ETV Bharat / briefs

ರಸ್ತೆ ಅಗಲೀಕರಣ ಗೊಂದಲಕ್ಕೆ ನೀವೇ ಹೊಣೆ : ಶಾಸಕ ಆರ್‌ ವಿ ದೇಶಪಾಂಡೆ ಹೇಳಿಕೆಗೆ ಎಂಎಲ್‌ಎ ಸುನಿಲ್​ ನಾಯ್ಕ ತಿರುಗೇಟು

author img

By

Published : Jun 1, 2021, 10:12 PM IST

ನನಗೆ ಅನುಭವವಿಲ್ಲ. ಆದರೆ, ದಾಖಲೆ ಸಮೇತ ಬಂದಿದ್ದಲ್ಲಿ ನಿಮ್ಮೆಲ್ಲ ತಪ್ಪನ್ನ ನಾನು ಸಹ ದಾಖಲೆ ಸಹಿತ ನಿಮ್ಮ ಮುಂದೆ ಬಂದು ಕುಳಿತುಕೊಳ್ಳುವೆ.‌ ನಾನು ವಯಸ್ಸಿನಲ್ಲೂ ಅನುಭವದಲ್ಲೂ ಚಿಕ್ಕವನು. ಆದರೆ, ತಪ್ಪನ್ನು ಎತ್ತಿ ಹಿಡಿಯಲು ಇದ್ಯಾವುದು ಗಣನೆಗೆ ಬರುವುದಿಲ್ಲ. ಸದ್ಯ ಹೆದ್ದಾರಿ ಅಗಲೀಕರಣದ ಸಂಪೂರ್ಣ ಹೊಣೆಗಾರಿಕೆ ಆರ್.ವಿ. ದೇಶಪಾಂಡೆ ಎಂಬುದನ್ನು ಪುನರುಚ್ಚರಿಸಲಿದ್ದೇನೆ‌‌‌‌..

ಭಟ್ಕಳ
ಭಟ್ಕಳ

ಭಟ್ಕಳ : ಭಟ್ಕಳ ಶಾಸಕರಿಗೆ ತಿಳುವಳಿಕೆ ಕಡಿಮೆ. ಹೊಸದಾಗಿ ಆಯ್ಕೆಯಾದ ಶಾಸಕರಾಗಿದ್ದಕ್ಕೆ ಅನುಭವವಿಲ್ಲ ಹಾಗೂ ಪ್ರಚಾರಕ್ಕೆ ಹೇಳಿಕೆ ನೀಡಿರಬಹುದು ಎಂದು ಮಾಜಿ ಉಸ್ತುವಾರಿ ಸಚಿವ, ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಹೇಳಿಕೆ ನೀಡಿದ್ದರು.

ಈ ಬಗ್ಗೆ ಮಾತನಾಡಿದ ನೀಡಿದ ಭಟ್ಕಳ ಶಾಸಕ ಸುನಿಲ್​ ನಾಯ್ಕ, ಹೆದ್ದಾರಿ ಅಗಲೀಕರಣದಲ್ಲಿ ಗೊಂದಲ ನಿರ್ಮಾಣವಾಗಲು ಮತ್ತು ಜನರಿಗೆ ಸಮಸ್ಯೆ‌ಯಾಗಿದ್ದಕ್ಕೆ ನೀವೇ ಹೊಣೆಗಾರರು. ಹಾಗೂ ನಿಮ್ಮ ರಾಜಕೀಯ ಅನುಭವಕ್ಕೆ ಇಷ್ಟು ದಿನದಲ್ಲಿ‌ ಜಿಲ್ಲೆಯಲ್ಲಿ ಎರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬಹುದಾಗಿತ್ತು ಎಂದು ತಿರುಗೇಟು ನೀಡಿದ್ದಾರೆ.

ದೇಶಪಾಂಡೆ ಅವರು ಜಿಲ್ಲೆಯ ಹಿರಿಯ ಮುತ್ಸದಿಗಳು. ನಿಮ್ಮ ಅವಧಿಯಲ್ಲಿ ಇಲ್ಲಿನ ಮಾಜಿ ಶಾಸಕರು ಮತ್ತು ಮುಖಂಡರಿಂದಲೇ ಜನರಿಗೆ ಸಮಸ್ಯೆ ಆಗಿದೆ ಎಂದು ನೀವೇ ಒಪ್ಪಿಕೊಂಡಿದ್ದೀರಿ. ಇದರಲ್ಲಿ ನನ್ನ ವೈಯಕ್ತಿಕ ವಿಚಾರ ಏನುೂ ಇಲ್ಲ.

ನನಗೆ ಅನುಭವವಿಲ್ಲ. ಹಾಗಿದ್ದರೆ, ಎಲ್ಲ‌‌ ಗೊತ್ತಿರುವ ನೀವುಗಳೇ ಈ ರೀತಿ ಜನರಿಗೆ ತೊಂದರೆ ಕೊಟ್ಟಿರುವ ಕಾರಣ ಏನು?. ಇದೇ ಮಾಜಿ ಶಾಸಕರು ಶಿರಾಲಿಯಲ್ಲಿ ನಡೆದ ರಸ್ತೆ ಅಗಲೀಕರಣದ ಪ್ರತಿಭಟನೆಗೆ ಬೆಂಬಲ‌ ಸೂಚಿಸಿದ್ದು ನೆನಪಿದೆಯಾ? ನೀವೇ ಬೆಳೆಸಿರುವ ಕೂಸುಗಳಿವರೆಲ್ಲರೂ ಎಂದು ತಿರುಗೇಟು ನೀಡಿದರು.

ನನಗೆ‌ ಪ್ರಚಾರದ ಅವಶ್ಯಕತೆ ಇಲ್ಲ. ಜನರ ಸೇವೆಗೆ ನಾನು ಬಂದಿದ್ದು, ಆ ಕಾರಣದಿಂದ ಈ ವಿಚಾರ ಪ್ರಸ್ತಾಪಿಸಿದ್ದೇನೆ. ಆಡದೇ ಮಾಡುವವನು ರೂಢಿಯಲ್ಲಿ ಉತ್ತಮನು ಎಂಬ ಮಾತಿನಂತೆ ಕ್ಷೇತ್ರದಲ್ಲಿ ನನ್ನಿಂದಾಗುವ ಅಭಿವೃದ್ಧಿ ಕೆಲಸ ಮಾಡುತ್ತಾ ಬಂದಿದ್ದೇನೆ.

ಸದ್ಯ ರಸ್ತೆ ಅಗಲೀಕರಣದಿಂದ‌‌ ಭಟ್ಕಳ‌ದ ಪರಿಸ್ಥಿತಿ ಅವಲೋಕಿಸಿ 45 ಮೀ ರಸ್ತೆ ಅಗಲೀಕರಣಕ್ಕೆ ಆದೇಶವಾಗಿದ್ದನ್ನ 30 ಮೀ.ಗೆ ಬದಲಾಯಿಸುತ್ತೀರಿ ಎಂದರೆ ಇದರ ಬಗ್ಗೆ ಜನರಿಗೆ ನೀವೇ ಉತ್ತರಿಸಬೇಕು ಎಂದರು.

ನನಗೆ ಅನುಭವವಿಲ್ಲ. ಆದರೆ, ದಾಖಲೆ ಸಮೇತ ಬಂದಿದ್ದಲ್ಲಿ ನಿಮ್ಮೆಲ್ಲ ತಪ್ಪನ್ನ ನಾನು ಸಹ ದಾಖಲೆ ಸಹಿತ ನಿಮ್ಮ ಮುಂದೆ ಬಂದು ಕುಳಿತುಕೊಳ್ಳುವೆ.‌ ನಾನು ವಯಸ್ಸಿನಲ್ಲೂ ಅನುಭವದಲ್ಲೂ ಚಿಕ್ಕವನು. ಆದರೆ, ತಪ್ಪನ್ನು ಎತ್ತಿ ಹಿಡಿಯಲು ಇದ್ಯಾವುದು ಗಣನೆಗೆ ಬರುವುದಿಲ್ಲ. ಸದ್ಯ ಹೆದ್ದಾರಿ ಅಗಲೀಕರಣದ ಸಂಪೂರ್ಣ ಹೊಣೆಗಾರಿಕೆ ಆರ್.ವಿ. ದೇಶಪಾಂಡೆ ಎಂಬುದನ್ನು ಪುನರುಚ್ಚರಿಸಲಿದ್ದೇನೆ‌‌‌‌ ಎಂದರು.

ನಿಮ್ಮಲ್ಲಿನ ರಾಜಕೀಯ ಶಕ್ತಿಗೆ, ಹಿರಿತನಕ್ಕೆ 35 ವರ್ಷದ ಆಳಿದ್ದರೂ ಕೊಡುಗೆಯಾಗಿ ಜಿಲ್ಲೆಯಲ್ಲಿ ಇಷ್ಟು ವರ್ಷದಲ್ಲಿ ಎರಡು ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ತೆರೆದು ಜನರ ಸೇವೆ ಮಾಡಬಹುದಾಗಿತ್ತು. ಆದರೆ, ಏನು ಮಾಡಿದ್ದಾರೆಂಬುದು ಜನರಿಗೆ ತಿಳಿದಿದೆ.

ಈಗಲು ನಿಮಗೆ ಎರಡು ಆಸ್ಪತ್ರೆಗೆ ನಿರ್ಮಾಣ ಮಾಡುವ ಶಕ್ತಿಯಿದೆ‌. ಉಚಿತವಾಗಿ ಅಲ್ಲದಿದ್ದರೂ ಜನರಿಗೆ ಆಸ್ಪತ್ರೆ ಬೇಕಿದೆ. ಅದರ ಬಗ್ಗೆ ಗಮನ ಹರಿಸುತ್ತೀರಿ ಎಂದು ತಿಳಿದುಕೊಂಡಿದ್ದೇನೆ ಎಂದು ಪ್ರತ್ಯುತ್ತರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.