ETV Bharat / business

ಆ್ಯಪಲ್​, ಸ್ಯಾಮ್​ಸಂಗ್ ಇನ್ಮುಂದೆ Made In India.. ₹10.5 ಲಕ್ಷ ಕೋಟಿ ಮೊಬೈಲ್​ ಉತ್ಪಾದನೆಗೆ ಕೇಂದ್ರ ಅಸ್ತು - ಉತ್ಪಾದನಾ ಸಂಬಂಧಿತ ಪ್ರೋತ್ಸಾಹ

ಈ ಯೋಜನೆಯಡಿ ಅನುಮೋದನೆ ಪಡೆದ ಕಂಪನಿಗಳು ಮುಂದಿನ ಐದು ವರ್ಷಗಳಲ್ಲಿ 2 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಲಿವೆ. ಪರೋಕ್ಷ ಉದ್ಯೋಗ ಸೇರಿ ಸುಮಾರು ಮೂರು ಪಟ್ಟು ನೇರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ ಎಂದಿದೆ..

mobile phones
ಮೊಬೈಲ್
author img

By

Published : Oct 6, 2020, 9:06 PM IST

ನವದೆಹಲಿ : ಮುಂದಿನ ಐದು ವರ್ಷಗಳಲ್ಲಿ 10.5 ಲಕ್ಷ ಕೋಟಿ ರೂ. ಮೌಲ್ಯದಷ್ಟು ಮೊಬೈಲ್ ಫೋನ್ ತಯಾರಿಕೆಯ, 'ಉತ್ಪಾದನಾ ಸಂಬಂಧಿತ ಪ್ರೋತ್ಸಾಹ'ಕ ಯೋಜನೆಯಡಿ 11,000 ಕೋಟಿ ರೂ.ಗಳ ಹೂಡಿಕೆ ಮಾಡುವ ದೇಶೀಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳ 16 ಪ್ರಸ್ತಾಪಗಳನ್ನು ತೆರವುಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪ್ರಸ್ತಾವನೆ ಪಡೆದ ಕಂಪನಿಗಳಲ್ಲಿ ಐಫೋನ್ ತಯಾರಕಾ ಆ್ಯಪಲ್‌ನ ಗುತ್ತಿಗೆ ತಯಾರಕರಾದ ಫಾಕ್ಸ್‌ಕಾನ್ ಹೊನ್ ಹೈ, ವಿಸ್ಟ್ರಾನ್ ಮತ್ತು ಪೆಗಟ್ರಾನ್, ಸ್ಯಾಮ್‌ಸಂಗ್ ಹಾಗೂ ರೈಸಿಂಗ್ ಸ್ಟಾರ್ ಒಳಗೊಂಡಿವೆ.

ಲಾವಾ, ಭಾಗವತಿ (ಮೈಕ್ರೋಮ್ಯಾಕ್ಸ್), ಪ್ಯಾಜೆಟ್ ಎಲೆಕ್ಟ್ರಾನಿಕ್ಸ್ (ಡಿಕ್ಸನ್ ಟೆಕ್ನಾಲಜೀಸ್), ಯುಟಿಎಲ್ ನಿಯೋಲಿನ್ಕ್ಸ್ ಮತ್ತು ಆಪ್ಟಿಮಸ್​ಗಳ ಪ್ರಸ್ತಾಪಗಳನ್ನು ಅಂಗೀಕರಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ (ಮೀಟಿವೈ) ಪಿಎಲ್ಐ ಯೋಜನೆಯಡಿ 16 ಅರ್ಹ ಅರ್ಜಿದಾರರನ್ನು ಅನುಮೋದಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಯೋಜನೆಯಡಿ ಅನುಮೋದನೆ ಪಡೆದ ಕಂಪನಿಗಳು ಮುಂದಿನ ಐದು ವರ್ಷಗಳಲ್ಲಿ 2 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಲಿವೆ. ಪರೋಕ್ಷ ಉದ್ಯೋಗ ಸೇರಿ ಸುಮಾರು ಮೂರು ಪಟ್ಟು ನೇರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ ಎಂದಿದೆ.

ಈ ಯೋಜನೆಯಡಿ ಅನುಮೋದನೆ ಪಡೆದ ಕಂಪನಿಗಳು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಹೆಚ್ಚುವರಿ ಹೂಡಿಕೆ 11,000 ಕೋಟಿ ರೂ.ಯಷ್ಟು ಬರಲಿದೆ. ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ ಉತ್ಪಾದನಾ ಲಿಂಕ್ಡ್ ಪ್ರೋತ್ಸಾಹಕ ಯೋಜನೆಯನ್ನು 2020ರ ಏಪ್ರಿಲ್ 1ರಂದು ಜಾರಿಗೆ ತರಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.