ETV Bharat / briefs

ವಿಶ್ವಕಪ್​ 2019: ಆತಿಥೇಯ ಇಂಗ್ಲೆಂಡ್​​​ ವಿರುದ್ಧ ಕಮ್​ಬ್ಯಾಕ್​ ಮಾಡಲಿದೆಯೇ ಪಾಕ್​​? - ಜಾಸನ್​ ರಾಯ್​

ಬಲಿಷ್ಠ ಬ್ಯಾಟಿಂಗ್​ ಹೊಂದಿರುವ ಇಂಗ್ಲೆಂಡ್​ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 104 ರನ್​ಗಳಿಂದ ಮಣಿಸಿದೆ. ಜಾಸನ್​ ರಾಯ್​, ರೂಟ್​, ಮಾರ್ಗನ್​, ಬೆನ್​ಸ್ಟೋಕ್ಸ್​ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಜೋಫ್ರಾ ಆರ್ಚರ್​, ವೋಕ್ಸ್​ ಹಾಗೂ ರಶೀದ್ ಬೌಲಿಂಗ್​ ಪ್ರದರ್ಶನದಿಂದ ಇಂಗ್ಲೆಂಡ್​ ಮೇಲುಗೈ ಸಾಧಿಸಲಿದೆ.

icc
author img

By

Published : Jun 3, 2019, 12:46 PM IST

ನಾಟಿಂಗ್​ಹ್ಯಾಮ್​: ವಿಶ್ವಕಪ್​ ಗೆಲ್ಲುವ ಫೇವರೇಟ್​ ತಂಡಗಳಲ್ಲಿ ಒಂದಾದ ಇಂಗ್ಲೆಂಡ್​ ಹಾಗೂ ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ ಇಂದು ನಾಟಿಂಗ್​ಹ್ಯಾಮ್​ನಲ್ಲಿ ಸೆಣಸಾಡಲಿವೆ.

ಬಲಿಷ್ಠ ಬ್ಯಾಟಿಂಗ್​ ಹೊಂದಿರುವ ಇಂಗ್ಲೆಂಡ್​ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 104 ರನ್​ಗಳಿಂದ ಮಣಿಸಿದೆ. ಜಾಸನ್​ ರಾಯ್​, ರೂಟ್​, ಮಾರ್ಗನ್​, ಬೆನ್​ಸ್ಟೋಕ್ಸ್​ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಜೋಫ್ರಾ ಆರ್ಚರ್​, ವೋಕ್ಸ್​ ಹಾಗೂ ರಶೀದ್ ಬೌಲಿಂಗ್​ ಪ್ರದರ್ಶನದಿಂದ ಇಂಗ್ಲೆಂಡ್​ ಮೇಲುಗೈ ಸಾಧಿಸಲಿದೆ.

ಇನ್ನು ಮೊದಲ ಪಂದ್ಯದಲ್ಲಿ ವಿಂಡೀಸ್​ ವಿರುದ್ಧ ಕೇವಲ 105 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ ಈ ಪಂದ್ಯದಲ್ಲಿ ತನ್ನ ತಪ್ಪನ್ನು ತಿದ್ದಿಕೊಂಡು ಇಂಗ್ಲೆಂಡ್​ ವಿರುದ್ಧ ಹೊಸ ಆಲೋಚನೆಗಳಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.

ಮೊದಲ ಪಂದ್ಯದಿಂದ ಹೊರಗುಳಿದಿದ್ದ ಮಲಿಕ್​​, ಆಸಿಪ್​ ಅಲಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಯುವ ಬೌಲರ್​ ಶಾಹೀನ್​ ಆಫ್ರಿದಿಗೆ ಅವಕಾಶ ಸಿಗುವ ಅವಕಾಶ ಹೆಚ್ಚಿದೆ.

ಎರಡು ವಾರಗಳ ಹಿಂದಷ್ಟೇ ಮುಗಿದ ಏಕದಿನ ಸರಣಿಯಲ್ಲಿ 4-0ಯಲ್ಲಿ ಸೋಲನುಭವಿಸಿರುವ ಪಾಕಿಸ್ತಾನ ಇದೇ ಕ್ರೀಡಾಂಗಣದಲ್ಲಿ 340 ರನ್​ ಗಳಿಸಿಯೂ 3 ವಿಕೆಟ್​ಗಳ ಸೋಲನುಭವಿಸಿತ್ತು. ವಿಂಡೀಸ್​ ವಿರುದ್ಧವೂ 105 ರನ್​ಗೇ ಇದೇ ಕ್ರೀಡಾಂಗಣದಲ್ಲಿ ಆಲೌಟ್​ ಕೂಡ ಆಗಿದೆ. ಹಾಗಾಗಿ ಇಂದಿನ ಪಂದ್ಯ ಕೂತೂಹಲ ಕೆರಳಿಸಿದೆ.

ವಿಶ್ವಕಪ್​ನಲ್ಲಿ ಮುಖಾಮುಖಿ:

ಎರಡು ತಂಡಗಳು 9 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ತಲಾ 4ರಲ್ಲಿ ಜಯ ಸಾಧಿಸಿವೆ. ಒಂದು ಪಂದ್ಯ ರದ್ದಾಗಿದೆ. ಇನ್ನು ಏಕದಿನ ಕ್ರಿಕೆಟ್​ನಲ್ಲಿ 87ರಲ್ಲಿ ಮುಖಾಮುಖಿಯಾಗಿದ್ದು, ಇಂಗ್ಲೆಂಡ್​ 53ರಲ್ಲಿ, ಪಾಕಿಸ್ತಾನ 31ರಲ್ಲಿ ಜಯ ಸಾಧಿಸಿವೆ.

ತಂಡಗಳು:
ಇಂಗ್ಲೆಂಡ್​: ಇಯಾನ್​ ಮಾರ್ಗನ್​(ನಾಯಕ), ಜಾಸನ್​ ರಾಯ್​, ಜಾನಿ ಬೈರ್ಸ್ಟೋವ್, ಜೋ ರೂಟ್​, ಬೆನ್​ ಸ್ಟೋಕ್ಸ್​, ಜಾಸ್​ ಬಟ್ಲರ್​, ಮೊಯಿನ್​ ಅಲಿ, ಕ್ರಿಸ್​ ವೋಕ್ಸ್​, ಲೈಮ್ ಫ್ಲಂಕೇಟ್​, ಜೋಫ್ರಾ ಆರ್ಚರ್, ಆದಿಲ್​ ರಶೀದ್​

ಪಾಕಿಸ್ತಾನ: ಸರ್ಫರಾಜ್​ ಅಹ್ಮದ್​(ನಾಯಕ), ಫಾಖರ್​ ಝಮಾನ್, ಅಸಿಫ್​ ಅಲಿ, ಹಸನ್​ ಅಲಿ, ಇಮಾಮ್​ ಉಲ್​ ಹಕ್​, ಮೊಹಮ್ಮದ್​ ಹಫೀಜ್​, ಶೋಯಬ್​ ಮಲಿಕ್​​, ಬಾಬರ್​ ಅಜಂ, ಹ್ಯಾರೀಸ್​ ಸೋಹೈಲ್​, ಇಮಾದ್ ವಾಸಿಂ, ಮೊಹ್ಮದ್​ ಆಮಿರ್, ಮೊಹಮ್ಮದ್​ ಹಸ್ನೈನ್, ಶಹೀನ್​ ಆಫ್ರಿದಿ, ವಹಾಬ್​ ರಿಯಾಜ್

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.