ನವದೆಹಲಿ: ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಸೆ.29ರಿಂದ ಅ.4ರವರೆಗೆ ನಡೆದಿತ್ತು. ಈ ಅವಧಿಯಲ್ಲಿ ಇಷ್ಟದ ವಸ್ತುವನ್ನು ಖರೀದಿ ಮಾಡುವಲ್ಲಿ ವಿಫಲವಾದವರಿಗೆ ಮತ್ತೊಂದು ಅವಕಾಶ ಇದೆ. ಗ್ರೇಟ್ ಇಂಡಿಯನ್ ಸೇಲ್ ಭರ್ಜರಿ ಯಶಸ್ಸು ಸಾಧಿಸಿದ ಹಿನ್ನೆಲೆಯಲ್ಲಿ ಅಮೆಜಾನ್ ಸೆಲಬ್ರೇಷನ್ ಸ್ಪೆಷಲ್ ಸೇಲ್ ಹಮ್ಮಿಕೊಂಡಿದೆ.
ಹೌದು. ಅ.13ರಿಂದ 17ರವರೆಗೆ ಅಮೆಜಾನ್ ಮತ್ತೊಮ್ಮೆ ಗ್ರೇಟ್ ಇಂಡಿಯನ್ ಸೆಲಬ್ರೇಷನ್ ಸ್ಪೆಷಲ್ ಸೇಲ್ ಹಮ್ಮಿಕೊಂಡಿದ್ದು, ಗ್ರಾಹಕರು ವಿಶೇಷ ಆಫರ್ಗಳನ್ನು ಪಡೆಯಬಹುದಾಗಿದೆ.
ಅಮೇಜಾನ್ Vs ಫ್ಲಿಪ್ಕಾರ್ಟ್ ದರ ಸಮರ.. ಫೆಸ್ಟಿವ್ ಸೇಲ್ನಲ್ಲಿ ಗೆದ್ದಿದ್ದು ಯಾರು..?
ಅಮೆಜಾನ್ ಪ್ರೈಮ್ ಗ್ರಾಹಕರು ಉಳಿದ ಗ್ರಾಹಕರಿಗಿಂತ ಮುಂಚಿತವಾಗಿ ಅಂದರೆ ಅ.12ರ ಮಧ್ಯಾಹ್ನ 12ರಿಂದ ಆಫರ್ ಪಡೆಯಬಹುದಾಗಿದೆ. ಅ.13ರಿಂದ ಆರಂಭವಾಗಲಿರುವ ವಿಶೇಷ ಸೇಲ್ನಲ್ಲಿ ಮೊಬೈಲ್ ಫೋನ್ಗಳಿಗೆ ಶೇ.40ರಷ್ಟು ಕಡಿತವಿರಲಿದೆ ಎಂದು ಅಮೆಜಾನ್ ಹೇಳಿದೆ.
ವಿಶೇಷವಾಗಿ ಐಫೋನ್, ಷಿಯೋಮಿ, ಒನ್ಪ್ಲಸ್, ವಿವೋ ಹಾಗೂ ಹಾನರ್ ಮೊಬೈಲ್ಗಳಿಗೆ ಆಫರ್ ಇರಲಿದೆ. ಟಿವಿ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳಿಗೆ ಶೇ.60ರಷ್ಟು ಡಿಸ್ಕೌಂಟ್ ಇರಲಿದೆ.