ETV Bharat / business

ಝೀ ಷೇರು​ ಖರೀದಿಗೆ ದಿಗ್ಗಜ ಕಂಪನಿಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ

ಭಾರ್ತಿ ಏರ್​ಟೆಲ್​ ಈಗಾಗಲೇ ಆರಂಭಿಕ ಪ್ರಯತ್ನಕ್ಕೆ ಮುಂದಾಗಿದ್ದು, ಶೀಘ್ರದಲ್ಲೇ ಔಪಚಾರಿಕ ಪ್ರಸ್ತಾಪವನ್ನು ಝೀ ಮುಂದಿಡಲಿದೆ. ಮುಕೇಶ್​ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಇನ್ಫೋಕಾಮ್ ಸಹ ಬಿಡ್​ಅನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ
author img

By

Published : Apr 5, 2019, 9:06 AM IST

ನವದೆಹಲಿ: ಮೊಬೈಲ್ ದೂರ ಸಂಪರ್ಕದಲ್ಲಿ ಬದ್ಧ ವೈರಿಗಳಾಗಿ ಸ್ಪರ್ಧೆಯೊಡ್ಡುತ್ತಿರುವ ಜಿಯೋ ಹಾಗೂ ಭಾರ್ತಿ ಏರ್​ಟೆಲ್​​​ ಕಂಪನಿಗಳು ಉದ್ಯಮ ವಲಯದ ಮತ್ತೊಂದು ವಿಭಾಗದಲ್ಲಿ ಎದುರಾಳಿಯಾಗಿ ಕಾದಾಡುತ್ತಿವೆ.

ಝೀ ಎಂಟರ್ಟೈನ್ಮೆಂಟ್ ಎಂಟರ್​​ಪ್ರೈಸಸ್​​ನಲ್ಲಿ ಪಾಲುದಾರಿಕೆ ಬಿಡ್ ಸಲ್ಲಿಸಲು ಉಭಯ ಕಂಪನಿಗಳು ಮುತುವರ್ಜಿ ವಹಿಸುತ್ತಿವೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

ಝೀ ಎಂಟರ್ಟೈನ್ಮೆಂಟ್ ಸ್ವಾಧೀನಪಡಿಸಿಕೊಳ್ಳಲು ಜಪಾನಿನ ಪ್ರಮುಖ ಮಾಧ್ಯಮ ಸೋನಿ ಕಾರ್ಪೊರೇಷನ್​ ಸಹ ಬಿಡ್ ಸಲ್ಲಿಸುವ ಉತ್ಸಹದಲ್ಲಿತ್ತು. ಆದರೆ, ಮೌಲ್ಯಮಾಪನದ ವ್ಯತ್ಯಾಸ ಉಲ್ಲಂಘನೆಯಿಂದ ತನ್ನ ಬಿಡ್​​ ಸ್ಥಗಿತಗೊಳಿಸಿದೆ. ಅಮೆರಿಕದ ಕೇಬಲ್ ಕಂಪನಿ ಕಾಮ್ಕ್ಯಾಸ್ಟ್- ಅಟೈರೋಸ್ ಸಹ ಝೀ ಸ್ವಾಧೀನದ ಮಾತುಕತೆಯಲ್ಲಿ ಮುಂಚೂಣಿಯಲ್ಲಿದೆ.

ಉದ್ಯಮದಲ್ಲಿ ಝೀ ಸ್ಟೇಕ್​ ಮಾರಾಟದ ಸಂಗತಿ ಹೊರ ಬೀಳುತ್ತಿದ್ದಂತೆ ತೆರೆಮರೆಯಲ್ಲಿ ಪ್ರತಿ ಸ್ಪರ್ಧಿಗಳ ಕಸರತ್ತು ನಡೆಯುತ್ತಿದೆ. ಆದರೆ, ಕೆಲವು ಕಂಪನಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ. ಭಾರ್ತಿ ಏರ್​ಟೆಲ್​ ವಕ್ತಾರರು, 'ಏರ್​ಟೆಲ್​ ಝೀ ಖರೀದಿಸುವ ರೇಸಿಂಗ್​ ಸ್ಪರ್ಧೆಯಲ್ಲಿ ಇಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.

ಸುಭಾಷ್ ಚಂದ್ರ ನೇತೃತ್ವದ ಎಸ್ಸೆಲ್ ಗ್ರೂಪ್​ಗೆ ಹೊಡೆತ ಬೀಳುತ್ತಿದೆ. ಹಣಕಾಸಿನ ಒತ್ತಡದಿಂದಾಗಿ ಝೀ ಎಂಟರ್ಟೈನ್ಮೆಂಟ್​ನಲ್ಲಿನ ತನ್ನ ಪಾಲಿನ ಷೇರುಗಳನ್ನು ಮಾರಾಟ ಮಾಡಲು ಯೋಜಿಸುತ್ತಿದೆ. ಎಸ್ಸೆಲ್ ಗ್ರೂಪ್​​ ಪ್ರವರ್ತಕರು ಹಣಕಾಸು ಬಿಕ್ಕಟ್ಟು ಆರಂಭವಾದ ಈ ವರ್ಷದಿಂದ ಕಂಪನಿಯ ಷೇರುಗಳನ್ನು ಮಾರಾಟ ಮಾಡಲು ಆರಂಭಿಸಿದ್ದಾರೆ.

Intro:Body:

ಝೀ ಷೇರು​ ಖರೀದಿಗೆ ದಿಗ್ಗಜ ಕಂಪನಿಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.