ಓವಲ್: ಭಾನುವಾರದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾದ ಲಂಡನ್ನ ಓವಲ್ ಮೈದಾನದಲ್ಲಿ ಅಕ್ಷರಶಃ ರನ್ಹೊಳೆಯೇ ಹರಿದಿದೆ.
ವಿಶ್ವಕಪ್ ಟೂರ್ನಿ ಬಲಿಷ್ಠ ತಂಡಗಳಾದ ಆಸೀಸ್ ಹಾಗೂ ಟೀಮ್ ಇಂಡಿಯಾ ತಮ್ಮ ಘನತೆಗೆ ತಕ್ಕುದಾದ ಪ್ರದರ್ಶನ ನೀಡಿದವು. ಈ ಪಂದ್ಯದಲ್ಲಿ ಹಲವಾರು ದಾಖಲೆಗಳು ನಿರ್ಮಾಣವಾಗಿದೆ.
'ಚೀಟರ್' ಎಂದು ಸ್ಮಿತ್ರನ್ನು ಛೇಡಿಸಿದ ಫ್ಯಾನ್ಸ್... ಬುದ್ಧಿವಾದ ಹೇಳಿ ಮನಗೆದ್ದ ಕೊಹ್ಲಿ
ಭಾನುವಾರದ ಪಂದ್ಯ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಆಸೀಸ್ ವಿರುದ್ಧ ಐವತ್ತನೇ ಮ್ಯಾಚ್ ಗೆದ್ದ ಮೂರನೇ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂಗ್ಲೆಂಡ್ 61 ಹಾಗೂ ವೆಸ್ಟ್ ಇಂಡೀಸ್ 60 ಬಾರಿ ಆಸ್ಟ್ರೇಲಿಯಾವನ್ನು ಏಕದಿನದಲ್ಲಿ ಸೋಲಿಸಿದೆ.
ಏಕದಿನದಲ್ಲಿ ಸತತ 11 ಪಂದ್ಯಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾ ನಿನ್ನೆಯ ಮ್ಯಾಚ್ನಲ್ಲಿ ಮುಗ್ಗರಿಸುವ ಮೂಲಕ ಗೆಲುವಿನ ಅಭಿಯಾನಕ್ಕೆ ತೆರೆ ಬಿದ್ದಿದೆ. 2009-10ರಲ್ಲಿ ಆಸ್ಟ್ರೇಲಿಯಾ ಸತತ 12 ಪಂದ್ಯ ಗೆದ್ದು ದಾಖಲೆ ನಿರ್ಮಿಸಿತ್ತು.
ಮುಂಬೈಕರ್‌ನ ರೆಕಾರ್ಡ್ ಬ್ರೇಕ್ ಮಾಡಿದ ಮುಂಬೈಕರ್.. ಆಸೀಸ್ ವಿರುದ್ಧ ಸಚಿನ್, ಕೊಹ್ಲಿಗಿಂತ ರೋಹಿತ್ ಬೆಸ್ಟ್!
ನಿನ್ನೆಯ ಪಂದ್ಯವನ್ನು ಆಡುವ ಮೂಲಕ ಹಿರಿಯ ಆಟಗಾರ ಎಂ.ಎಸ್.ಧೋನಿ ಭಾರತದ ಪರ 340 ಏಕದಿನ ಪಂದ್ಯವನ್ನಾಡಿದ ರಾಹುಲ್ ದ್ರಾವಿಡ್ ದಾಖಲೆಯನ್ನು ಸರಿಗಟ್ಟಿದರು. ಸಚಿನ್ ತೆಂಡುಲ್ಕರ್ 463 ಪಂದ್ಯವಾಡುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.
ಅಲೆಕ್ಸ್ ಕ್ಯಾರಿ 25 ಎಸೆತದಲ್ಲಿ ಅರ್ಧಶತಕ ಪೂರೈಸುವ ಮೂಲಕ ವಿಶ್ವಕಪ್ನಲ್ಲಿ ಎರಡನೇ ವೇಗದ ಅರ್ಧಶತಕ ದಾಖಲಿಸಿದರು. 2015ರ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಗ್ಲೆನ್ ಮ್ಯಾಕ್ಸ್ವೆಲ್ 21 ಎಸೆತದಲ್ಲಿ 50 ರನ್ ಸಿಡಿಸಿದ್ದರು.