ಮುಂಬೈ: ಮೇ 30 ರಿಂದ ಐಸಿಸಿ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಕಳೆದ 4 ವರ್ಷದಿಂದ ಆಟಗಾರರು ಯಾವ ರೀತಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪ್ರದರ್ಶನ ನೀಡಿದ್ದಾರೆ ಎಂಬುದರ ಮೇಲೆ ಟೀಂ ಇಂಡಿಯಾ ಆಟಗಾರರ ಆಯ್ಕೆ ನಿಂತಿದೆ ಹೊರತು ಐಪಿಎಲ್ನಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುವುದರಿಂದಲ್ಲ ಎಂದು ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ರಾಷ್ಟ್ರೀಯ ಆಯ್ಕೆಗಾರರು ವಿಶ್ವಕಪ್ನ 15 ಸದಸ್ಯರ ತಂಡದ ಆಯ್ಕೆಗಾಗಿ ಐಪಿಎಲ್ ನೋಡುತ್ತಿದ್ದಾರೆ. ಆದರೆ ಕ್ರಿಕೆಟ್ನ ಮೆಗಾ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡುವಾಗ ಐಪಿಎಲ್ನಂತಹ ಲೀಗ್ ನಲ್ಲಿ ತೋರುವ ಪ್ರದರ್ಶನ ಲೆಕ್ಕಕ್ಕೆ ಬರುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ನಾವು ಸಾಕಷ್ಟು ಏಕದಿನ ಪಂದ್ಯ ಹಾಗೂ ಟಿ20 ಪಂದ್ಯಗಳನ್ನಾಡಿದ್ದೇವೆ. ವಿಶ್ವಕಪ್ಗೆ ಆಯ್ಕೆ ಮಾಡಲು ಆಯ್ಕೆಗಾರರಿಗೆ ಅಷ್ಟು ಸಾಕು ಎಂದಿದ್ದಾರೆ.
ಇನ್ನು ತಾವು ವಿಶ್ವಕಪ್ಗೂ ಮುನ್ನ ಐಪಿಎಲ್ನಲ್ಲಾಡುತ್ತಿರುವುದು ನನಗೆ ಉತ್ತಮ ವಿಶ್ವಕಪ್ಗೆ ತಯಾರಾಗಲು ಸಹಾಯಕವಾಗುತ್ತಿದೆ. ಐಪಿಎಲ್ ಮುಕ್ತಾಯವಾಗುತ್ತಿದ್ದಂತೆ ನಮಗೆ ಯಾವಾಗಲು ಬಹುದೊಡ್ಡ ಟೂರ್ನಿಗಳಿರುತ್ತವೆ. ಐಪಿಎಲ್ ನಮಗೆ ವಿಶ್ವಾಸ ತುಂಬುತ್ತದೆ ಎಂದು ತಿಳಿಸಿದ್ದಾರೆ.