ಬ್ರಿಸ್ಟೋಲ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಇಂದು ತನ್ನ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಶಿಶು ಅಫ್ಘಾನಿಸ್ತಾನದ ವಿರುದ್ಧ ಸೆಣಸಾಡಲಿದೆ.
ಅಭ್ಯಾಸ ಪಂದ್ಯಗಳೆರಡರಲ್ಲೂ ಜಯ ಸಾಧಿಸಿರುವ ಆಸ್ಟ್ರೇಲಿಯಾ ತಂಡ ಉತ್ತಮ ಸ್ಪಿನ್ನರ್ಗಳನ್ನೊಳ ಅಫ್ಘಾನಿಸ್ತಾನವನ್ನು ಇಂದು ಬ್ರಿಸ್ಟೋಲ್ನಲ್ಲಿ ನಡೆಯುವ ವಿಶ್ವಕಪ್ನ 4 ನೇ ಪಂದ್ಯದಲ್ಲಿ ಎದುರಿಸಲಿದೆ.
5 ಬಾರಿಯ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡಕ್ಕೆ ಒಂದು ವರ್ಷದ ನಂತರ ಸ್ಮಿತ್ ಹಾಗೂ ವಾರ್ನರ್ ಆಗಮನವಾಗಿದ್ದು, ಅವರಿಗೆ ಮರುಹುಟ್ಟು ನೀಡುತ್ತಿರುವ ಈ ಪಂದ್ಯದಲ್ಲಿ ವಾರ್ನರ್ ಫಿಂಚ್ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲು ಕಾಯುತ್ತಿದ್ದಾರೆ. ಮತ್ತೊಬ್ಬ ಆಟಗಾರ ಸ್ಮಿತ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಯಲಿದ್ದಾರೆ. ಉಳಿದಂತೆ ಖವಾಜಾ, ಮ್ಯಾಕ್ಸ್ವೆಲ್,ಕ್ಯಾರಿ, ಬೌಲಿಂಗ್ನಲ್ಲಿ ಸ್ಟೋಯ್ನಿಸ್, ಸ್ಟಾರ್ಕ್, ಜಂಪಾ, ಕೌಲ್ಟರ್ ಲೈನ್ ಅಫ್ಘಾನಿಸ್ತಾನಕ್ಕೆ ಸವಾಲ್ ನೀಡಲು ತಯಾರಾಗಿದೆ.
ಮುಖಾಮುಖಿ
ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ 2 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಎರಡೂ ಬಾರಿಯೂ ಆಸ್ಟ್ರೇಲಿಯಾ ಜಯಿಸಿದೆ. ಕಳೆದ ವಿಶ್ವಕಪ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು.
15 ಸದಸ್ಯರ ತಂಡ ಇಂತಿದೆ :
ಗುಲ್ಬದಿನ್ ನೈಬ್(ನಾಯಕ),ಮೊಹಮ್ಮದ್ ಶಹ್ಜಾದ್(ವಿಕೀ), ನೂರ್ ಅಲಿ ಜಾರ್ಡನ್, ರಶೀದ್ ಖಾನ್, ಹಜರತುಲ್ಹಾ ಝಾಝೈ, ರೆಹ್ಮತ್ ಶಾ, ಅಸ್ಘರ್ ಆಫ್ಘಾನ್, ಹಶ್ಮತುಲ್ಹಾ ಶಾಹಿದಿ, ನಜೀಬುಲ್ಹಾ ಝಾರ್ಡನ್, ಸಮೀಉಲ್ಹಾ ಶಿನ್ವಾರಿ, ಮೊಹಮ್ಮದ್ ನಬಿ, ದವ್ಲಾತ್ ಝಾರ್ಡನ್, ಅಫ್ಟಾಬ್ ಆಲಂ, ಹಮೀದ್ ಹಸ್ಸನ್, ಮೂಜೀಬ್ ಉರ್ ರೆಹ್ಮಾನ್.
ಆಸ್ಟ್ರೇಲಿಯಾ ತಂಡ:
ಆ್ಯರೋನ್ ಫಿಂಚ್(ನಾಯಕ), ಜಾಸನ್ ಬೆಂಡ್ರಾಫ್, ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ಕಾಲ್ಟರ್-ನೇಲ್, ಪ್ಯಾಟ್ ಕಮ್ಮಿನ್ಸ್, ಉಸ್ಮಾನ್ ಖವಾಜ, ನೇಥನ್ ಲಯನ್, ಶಾನ್ ಮಾರ್ಶ್, ಗ್ಲೇನ್ ಮ್ಯಾಕ್ಸ್ವೆಲ್, ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಡೇವಿಡ್ ವಾರ್ನರ್, ಆ್ಯಡಮ್ ಜಂಪಾ.