ನವದೆಹಲಿ : ಭಾರತವು ಈವರೆಗೆ 15 ದೇಶಗಳಿಗೆ ಕೋವಿಡ್-19 ಲಸಿಕೆ ಪೂರೈಸಿದೆ. ಇನ್ನೂ 25 ರಾಷ್ಟ್ರಗಳು ವಿವಿಧ ಹಂತಗಳಲ್ಲಿ ಸರದಿಯಲ್ಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.
ಭಾರತದಿಂದ ಲಸಿಕೆ ಪಡೆಯಲು ಮೂರು ವರ್ಗಗಳ ರಾಷ್ಟ್ರಗಳು ಉತ್ಸುಕವಾಗಿವೆ. ಬಡ, ಬೆಲೆ ನಿರ್ಧಾರಿತ ಮತ್ತು ಇತರ ದೇಶಗಳು ನೇರವಾಗಿ ಔಷಧ ತಯಾರಿಸುತ್ತಿರುವ ಕಂಪನಿಗಳೊಂದಿಗೆ ವ್ಯವಹರಿಸುತ್ತಿವೆ ಎಂದರು.
ಇದೀಗ ನಾವು ಈಗಾಗಲೇ ಸುಮಾರು 15 ದೇಶಗಳಿಗೆ ಸರಬರಾಜು ಮಾಡಿದ್ದೇವೆ (ನನ್ನ ನೆನಪಿನ ಪ್ರಕಾರ). ಸರತಿಯಿಲ್ಲಿ ವಿವಿಧ ಹಂತಗಳಲ್ಲಿ ಸುಮಾರು 25 ದೇಶಗಳಿವೆ. ಇಂದು ಅದು ಭಾರತವನ್ನು ವಿಶ್ವ ಭೂಪಟದಲ್ಲಿ ಇರಿಸಿದೆ ಎಂದು ಜೈಶಂಕರ್, ಸುದ್ದಿಗಾರರಿಗೆ ತಿಳಿಸಿದರು.
ಕೆಲವು ಬಡ ದೇಶಗಳಿಗೆ ಲಸಿಕೆ ಅನುದಾನದ ಆಧಾರದ ಮೇಲೆ ಸರಬರಾಜು ಮಾಡಲಾಗುತ್ತಿದೆ. ಕೆಲವು ರಾಷ್ಟ್ರಗಳು ಲಸಿಕೆ ತಯಾರಕರಿಗೆ ಭಾರತ ಸರ್ಕಾರ ಪಾವತಿಸುವ ಬೆಲೆಗೆ ಸಮನಾಗಿ ಬಯಸುತ್ತವೆ. ಕೆಲವು ದೇಶಗಳು ಭಾರತೀಯ ಲಸಿಕೆ ಉತ್ಪಾದಿಸುವ ಕಂಪನಿಗಳೊಂದಿಗೆ ನೇರ ಒಪ್ಪಂದಗಳನ್ನ ಮಾಡಿವೆ. ವಾಣಿಜ್ಯಿಕವಾಗಿ ಮಾತುಕತೆ ನಡೆಸಿವೆ ಎಂದು ಹೇಳಿದರು.
ಇದನ್ನೂ ಓದಿ: ಈ ಬ್ಯಾಂಕ್ಗಳಲ್ಲಿ ನೀವು ಖಾತೆ ಹೊಂದಿದ್ದಿರಾ? ಆಗಿದ್ದರೆ ಈ ದಿನಾಂಕಗಳನ್ನು ನೆನಪಿನಲ್ಲಿಡಿ
ಕೇಂದ್ರವು ಈಗಾಗಲೇ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಮತ್ತು ಆಕ್ಸ್‌ಫರ್ಡ್‌ನ ಕೋವಿಶೀಲ್ಡ್ ಈ ಎರಡು ಲಸಿಕೆಗಳಿಗೆ ಅನುಮತಿ ನೀಡಿದೆ. ಜನವರಿ 16ರಿಂದ ತುರ್ತು ಬಳಕೆಗೆ ಅನುಮತಿಸಿದ್ದರಿಂದಾಗಿ ಈಗಾಗಲೇ ಲಕ್ಷಾಂತರ ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡಲಾಗಿದೆ.