ನವದೆಹಲಿ : ತರಂಗಾಂತರದ ಬೆಲೆ ಏರಿಕೆಯಿಂದ ಹೆಚ್ಚಳವಾದ ಬಡ್ಡಿಯನ್ನು ಮತ್ತು ಎಜಿಆರ್ಗೆ ಪಾವತಿಸಬೇಕಾಗಿರುವ ಬಾಕಿಯನ್ನು ಪಾವತಿಸಲು ಷೇರುಗಳನ್ನು ಬಳಕೆ ಮಾಡುವುದಿಲ್ಲ ಎಂದು ಟೆಲಿಕಾಂ ಆಪರೇಟರ್ ಭಾರ್ತಿ ಏರ್ಟೆಲ್ ಸಲ್ಲಿಕೆ ಮಾಡಿರುವ ನಿಯಂತ್ರಕ ನಿಯಮಗಳಲ್ಲಿ ಸ್ಪಷ್ಟನೆ ನೀಡಿದೆ.
ಸುಧಾರಣಾ ಪ್ಯಾಕೇಜ್ನ ಅಡಿಯಲ್ಲಿ ಈ ಪಾವತಿ ಮಾಡಬೇಕಿದ್ದು, ಶುಕ್ರವಾರ ಭಾರ್ತಿ ಏರ್ಟೆಲ್ ಈ ರೀತಿಯಾಗಿ ಮಾಹಿತಿ ನೀಡಿದೆ. ಬಿಎಸ್ಇ ಫೈಲಿಂಗ್ನಲ್ಲಿ 'ಏರ್ಟೆಲ್ ಕಂಪನಿಯು ತರಂಗಾಂತರಗಳ ಹೆಚ್ಚಳವಾದ ಬಡ್ಡಿ ಮತ್ತು ಎಜಿಆರ್ (Adjusted Gross Revenue) ಬಾಕಿಯನ್ನು ಪಾವತಿ ಮಾಡಲು ಷೇರುಗಳನ್ನು ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಟೆಲಿಕಾಂ ಇಲಾಖೆಗೆ ದೃಢಪಡಿಸುತ್ತಿದ್ದೇವೆ' ಎಂದು ಏರ್ಟೆಲ್ ಉಲ್ಲೇಖಿಸಿದೆ.
ಇದನ್ನೂ ಓದಿ: NEET-PG ಪ್ರವೇಶ : ಒಬಿಸಿಗಳಿಗೆ ಶೇ.27 ಹಾಗೂ ಆರ್ಥಿಕ ದುರ್ಬಲ ವರ್ಗದವರಿಗೆ ಶೇ.10 ಮೀಸಲಾತಿ