ಮುಂಬೈ: ಎಚ್‌ಡಿಎಫ್‌ಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಪುರಿ 74 ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಮಾರಾಟ ಮಾಡಿ 842.87 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ ಎಂದು ರೆಗ್ಯುಲೇಟರಿ ಫೈಲಿಂಗ್ಸ್ ತಿಳಿಸಿದೆ.
ಜುಲೈ 21 ಮತ್ತು 23 ರ ನಡುವೆ ಕಾರ್ಯರೂಪಕ್ಕೆ ಬಂದ ಷೇರು ಮಾರಾಟವು ಭಾರತೀಯ ಸಾಲದಾತರಲ್ಲಿ ಆದಿತ್ಯ ಪುರಿಯ ಹಿಡುವಳಿಯನ್ನು 0.01 ಶೇಕಾಡಾದಷ್ಟು ಇಳಿಸಿದೆ.
ಆದಿತ್ಯ ಪುರಿ ಬ್ಯಾಂಕಿನಿಂದ ನಿವೃತ್ತಿಯಾಗುವುದಕ್ಕೆ ಒಂದು ತಿಂಗಳು ಮುಂಚೆಯೇ ಈ ಮಾರಾಟ ಪ್ರಕ್ರಿಯೆ ನಡೆದಿದೆ. ಬ್ಯಾಂಕ್ ವಕ್ತಾರರು ಈ ಷೇರುಗಳಿಗೆ ವಿವಿಧ ಬೆಲೆ ನಿಗದಿಪಡಿಸಲಾಗಿದೆ ಮತ್ತು ಷೇರುಗಳ ಮುಖಬೆಲೆಗೆ ಸಮನಾಗಿ ಅವುಗಳನ್ನು ನೀಡಲಾಗಿಲ್ಲ ಎಂದು ಹೇಳಿದರು.
ಪುರಿ 2019-20ನೇ ಸಾಲಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಬ್ಯಾಂಕರ್ ಆಗಿ ಹೊರಹೊಮ್ಮಿದ್ದು, ಒಟ್ಟು ಗಳಿಕೆಯಲ್ಲಿ ಶೇಕಡಾ 20ರಷ್ಟು ಆದಾಯ ಹೆಚ್ಚಿಸಿಕೊಂಡಿದ್ದರು.