ಹೈದರಾಬಾದ್: ಇಲ್ಲಿಯವರೆಗೆ ನಡೆದ 11 ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಅನೇಕ ರೀತಿಯ ವಿಶಿಷ್ಟ ದಾಖಲೆ ಮೂಡಿ ಬಂದಿವೆ. ಇದರ ಮಧ್ಯೆ ವಿಶೇಷ ರೀತಿಯಲ್ಲಿ ಎಲ್ಲಾ ಆವೃತ್ತಿ ವಿಶ್ವಕಪ್ನಲ್ಲಿ ಕೇವಲ ನಾಲ್ಕು ಸಲ ಮಾತ್ರ 400+ ರನ್ ಹರಿದು ಬಂದಿವೆ.
2015ರ ವಿಶ್ವಕಪ್ನಲ್ಲೇ ಮೂರು ಇನ್ನಿಂಗ್ಸ್ಗಳಿಂದ 400+ ರನ್ ಹರಿದು ಬಂದಿರುವುದು ವಿಶೇಷ. ಈ ಟೂರ್ನಿಯಲ್ಲಿ ಎರಡು ಸಲ ದಕ್ಷಿಣ ಆಫ್ರಿಕಾ 400+ ರನ್ ಮಾಡಿತ್ತು. ಆಸ್ಟ್ರೇಲಿಯಾ ವಿಶ್ವಕಪ್ನಲ್ಲಿ ಸಿಡಿಸಿರುವ 417 ರನ್ ಇಲ್ಲಿಯವರೆಗೆ ವಿಶ್ವಕಪ್ನಲ್ಲಿ ಮೂಡಿ ಬಂದಿರುವ ಅತಿ ಹೆಚ್ಚಿನ ಸ್ಕೋರ್. ಇನ್ನು 2007ರಲ್ಲಿ ಬರ್ಮುಡ ವಿರುದ್ಧ ಟೀಂ ಇಂಡಿಯಾ ಸಿಡಿಸಿರುವ 413 ರನ್ ಎರಡನೇ ಅತಿ ಹೆಚ್ಚಿನ ಸ್ಕೋರ್ ಆಗಿದೆ. ಈ ಪಂದ್ಯದಲ್ಲಿ ವಿರೇಂದ್ರ ಸೆಹ್ವಾಗ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು.
2015ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಆಫ್ಘಾನಿಸ್ತಾನದ ವಿರುದ್ಧ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 417 ರನ್ ಗಳಿಸಿದ್ದರು. 2007ರ ಟೂರ್ನಿಯಲ್ಲಿ ಟೀಂ ಇಂಡಿಯಾ ಬರ್ಮುಡ ವಿರುದ್ಧ 5 ವಿಕೆಟ್ ನಷ್ಟಕ್ಕೆ 413 ರನ್ ಗಳಿಸಿತ್ತು. 2015ರಲ್ಲಿ ದಕ್ಷಿಣ ಆಫ್ರಿಕಾ ಐರ್ಲೆಂಡ್ ವಿರುದ್ಧ 4 ವಿಕೆಟ್ ನಷ್ಟಕ್ಕೆ 411 ರನ್ ಗಳಿಸಿತ್ತು. ಇದೇ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಫ್ರಿಕಾ 408 ರನ್ ಕೂಡ ಗಳಿಕೆ ಮಾಡಿದ್ದು ವಿಶೇಷವಾಗಿತ್ತು.
2007ಕ್ಕೂ ಮುಂಚಿತವಾಗಿ ನಡೆದ ವಿಶ್ವಕಪ್ನಲ್ಲಿ ಯಾವುದೇ ತಂಡ 400+ರನ್ಗಳಿಕೆ ಮಾಡಿರಲಿಲ್ಲ. 1996ರ ವಿಶ್ವಕಪ್ನಲ್ಲಿ ಶ್ರೀಲಂಕಾ ಕೀನ್ಯಾ ವಿರುದ್ಧ 398 ರನ್ ಗಳಿಕೆ ಮಾಡಿತ್ತು.
400+ ರನ್ ಮೂಡಿ ಬಂದಿದ್ದು ಯಾವಾಗ?
- ಭಾರತ ಬರ್ಮುಡ ವಿರುದ್ಧ 413 ರನ್-2007ರ ವಿಶ್ವಕಪ್
- ದಕ್ಷಿಣ ಆಫ್ರಿಕಾ - ವೆಸ್ಟ್ ಇಂಡೀಸ್ ವಿರುದ್ಧ 408 ರನ್- 2015 ರ ವಿಶ್ವಕಪ್
- ದಕ್ಷಿಣ ಆಫ್ರಿಕಾ - ಐರ್ಲೆಂಡ್ ವಿರುದ್ಧ 411 ರನ್-2015ರ ವಿಶ್ವಕಪ್
- ಆಸ್ಟ್ರೇಲಿಯಾ ಆಫ್ಘಾನ್ ವಿರುದ್ಧ 417 ರನ್- 2015ರ ವಿಶ್ವಕಪ್