ಮುಂಬೈ: ಭಾರತ ಮಹಿಳಾ ತಂಡದ ಯುವ ಆಟಗಾರ್ತಿ ಜಮೈಮಾ ರೋಡ್ರಗಾಸ್ ಕಿಯಾ ಸೂಪರ್ ಲೀಗ್ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ.
18 ವರ್ಷದ ಆರಂಭಿಕ ಆಟಗಾರ್ತಿ ಜಮೈಮಾ ಯಾರ್ಕ್ಶೈರ್ ಡೈಮಂಡ್ಸ್ ತಂಡದ ಪರವಾಗಿ 2019ರ ಸೀಸನ್ನಲ್ಲಿ ಆಡಲಿದ್ದಾರೆ. ಈಗಾಗಲೇ ಯಾರ್ಕ್ಶೈರ್ ಆಡಳಿತ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ರೋಡ್ರಿಗಾಸ್ಗೂ ಮೊದಲೇ ಟೀಂ ಇಂಡಿಯಾದ ನಾಯಕಿ ಹರ್ಮನ್ ಪ್ರೀತ್ ಕೌರ್ ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಕಿಯಾ ಸೂಪರ್ ಲೀಗ್ನ 2018ರ ಸೀಸನ್ನಲ್ಲಿ ಆಡಿದ್ದರು. ಇದೀಗ ಭಾರತದ ಮೂರನೇ ಆಟಗಾರ್ತಿಯಾಗಿ ಜಮೈಮಾ ಪ್ರಸಿದ್ಧ ಟಿ-20 ಲೀಗ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜಮೈಮಾ ಭಾರತ ತಂಡದ ಪರ 25 ಟಿ-20 ಪಂದ್ಯಗಳನ್ನಾಡಿದ್ದು, 608 ರನ್ ಗಳಿಸಿದ್ದಾರೆ. ಅಂಡರ್ 19 ವಿಭಾಗದ ಪ್ರಥಮ ದರ್ಜೆ ಕ್ರಿಕೆಟ್ನ 2017ರ ಸೀಸನ್ನಲ್ಲಿ 112 ರ ಸ್ಟ್ರೈಕ್ ರೇಟ್ನಲ್ಲಿ 1013 ರನ್ಗಳಿಸಿದ್ದರು. ಅವರ ಪ್ರದರ್ಶನ ಮಟ್ಟವನ್ನು ನೋಡಿ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು. ಅಲ್ಲಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಜಮೈಮಾ ಟೀಂ ಇಂಡಿಯಾದಲ್ಲಿ ಕಾಯಂ ಸದಸ್ಯರಾಗಿ ಉಳಿದುಕೊಂಡಿದ್ದಾರೆ.