ETV Bharat / budget-2019

''5​ ಟ್ರಿಲಿಯನ್​ ಡಾಲರ್​ ಎಕಾನಮಿ ಸಾಧಿಸ್ಬೇಕೆ?, ಮೂಲಸೌಕರ್ಯಕ್ಕೆ 1.4 ಮಿಲಿಯನ್​ ಡಾಲರ್​ ಕೊಡಿ''

ಭಾರತ ಅಭಿವೃದ್ಧಿಶೀಲ ರಾಷ್ಟ್ರ. ಇತ್ತೀಚೆಗೆ ಜಿಡಿಪಿ ಕೂಡಾ ಭಾರಿ ಕುಸಿತ ಕಂಡಿದೆ. ಅದರೂ 5 ಟ್ರಿಲಿಯನ್​ ಡಾಲರ್​ ಎಕಾನಮಿ ಕನಸನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾಣುತ್ತಿದೆ. ಇದನ್ನು ಸಾಕಾರಗೊಳಿಸಲು ಆರ್ಥಿಕ ಸಮೀಕ್ಷೆ ಕೆಲವೊಂದು ಮಾಹಿತಿಯನ್ನು ಹೊರಹಾಕಿದೆ.

India needs to spend USD 1.4 trillion on infrastructure during
ಮೂಲಸೌಕರ್ಯಕ್ಕೆ 1.4 ಮಿಲಿಯನ್ ಡಾಲರ್ ಹೂಡಿಕೆ ಅಗತ್ಯ ಎಂದ ಆರ್ಥಿಕ ಸಮೀಕ್ಷೆ
author img

By

Published : Jan 31, 2020, 4:02 PM IST

ನವದೆಹಲಿ: ದೇಶ 5 ಟ್ರಿಲಿಯನ್​ ಡಾಲರ್​ ಆರ್ಥಿಕತೆಯನ್ನು ಸಾಧಿಸಬೇಕಾದರೆ 2020-2025ನೇ ಹಣಕಾಸು ವರ್ಷದಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ1.4 ಮಿಲಿಯನ್​ ಡಾಲರ್​ ಅನ್ನು ವ್ಯಯಿಸಬೇಕೆಂದು ಆರ್ಥಿಕ ಸಮೀಕ್ಷೆಯೊಂದು ಹೇಳಿದೆ.

ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ಈ ರೀತಿಯಾಗಿ ಉಲ್ಲೇಖಿಸಲಾಗಿದೆ. ವಿದ್ಯುತ್​​​​ ಕ್ಷೇತ್ರದಲ್ಲಿ ಹಾಗೂ ಸಾರಿಗೆ ಕ್ಷೇತ್ರದಲ್ಲಿ ಹಣಕಾಸು ಕೊರತೆ ದೇಶದ ಒಟ್ಟಾರೆಯಾಗಿ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಹಣ ವ್ಯಯಿಸೋದು ಅತ್ಯಗತ್ಯ ಎಂದು 2019 ಹಾಗೂ 20ರ ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ.

2024-25ರಲ್ಲಿ ಮೂಲಸೌಕರ್ಯ ವಲಯದಲ್ಲಿ 1.4 ಮಿಲಿಯನ್​ ಡಾಲರ್​ ಅಂದ್ರೆ ಸುಮಾರು 100 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಿದರೆ ಭಾರತದ ಮಹತ್ವಾಕಾಂಕ್ಷೆಯ 5 ಟ್ರಿಲಿಯನ್​ ಡಾಲರ್ ಎಕಾನಮಿಯನ್ನು ಸಾಧಿಸುವುದು ಕಷ್ಟವಾಗುವುದಿಲ್ಲ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಎನ್​ಐಪಿ ಅಂದ್ರೆ ನ್ಯಾಷನಲ್​ ಇನ್ಫ್ರಾಸ್ಟ್ರಕ್ಷರ್​ ಪೈಪ್​ಲೈನ್​ ಯೋಜನೆಗಳನ್ನು ಸಿದ್ಧಪಡಿಸುವ ನಿರೀಕ್ಷೆಯಿದ್ದು ಈ ಮೂಲಕ ಉದ್ಯೋಗಗಳು ಸೃಷ್ಟಿಯಾಗಿ, ಜೀವನ ಮಟ್ಟ ಸುಧಾರಿಸುತ್ತದೆ. ಇದರಿಂದಾಗಿ ಆರ್ಥಿಕ ಬೆಳವಣಿಗೆ ಸುಲಭವಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

ನ್ಯಾಷನಲ್​ ಇನ್ಫ್ರಾಸ್ಟ್ರಕ್ಷರ್​ ಪೈಪ್​ಲೈನ್ ಪ್ರಕಾರ, ಮೂಲಸೌಕರ್ಯ ಯೋಜನೆಗಳಿಗೆ ಕೇಂದ್ರ ಸರ್ಕಾರ ಶೇ. 39ರಷ್ಟು ಮತ್ತು ರಾಜ್ಯ ಸರ್ಕಾರ ಶೇ. 39ರಷ್ಟು ಖಾಸಗಿ ವಲಯಗಳು ಶೇ. 22ರಷ್ಟು ಬಂಡವಾಳ ನೀಡಲಿವೆ ಎಂಬ ನಿರೀಕ್ಷೆ ಕೂಡ ಇದೆ. ಈಗಾಗಲೇ 42.7 ಲಕ್ಷ ಕೋಟಿ ಮೌಲ್ಯದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಜಾರಿಯಲ್ಲಿವೆ.

ದೇಶದಲ್ಲಿ ಮೂಲ ಸೌಕರ್ಯ ವ್ಯವಸ್ಥೆ ಹೇಗಿದೆ..?

India needs to spend USD 1.4 trillion on infrastructure during
ಮೂಲಸೌಕರ್ಯಕ್ಕೆ 1.4 ಮಿಲಿಯನ್​ ಡಾಲರ್ ಹೂಡಿಕೆ ಅಗತ್ಯ ಎಂದ ಆರ್ಥಿಕ ಸಮೀಕ್ಷೆ

ಮೂಲಸೌಕರ್ಯಗಳಲ್ಲಿ ರಸ್ತೆ ಸಾರಿಗೆ ಅತಿ ಮುಖ್ಯವಾಗಿದ್ದು, 2014 ಹಾಗೂ 2019ರ ಅವಧಿಯಲ್ಲಿ ಒಟ್ಟು ಹೂಡಿಕೆ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ರೈಲ್ವೆ ಸಾರಿಗೆ 2018-19ನೇ ಸಾಲಿನಲ್ಲಿ 120 ಕೋಟಿ ಟನ್​ ಸರಕುಗಳನ್ನು ಸಾಗಿಸಿದೆ. 840 ಕೋಟಿ ಮಂದಿ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಸದ್ಯಕ್ಕೆ ವಿಶ್ವದ ಅತಿ ದೊಡ್ಡ ಸಾರಿಗೆ ವ್ಯವಸ್ಥೆಯೆಂಬ ಹಿರಿಮೆಗೆ ಭಾರತೀಯ ರೈಲ್ವೆ ಪಾತ್ರವಾಗಿದೆ. ನಾಲ್ಕನೇ ಅತಿ ದೊಡ್ಡ ಸರಕು ಸಾಗಣೆ ವ್ಯವಸ್ಥೆಯಾಗಿ ಭಾರತೀಯ ರೈಲ್ವೆ ಹೊರಹೊಮ್ಮಿದೆ.

ವಿಮಾನಯಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. 136 ವಿಮಾನ ನಿಲ್ದಾಣಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ವಹಿಸುತ್ತಿದೆ. ಆರು ವಿಮಾನ ನಿಲ್ದಾಣಗಳನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತಿದೆ. ಸೇವೆಗೆ ಅಲಭ್ಯವಾಗಿದ್ದ 43 ವಿಮಾನ ನಿಲ್ದಾಣಗಳನ್ನು ಕಾರ್ಯಗತಗೊಳಿಸಲಾಗಿದೆ. 2023-24ರ ವೇಳೆಗೆ ಇನ್ನೂ 100 ವಿಮಾನ ನಿಲ್ದಾಣಗಳು 680 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ ಎಂದು ಸಮೀಕ್ಷೆ ಹೇಳಿದೆ.

ಜಲಸಾರಿಗೆ ಕೂಡಾ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ. ವಿದೇಶಗಳೊಂದಿಗಿನ ಹೆಚ್ಚಿನ ವ್ಯಾಪಾರ ಸಾಗರದ ಮುಖಾಂತರವೇ ನಡೆಯುತ್ತಿದೆ. ಇಲ್ಲೂ ಕೂಡಾ ಸಾಕಷ್ಟು ಬೆಳವಣಿಗೆಗಳಾಗಿವೆ. ಸೆಪ್ಟಂಬರ್ 30, 2019ರ ಹೊತ್ತಿಗೆ ದೇಶವು 1,419 ಹಡಗುಗಳನ್ನು ಹೊಂದಿದೆ. ದೇಶದ ಪ್ರಮುಖ ಬಂದರುಗಳು ಮಾರ್ಚ್​ 2019ರ ವೇಳೆಗೆ ಸುಮಾರು 1514.19 ಮಿಲಿಯನ್ ಟನ್​ನಷ್ಟು ಸರಕುಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ. ಯಾಂತ್ರೀಕರಣ, ಡಿಜಿಟಲೀಕರಣಗಳ ಮೂಲಕ ಹಡಗುಗಳ ದಕ್ಷತೆಯನ್ನು ಸುಧಾರಿಸಲು ಹಡಗು ಸಚಿವಾಲಯವು ಪ್ರಯತ್ನಿಸುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ.

ವಿದ್ಯುತ್ ಉತ್ಪಾದನೆ ಮತ್ತು ಹಂಚಿಕೆಯಲ್ಲಿ ಸಾರ್ವತ್ರಿಕ ವಿದ್ಯುದೀಕರಣ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಇದಕ್ಕಾಗಿ ಪ್ರಧಾನ್ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ ಅಂದ್ರೆ ಸೌಭಾಗ್ಯ ಯೋಜನೆಯನ್ನು ಸೆಪ್ಟಂಬರ್​ 25, 2017ರಂದು ಜಾರಿಗೊಳಿಸಲಾಗಿತ್ತು. ಈ ಮೂಲಕ ಎಲ್ಲಾ ರಾಜ್ಯಗಳಲ್ಲಿ ಯೋಜನೆ ಜಾರಿಗೊಳಿಸಿ ವಿದ್ಯುದ್ಧೀಕರಣ ಮಾಡಲಾಗಿದೆ ಎಂದು ಸಮೀಕ್ಷೆಯು ವರದಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.