ETV Bharat / business

ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್! ಏ.1ರ ಬಳಿಕ ವಿಮಾನ ಟಿಕೆಟ್​ ದರ ಹೆಚ್ಚಳ.. ಕಾರಣವೇನು ಗೊತ್ತೇ?

author img

By

Published : Mar 30, 2021, 12:29 PM IST

ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ವಾಯು ಭದ್ರತಾ ಶುಲ್ಕವನ್ನು (ಎಎಸ್ಎಫ್) ಹೆಚ್ಚಿಸಲು ನಿರ್ಧರಿಸಿದ್ದು, ಏಪ್ರಿಲ್ 1ರಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣವು ದುಬಾರಿಯಾಗಲಿದೆ. ದೇಶೀಯ ವಾಯು ಪ್ರಯಾಣಿಕರಿಗೆ ಎಎಸ್‌ಎಫ್ ಹೆಚ್ಚಳ 40 ರೂ. ಹಾಗೂ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ 114.38 ರೂ. ಹೊರೆಯಾಗಲಿದೆ.

Air travel
Air travel

ನವದೆಹಲಿ: ದೇಶೀಯ ಹಾಗೂ ಅಂತಾರಾಷ್ಟ್ರೀಯ ವಾಯು ಸಂಚಾರ ಮಂದಗತಿಯಲ್ಲಿ ಸಾಗುತ್ತಿರುವ ಮಧ್ಯೆಯೂ ವಿಮಾನ ದರ ಏಪ್ರಿಲ್ 1ರಿಂದ ಹೆಚ್ಚಳವಾಗುತ್ತಿದೆ.

ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆಗಳಿಗೆ ಧನಸಹಾಯ ನೀಡುವ ಎಎಸ್‌ಎಫ್ ಟಿಕೆಟ್ ದರ ನಿಗದಿಪಡಿಸುತ್ತದೆ.

ದೇಶೀಯ ಪ್ರಯಾಣಿಕರಿಗೆ ವಿಮಾನಯಾನ ಭದ್ರತಾ ಶುಲ್ಕವನ್ನು ಪ್ರತಿ ಪ್ರಯಾಣಿಕರಿಗೆ 200 ರೂ. ದರದಲ್ಲಿ ವಿಧಿಸಿದ್ದರೇ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 12 ಡಾಲರ್​ ದರದಲ್ಲಿ ವಿಧಿಸಲಾಗುತ್ತದೆ. ಹೊಸ ದರಗಳು 2021ರ ಏಪ್ರಿಲ್ 1ರಿಂದ ಅನುಷ್ಠಾನಕ್ಕೆ ಬರಲಿದೆ ಎಂದು ಡಿಜಿಸಿಎ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ: ಕರಡಿ ಹಿಂದಿಕ್ಕಿದ ಗೂಳಿ: 740 ಅಂಕ ಕುಸಿತದ ಬಳಿಕ ಮತ್ತೆ 750 ಅಂಶ ಜಿಗಿದ ಸೆನ್ಸೆಕ್ಸ್‌

ಎರಡು ವರ್ಷದೊಳಗಿನ ಮಕ್ಕಳು, ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರು, ಕರ್ತವ್ಯನಿರತ ವಿಮಾನಯಾನ ಸಿಬ್ಬಂದಿ, ಭಾರತೀಯ ವಾಯುಪಡೆಯಿಂದ ನಿರ್ವಹಿಸಲ್ಪಡುವ ವಿಮಾನದಲ್ಲಿ ಅಧಿಕೃತ ಕರ್ತವ್ಯದಲ್ಲಿ ಪ್ರಯಾಣಿಸುವ ಜನರು, ವಿಶ್ವಸಂಸ್ಥೆ ಶಾಂತಿಪಾಲನಾ ಮಿಷನ್ ಕರ್ತವ್ಯದಲ್ಲಿ ಇರುವವರು, ಸಾಗಣೆ ಪ್ರಯಾಣಿಕರು, ವರ್ಗಾವಣೆಯಾದವರಿಗೆ ಎಎಸ್ಎಫ್ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಆರು ತಿಂಗಳ ಹಿಂದೆ 2020ರ ಸೆಪ್ಟೆಂಬರ್‌ನಲ್ಲಿ ಎಎಸ್‌ಎಫ್‌ನಲ್ಲಿ ಕೊನೆಯ ಬಾರಿ ಹೆಚ್ಚಳ ಮಾಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.