯಾವುದೇ ಹಂತದಲ್ಲಿ, ಎಂತಹುದೇ ಪರಿಸ್ಥಿತಿಯಲ್ಲಿ ಉದ್ಯಮಿ ವಲಯಕ್ಕೆ ಕಷ್ಟವಾಗದಂತೆ ನೋಡಿಕೊಳ್ಳಲು ಬಯಸುತ್ತೇವೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.

ಶುಕ್ರವಾರ ಭಾರತೀಯ ಉದ್ಯಮಿಗಳ ಒಕ್ಕೂಟದ (ಸಿಐಐ) ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ತೆರಿಗೆ, ಮೂಲಸೌಕರ್ಯ, ಆರ್‌ಬಿಐ ಮತ್ತು ಸರ್ಕಾರದ ಸಂಬಂಧ ವೃದ್ಧಿ, ವಿಳಂಬವಾದ ಪಾವತಿ ತಡೆ ಮತ್ತು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಳಂತಹ (ಸಿಎಸ್‌ಆರ್) ಅಂಶಗಳೇ ನಮ್ಮ ಮೊದಲ ಆದ್ಯತೆ ಆಗಿರುತ್ತದೆ ಎಂದು ಹೇಳಿದರು.

ಕಾರ್ಪೊರೇಟ್‌ಗಳ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡುವುದು ನಮ್ಮ ಉದ್ದೇಶ. ಈ ವಿಷಯದಲ್ಲಿ ದ್ವಿಮುಖ ನೀತಿ ಅನುಸರಿಸುವ ಪ್ರಶ್ನೆಯೇ ಇಲ್ಲ. ತೆರಿಗೆ ಆದಾಯ ಸಂಗ್ರಹ ಮೇಲ್ಮುಖದ ಪ್ರವೃತ್ತಿಯಲ್ಲಿದೆ ಎಂಬ ಸಮಾಧಾನದ ವರದಿ ಬಂದ ಬಳಿಕವೇ ಸರ್ಕಾರವು ಎಲ್ಲ ವರ್ಗದ ಕಾರ್ಪೊರೇಟ್‌ಗಳಿಗೆ ಶೇ 25 ಪ್ರತಿಶತದಷ್ಟು ತೆರಿಗೆ ದರ ಕಡಿತಗೊಳಿಸಲಿದೆ ಎಂದು ಆಶ್ವಾಸನೆ ನೀಡಿದರು.

ಸೀತಾರಾಮನ್ ಅವರಿಗೆ ತೆರಿಗೆ ಪಾವತಿಗೆ ಸಂಬಂಧಿಸಿದ ಸರಳೀಕರಣ ಮತ್ತು ಕಿರುಕುಳದ ಬಗ್ಗೆ ಗಮನಕ್ಕೆ ತರಲಾಯಿತು. ಈ ಬಗ್ಗೆ ಮಾತನಾಡಿದ ಅವರು, ತೆರಿಗೆಗಳ ಸರಳೀಕರಣವನ್ನು ನಾವೂ ಎದುರು ನೋಡುತ್ತಿದ್ದೇವೆ. ನೇರ ತೆರಿಗೆ ಸಂಹಿತೆಯ ಸಮಿತಿ ವರದಿಯನ್ನು ಆಗಸ್ಟ್ 15ರಂದು ಬಿಡುಗಡೆ ಆಗುವ ನಿರೀಕ್ಷೆಯಿದೆ. ಸರ್ಕಾರ ಈ ಬಗ್ಗೆ ತಕ್ಷಣ ಪರಿಗಣನೆಗೆ ತೆಗೆದುಕೊಳ್ಳಲಿದೆ ಎಂದರು.

ಕಾರ್ಪೊರೇಟ್‌ ಸಂಸ್ಥೆಗಳು ಎದುರಿಸುತ್ತಿರುವ ತೆರಿಗೆ ಕಿರುಕುಳದಂತಹ ಸಮಸ್ಯೆಗಳನ್ನು ಆಲಿಸಲು ಹಾಗೂ ಅವುಗಳನ್ನು ಅರ್ಥೈಸಿಕೊಳ್ಳಲು ಟೈರ್​- 2 ನಗರಗಳು ಒಳಗೊಂಡಂತೆ ದೇಶಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಸಿಐಐ ಸದಸ್ಯರಿಗೆ ಭರವಸೆ ನೀಡಿದರು.

ತಂತ್ರಜ್ಞಾನ ಆಧಾರಿತ ತೆರಿಗೆ ಪಾವತಿಯನ್ನು ಜಾರಿಗೆ ತರುವ ಬಗ್ಗೆ ಸಾಕಷ್ಟು ಚಿಂತನೆ ನಡೆಸಲಾಗುತ್ತಿದೆ. ಕಿರುಕುಳದ ಪ್ರಕರಣಗಳನ್ನು ಪತ್ತೆಹಚ್ಚಲು ಹಾಗೂ ಅದಕ್ಕೆ ಸಂಬಂಧಿಸಿದ್ದ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಅಧಿಕಾರದ ದುರುಪಯೋಗ ತಡೆಯಲೂ ನೆರವಾಗಲಿದೆ ಎಂದು ಸೀತಾರಾಮನ್ ತಿಳಿಸಿದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.