ತಿರುವನಂತಪುರಂ(ಕೇರಳ): ಮಹಿಳಾ ಪೊಲೀಸ್ ಅಧಿಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಅಮಾನವೀಯ ಘಟನೆ ಕೇರಳದ ಅಲಪ್ಪುಜ ಜಿಲ್ಲೆಯಲ್ಲಿ ನಡೆದಿದೆ.
34 ವರ್ಷದ ಸೌಮ್ಯ ಪುಷ್ಪಕರನ್ ಸಾವನ್ನಪ್ಪಿರುವ ಮಹಿಳಾ ಪೊಲೀಸ್ ಅಧಿಕಾರಿ.
ಈ ಅಧಿಕಾರಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ವ್ಯಕ್ತಿ ಕೂಡ ಸಿವಿಲ್ ಪೊಲೀಸ್ ಅಧಿಕಾರಿ ಎಂದು ತಿಳಿದು ಬಂದಿದೆ. ಮಹಿಳಾ ಅಧಿಕಾರಿಗೆ ಬೆಂಕಿ ಹಚ್ಚಿ, ಆತ ಕೂಡಾ ಬೆಂಕಿ ಹಚ್ಚಿಕೊಂಡಿದ್ದಾನೆ. ಪರಿಣಾಮ ಆತನ ದೇಹದ ಮೇಲೆ ಶೇ.50ರಷ್ಟು ಸುಟ್ಟ ಗಾಯಗಳಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತ ಮಹಿಳಾ ಪೊಲೀಸ್ ಅಧಿಕಾರಿಗೆ ಮೂವರು ಮಕ್ಕಳಿದ್ದು, ಘಟನೆಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ.