ETV Bharat / briefs

'ಟ್ರಿಪಲ್ ಎಕ್ಸ್-2' ವೆಬ್ ಸೀರಿಸ್ ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ದೂರು ದಾಖಲು

ಏಕ್ತಾ ಕಪೂರ್ 'ಟ್ರಿಪಲ್ ಎಕ್ಸ್ -2' ವೆಬ್ ಸಿರೀಸ್‌ನಲ್ಲಿ ಭಾರತೀಯ ಸೈನಿಕರ ಬಟ್ಟೆ ಹರಿಯುವ ಮತ್ತು ಧರ್ಮ ನಿಂದನೆಯಂತಹ ದೃಶ್ಯಗಳು ಕಂಡು ಬಂದಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.

Xxx2 web series
Xxx2 web series
author img

By

Published : Jun 6, 2020, 1:34 PM IST

Updated : Jun 6, 2020, 2:28 PM IST

ಇಂದೋರ್ : ಚಲನಚಿತ್ರ ನಿರ್ಮಾಪಕಿ ಏಕ್ತಾ ಕಪೂರ್ ವೆಬ್ ಸರಣಿ ವಿರುದ್ಧ ಇಂದೋರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವೆಬ್ ಸಿರೀಸ್‌ನಲ್ಲಿ ಭಾರತೀಯ ಸೈನಿಕರ ಬಟ್ಟೆ ಹರಿಯುವ ಮತ್ತು ಧರ್ಮ ನಿಂದನೆಯಂತಹ ದೃಶ್ಯಗಳು ಕಂಡು ಬಂದಿದೆ ಎಂದು ಆರೋಪಿಸಿ ಇಂದೋರ್ ನ ಸಂಕೇತ ನಗರ ಮತ್ತು ಅನ್ನಪೂರ್ಣ ನಗರ ನಿವಾಸಿಗಳಿಬ್ಬರು ಏಕ್ತಾ ಕಪೂರ್ ವಿರುದ್ಧ ದೂರು ನೀಡಿದ್ದಾರೆ.

ದೂರದಾರರು ಒದಗಿಸಿದ ಸಾಕ್ಷ್ಯ ಆಧಾರದ ಮೇಲೆ ವೆಬ್ ಸೀರಿಸ್ ನ ಪಾತ್ರಧಾರಿ ಪಂಖುರಿ ರಾಡಿಜಿಯಸ್, ಜೆಸ್ಸಿಕಾ ಖುರಾನಾ ಮತ್ತು ಇತರ ತಂಡದ ಸದಸ್ಯರ ವಿರುದ್ಧ 294, 298, ಐಪಿಸಿಯ 34 ಐಪಿಸಿ, ಐಟಿ ಕಾಯ್ದೆಯ ಸೆಕ್ಷನ್ 67,68 ಮತ್ತು ಭಾರತೀಯ ಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ವಿಶೇಷವೆಂದರೆ, 'ಟ್ರಿಪಲ್ ಎಕ್ಸ್ -2' ಎಂಬ ವೆಬ್ ಸರಣಿ ಏಕ್ತಾ ಕಪೂರ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿಂದೆ ಗುರುಗ್ರಾಮ್‌ನ ಪಾಲಂ ವಿಹಾರ್ ಪೊಲೀಸ್ ಠಾಣೆಯಲ್ಲಿ ಕೆಲವು ಮಾಜಿ ಮಿಲಿಟರಿ ಸಿಬ್ಬಂದಿ 'ಟ್ರಿಪಲ್ ಎಕ್ಸ್ -2' ಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.

Last Updated : Jun 6, 2020, 2:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.