ETV Bharat / briefs

ಕ್ರಿಕೆಟ್​​ನಲ್ಲಿ ಸಿಕ್ಸರ್​ಗಳ ಸರದಾರನ 6,822 ದಿನ, 14,064 ಎಸೆತ, 11,788 ರನ್​, 1,496 ಸಿಕ್ಸ್​​-ಫೋರ್​​​​! - ವಿದಾಯ

ಟೀಂ ಇಂಡಿಯಾ ಕ್ರಿಕೆಟ್​​ನಲ್ಲಿ ಮಿಂಚಿದ್ದ ಸಿಕ್ಸರ್​ ಕಿಂಗ್​​ ಯುವರಾಜ್​ ಸಿಂಗ್​ ವಿದಾಯ ಘೋಷಣೆ ಮಾಡಿದ್ದು, ಟೀಂ ಇಂಡಿಯಾ 28 ವರ್ಷಗಳ ಬಳಿಕ ವಿಶ್ವಕಪ್​ ಗೆಲ್ಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಇವರಿಗೆ ಹೇಳಿಕೊಳ್ಳುವಂತಹ ವಿದಾಯ ಸಿಗದಿರುವುದು ಮಾತ್ರ ವಿಪರ್ಯಾಸ.

ಯುವರಾಜ್​ ಸಿಂಗ್​​
author img

By

Published : Jun 10, 2019, 8:47 PM IST

ಮುಂಬೈ: 2000ನೇ ಇಸ್ವಿಯಲ್ಲಿ ಟೀಂ ಇಂಡಿಯಾ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಸಿಕ್ಸರ್​ಗಳ ಸರದಾರ ಯುವರಾಜ್​ ಸಿಂಗ್​ ಬರೋಬ್ಬರಿ 19 ವರ್ಷಗಳ ಬಳಿಕ ತಮ್ಮ ಕ್ರಿಕೆಟ್​ ವೃತ್ತಿ ಬದುಕಿಗೆ ಭಾವುಕರಾಗಿ ವಿದಾಯ ಘೋಷಣೆ ಮಾಡಿದ್ದಾರೆ.

Yuvraj Singh retires
ಯುವರಾಜ್​ ಸಿಂಗ್​​

ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಯುವಿ ಒಟ್ಟು 304 ಏಕದಿನ ಪಂದ್ಯಗಳಲ್ಲಿ 8,701 ರನ್ ಸಿಡಿಸಿದ್ದು, 2017ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸವೇ ಅವರ ಕೊನೆ ಏಕದಿನ ಪಂದ್ಯ. 2003ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದು, 40 ಪಂದ್ಯಗಳಲ್ಲಿ 1,900 ರನ್ ಗಳಿಸಿದ್ದಾರೆ. 2007ರಲ್ಲಿ ಮೊದಲ ಟಿ-20 ಕ್ರಿಕೆಟ್ ಪಂದ್ಯವನ್ನು ಸ್ಕಾಟ್​​​ಲ್ಯಾಂಡ್ ವಿರುದ್ಧ ಆಡಿದ್ದು, ಇದುವರೆಗೂ 58 ಪಂದ್ಯಗಳಿಂದ 1,177 ರನ್ ಸಿಡಿಸಿದ್ದಾರೆ. ಉಳಿದಂತೆ ಲೆಗ್ ಸ್ಪಿನ್ ಬೌಲರ್ ಆಗಿ ಟೆಸ್ಟ್, ಏಕದಿನ, ಟಿ-20 ಮಾದರಿಯಲ್ಲಿ ಕ್ರಮವಾಗಿ 9, 111, 28 ವಿಕೆಟ್ ಪಡೆದಿದ್ದಾರೆ.

Yuvraj Singh retires
ಅದ್ಭುತ ಫಿಲ್ಡರ್​ ಈ ಯುವಿ

ಒಟ್ಟು 6,822 ದಿನ ಕ್ರಿಕೆಟ್​ ಆಡಿರುವ ಯುವರಾಜ್​ ಸಿಂಗ್,​ ಒಟ್ಟು 14,064 ಎಸೆತ ಎದುರಿಸಿದ್ದು, 11,788 ರನ್​ ಸಿಡಿಸಿದ್ದಾರೆ. ಇದರಲ್ಲಿ 1,496 ಸಿಕ್ಸ್​​-ಫೋರ್ ಸೇರಿರುವುದು ವಿಶೇಷ. ಇನ್ನು ಕ್ರಿಕೆಟ್​ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ಯುವಿ ಮುಟ್ಟಿರುವುದೆಲ್ಲ ಚಿನ್ನ. 2007 ಹಾಗೂ 2011ರ ವಿಶ್ವಕಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

Yuvraj Singh retires
ಸಹ ಆಟಗಾರರೊಂದಿಗೆ ಸಂಭ್ರಮ

ಈ ಹಿಂದಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲೂ ಯುವಿ ದುಬಾರಿ ಬೆಲೆಗೆ ಬಿಕರಿಗೊಂಡು ದಾಖಲೆ ಬರೆದಿದ್ದಾರೆ. 2014 ರಲ್ಲಿ ಬರೋಬ್ಬರಿ 16 ಕೋಟಿ ರೂ. ಹಾಗೂ 2015ರಲ್ಲಿ 16 ಕೋಟಿ ರೂ.ಗಳಿಗೆ ಹರಾಜುಗೊಳ್ಳುವ ಮೂಲಕ ದುಬಾರಿ ಆಟಗಾರನೆಂಬ ದಾಖಲೆ ಬರೆದಿದ್ದರು. ತದನಂತರ 2017, 2018, 2019 ರಲ್ಲಿ ಕ್ರಮವಾಗಿ 7, 2, 1 ಕೋಟಿ ರೂ.ಗೆ ಹರಾಜುಗೊಂಡಿದ್ದರು.

Yuvraj Singh retires
ಬ್ಯಾಟಿಂಗ್​ನಲ್ಲೂ ಮಿಂಚು

Intro:Body:

ಕ್ರಿಕೆಟ್​​ನಲ್ಲಿ ಸಿಕ್ಸರ್​ಗಳ ಸರದಾರನ 6,822 ದಿನ,14,064 ಎಸೆತ,11,788ರನ್​,1,496 ಸಿಕ್ಸ್​​-ಫೋರ್​! 

ಮುಂಬೈ: 2000ನೇ ಇಸ್ವಿಯಲ್ಲಿ ಟೀಂ ಇಂಡಿಯಾ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಸಿಕ್ಸರ್​ಗಳ ಸರದಾರ ಯುವರಾಜ್​  ಸಿಂಗ್​ ಬರೋಬ್ಬರಿ 19 ವರ್ಷಗಳ ಬಳಿಕ ತಮ್ಮ ಕ್ರಿಕೆಟ್​ ವೃತ್ತಿ ಬದುಕಿಗೆ ಭಾವುಕರಾಗಿ ವಿದಾಯ ಘೋಷಣೆ ಮಾಡಿದ್ದಾರೆ. 

ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಯುವಿ ಒಟ್ಟು 304 ಏಕದಿನ ಪಂದ್ಯಗಳಲ್ಲಿ 8,701 ರನ್ ಸಿಡಿಸಿದ್ದು, 2017ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸವೇ ಅವರ ಕೊನೆ ಏಕದಿನ ಪಂದ್ಯ. 2003 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದು, 40 ಪಂದ್ಯಗಳಲ್ಲಿ 1,900 ರನ್ ಗಳಿಸಿದ್ದಾರೆ. 2007ರಲ್ಲಿ ಮೊದಲ ಟಿ20 ಕ್ರಿಕೆಟ್ ಪಂದ್ಯವನ್ನು ಸ್ಕಾಟ್ ಲ್ಯಾಂಡ್ ವಿರುದ್ಧ ಆಡಿದ್ದು, ಇದುವರೆಗೂ 58 ಪಂದ್ಯಗಳಿಂದ 1,177 ರನ್ ಸಿಡಿಸಿದ್ದಾರೆ. ಉಳಿದಂತೆ ಲೆಗ್ ಸ್ಪಿನ್ ಬೌಲರ್ ಆಗಿ ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲಿ ಕ್ರಮವಾಗಿ 9, 111, 28 ವಿಕೆಟ್ ಪಡೆದಿದ್ದಾರೆ.

ಒಟ್ಟು 6,822 ದಿನ ಕ್ರಿಕೆಟ್​ ಆಡಿರುವ ಯುವರಾಜ್​ ಸಿಂಗ್​ ಒಟ್ಟು 14,064 ಎಸೆತ ಎದುರಿಸಿದ್ದು, 11,788ರನ್​ ಸಿಡಿಸಿದ್ದಾರೆ. ಇದರಲ್ಲಿ 1,496 ಸಿಕ್ಸ್​​-ಫೋರ್ ಸೇರಿರುವುದು ವಿಶೇಷ. ಇನ್ನು ಕ್ರಿಕೆಟ್​ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ಯುವಿ ಮುಟ್ಟಿರುವುದೆಲ್ಲ ಚಿನ್ನ. 2007 ಹಾಗೂ 2011ರ ವಿಶ್ವಕಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಂಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. 

ಈ ಹಿಂದಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲೂ ಯುವಿ ದುಬಾರಿ ಬೆಲೆಗೆ ಬಿಕರಿಗೊಂಡು ದಾಖಲೆ ಬರೆದಿದ್ದಾರೆ.2014 ರಲ್ಲಿ ಬರೋಬ್ಬರಿ 16 ಕೋಟಿ ರೂ. ಹಾಗೂ 2015ರಲ್ಲಿ 16 ಕೋಟಿ ರೂ. ಗಳಿಗೆ ಹರಾಜುಗೊಳ್ಳುವ ಮೂಲಕ ದುಬಾರಿ ಆಟಗಾರನೆಂಬ ದಾಖಲೆ ಬರೆದಿದ್ದರು. ತದನಂತರ 2017, 2018, 2019 ರಲ್ಲಿ ಕ್ರಮವಾಗಿ 7, 2, 1 ಕೋಟಿ ರೂ.ಗೆ ಹರಾಜು ಆಗಿದ್ದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.