ನವದೆಹಲಿ: ಏರ್ ಇಂಡಿಯಾದ ಭದ್ರತಾ ಸಿಬ್ಬಂದಿಯಾಗಿರುವ 50 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಇವರು, ಮೇ 25 ರಂದು ದೆಹಲಿಯಿಂದ ಲೂಧಿಯಾನಗೆ ಪ್ರಯಾಣ ಮಾಡಿದ್ದರು ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ಮಂಗಳವಾರ, ಚೆನ್ನೈನಿಂದ ಕೊಯಿಮತ್ತೂರಿಗೆ ಇಂಡಿಗೊ 6 ಇ 381 ವಿಮಾನದಲ್ಲಿ ಪ್ರಯಾಣಿಸಿದ 24 ವರ್ಷದ ಪ್ರಯಾಣಿಕರೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು.
ಕೊರೊನಾ ವೈರಸ್ನಿಂದ ಲಾಕ್ಡೌನ್ ಘೋಷಣೆ ಮಾಡಿದ 2 ತಿಂಗಳ ನಂತರ ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಸೋಮವಾರದಿಂದ ದೇಶಾದ್ಯಂತ ದೇಶೀಯ ವಿಮಾನ ಕಾರ್ಯಾಚರಣೆ ಪುನರಾರಂಭವಾಗಿದೆ.