ETV Bharat / business

Amazonನ ಕಾರ್ಪೋರೇಟ್​​ ಸಿಬ್ಬಂದಿಗೆ ಗುಡ್​ನ್ಯೂಸ್​.. ಮನೆಯಿಂದಲೇ ಕೆಲಸ ಮಾಡಲು ಅನುಮತಿ

ಅಮೆಜಾನ್​ ಸಿಬ್ಬಂದಿಗಳಿಗೆ ಇದೀಗ ವರ್ಕ್ ಫ್ರಂ ಹೋಂ ಅವಕಾಶ ಮುಂದುವರಿಕೆ ಮಾಡಿ ಕಂಪನಿ ಹೊಸ ಆದೇಶ ಹೊರಡಿಸಿದೆ.

Amazon
Amazon
author img

By

Published : Oct 12, 2021, 8:19 PM IST

ಸಿಯಾಟಲ್(ವಾಷಿಂಗ್ಟನ್​): ಪ್ರಪಂಚದಾದ್ಯಂತ ಮಹಾಮಾರಿ ಕೊರೊನಾ ವೈರಸ್​ ಹಾವಳಿ ಸಂದರ್ಭದಲ್ಲಿ ಬಹುತೇಕ ಎಲ್ಲ ಕಂಪನಿಗಳು ವರ್ಕ್ ಫ್ರಂ ಹೋಂ​ ಅವಕಾಶ ಕಲ್ಪಿಸಿದ್ದು, ಕೆಲವೊಂದು ಕಂಪನಿಗಳಲ್ಲಿ ಈಗಲೂ ಈ ನಿರ್ಧಾರ ಮುಂದುವರೆದಿದೆ. ವಿಶ್ವದ ಅತಿದೊಡ್ಡ ಇ-ಕಾಮರ್ಸ್​​ ಕಂಪನಿಗಳಲ್ಲಿ ಒಂದಾಗಿರುವ ಅಮೆಜಾನ್​( Amazon) ಕೂಡ ಇದೇ ರೀತಿಯ ನಿರ್ಧಾರ ಕೈಗೊಂಡಿದೆ.

ಅಮೆಜಾನ್​​ ಕಾರ್ಪೋರೇಟ್​ ಸಿಬ್ಬಂದಿ ತಾವು ಇರುವ ಸ್ಥಳಗಳಿಂದಲೇ ಕೆಲಸ ಮಾಡುವುದನ್ನ ಮುಂದುವರೆಸಲು ಅನುವು ಮಾಡಿಕೊಟ್ಟಿದೆ. ಟೆಕ್​​ ಮತ್ತು ಕಾರ್ಪೋರೇಟ್​​ ಸಿಬ್ಬಂದಿ ಸದ್ಯ ತಾವು ಇರುವ ಸ್ಥಳದಿಂದಲೇ ಕೆಲಸ ಮಾಡುವಂತೆ ಕಂಪನಿ ತಿಳಿಸಿದ್ದು, ಅಗತ್ಯವಿದ್ದಾಗ ಕಚೇರಿಗೆ ಬರುವಂತೆ ತಿಳಿಸಲಾಗುವುದು ಎಂದಿದೆ.

ಹಿಂದಿನ ನಿಯಮದಲ್ಲಿ ಬದಲಾವಣೆ

ಕೊರೊನಾ ಮಹಾಮಾರಿಯಿಂದ ಈಗಾಗಲೇ ಎಲ್ಲ ವಲಯ ಚೇತರಿಕೆ ಕಾಣುತ್ತಿದ್ದು, ಹೀಗಾಗಿ ಈ ಹಿಂದೆ ಉದ್ಯೋಗಿಗಳು ವಾರದಲ್ಲಿ ಕನಿಷ್ಠ ಮೂರು ದಿನಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡಬೇಕು ಎಂಬ ನಿರ್ಧಾರ ಹೊರಡಿಸಲಾಗಿತ್ತು. ಆದರೆ, ಇದೀಗ ತಾವು ಇರುವ ಸ್ಥಳಗಳಿಂದಲೇ ಕೆಲಸ ಮಾಡಬಹುದು ಎಂದಿದೆ. ಇದಕ್ಕೆ ಅಮೆಜಾನ್​ ಸಿಇಒ ಆಂಡಿ ಜಾನ್ಸಿ ಅನುಮೋದನೆ ನೀಡಿದ್ದಾರೆ ಎಂದು ಸಿಯಾಟಲ್​ ಟಯಮ್ಸ್​ ವರದಿ ಮಾಡಿದೆ.

ಇದನ್ನೂ ಓದಿರಿ: ಹೆಚ್ಚುತ್ತಿರುವ ಜನಪ್ರಿಯತೆ : ಐಪಿಒ ಮೂಲಕ ₹1,900 ಕೋಟಿ ಸಂಗ್ರಹಕ್ಕೆ ಮುಂದಾದ ಮೊಬಿಕ್ವಿಕ್‌

ಸುಮಾರು 50 ಸಾವಿರ ಟೆಕ್​ ಮತ್ತು ಕಚೇರಿ ಉದ್ಯೋಗಿಗಳು ಪ್ರಧಾನ ಕಚೇರಿಯ ಕ್ಯಾಂಪಸ್​ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕೆಲಸ ಮಾಡ್ತಿದ್ದು, ಇದೀಗ ಮನೆಯಿಂದಲೇ ಕೆಲಸ ಮಾಡುವ ನಿರ್ಧಾರ ಕೈಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.