ವಾಷಿಂಗ್ಟನ್: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಚೀನಾದಲ್ಲಿರುವ ಅಮೆರಿಕ ಮೂಲದ ಸುಮಾರು 200 ಕಂಪನಿಗಳು ಭಾರತಕ್ಕೆ ಬರಲು ಸಿದ್ದವಾಗಿವೆ ಎಂದು ಅಮೆರಿಕದ ಉದ್ದಿಮೆ ತಜ್ಞರು ಹೇಳಿದ್ದಾರೆ.
ಭಾರತದಲ್ಲಿ ನೂತನ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ತ್ವರಿತಗತಿಯ ಸುಧಾರಣೆಗಳು ಹಾಗೂ ಪಾರದರ್ಶಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಯುಎಸ್ಐಎಸ್ಪಿಎಫ್ ಶಿಫಾರಸು ಮಾಡಲಿದೆ. ಅಮೆರಿಕ ಕಂಪನಿಗಳು ಇಲ್ಲಿನ ಇ- ವಾಣಿಜ್ಯ ಅಥವಾ ಡೇಟಾ ಸ್ಥಳೀಕರಣ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಿವೆ. ಕಳೆದ 12-18 ತಿಂಗಳ ಹಿಂದಿನ ನಡೆಯನ್ನು ಅವಲೋಕಿಸಿ ವಾಣಿಜ್ಯ ವಲಯದಲ್ಲಿ ಹೆಚ್ಚು ಪಾರದರ್ಶಕತೆ ತರುವಂತೆ ಸರ್ಕಾರಕ್ಕೆ ಸಲಹೆ ನೀಡುತ್ತೇವೆ ಎಂದು ತಿಳಿಸಿದರು.
ನೂತನ ಸರ್ಕಾರದ ಕಾರ್ಯಸೂಚಿಗಳು ಹೂಡಿಕೆಯ ಸೆಳೆತಗಳನ್ನು ಒಳಗೊಂಡಿರಬೇಕು. ಸುಧಾರಣಾ ಕ್ರಮಗಳನ್ನು ಈ ಹಿಂದಿಗಿಂತ ವೇಗಗೊಳಿಸುವ ಅಗತ್ಯವಿದ್ದು, ಆ ಪ್ರಕ್ರಿಯೆಯಲ್ಲಿ ಹೆಚ್ಚು ಪಾರದರ್ಶಕವಾಗಿರಬೇಕು. ನಾವು ಆ ಕಂಪನಿಗಳನ್ನು ಹೇಗೆ ಆಕರ್ಷಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅಘಿ ಹೇಳಿದ್ದಾರೆ.