ಮುಂಬೈ: ಭಾರತ ತಂಡಕ್ಕೆ 2 ವಿಶ್ವಕಪ್ ತಂದುಕೊಡುವಲ್ಲಿ ಮಹತ್ವದ ಪಾತ್ರವಹಿಸಿದ್ದ ಆಲ್ರೌಂಡರ್ ಯುವರಾಜ್ ಸಿಂಗ್ ಇದೀಗ ನಿವೃತ್ತಿ ಅಂಚಿನಲ್ಲಿದ್ದು, ಮುಂಬೈ ಇಂಡಿಯನ್ಸ್ ಫೈನಲ್‌ನಲ್ಲಿ ಅವಕಾಶ ಕೊಟ್ಟು ಕೊನೆ ಐಪಿಎಲ್ ಪಂದ್ಯವನ್ನು ಸ್ಮರಣೀಯವನ್ನಾಗಿಸುವುದೇ ಎಂಬ ವಿಚಾರ ಚರ್ಚೆಯಾಗುತ್ತಿದೆ.
ಯುವಿ ಪಾಲಿಗೆ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಬಾಗಿಲು ಮುಚ್ಚಿದೆ. ಕಳೆದ ಬಾರಿ ಐಪಿಎಲ್ ಹರಾಜಿನಲ್ಲಿ ಅವರನ್ನು ಯಾರೂ ಕೊಂಡುಕೊಳ್ಳದಿದ್ದಾಗ ತಂಡದ ಮೆಂಟರ್ ಸೆಹ್ವಾಗ್ರ ಒತ್ತಾಯದ ಮೇರೆಗೆ ಪಂಜಾಬ್ ತಂಡ ತಂಡಕ್ಕೆ ಸೇರಿಸಿಕೊಂಡಿತ್ತು. ಈ ವರ್ಷವೂ ಯಾರೂ ಖರೀದಿಸದಿದ್ದಾಗ ಮುಂಬೈ ಇಂಡಿಯನ್ಸ್ 1 ಕೋಟಿ ರೂಗೆ ಖರೀದಿಸಿ ಯುವಿಯಿಂದ ಅದ್ಭುತ ಪ್ರದರ್ಶನ ನಿರೀಕ್ಷಿಸಿತ್ತು.
ಆದರೆ, ಯುವರಾಜ್ 4 ಪಂದ್ಯಗಳಲ್ಲಿ ಕೇವಲ 98 ರನ್ಗಳಿಸಿ ನಿರಾಸೆ ಮೂಡಿಸಿದರು. ಪ್ಲೇ ಆಫ್ಗೇರುವ ದೃಷ್ಟಿಯಿಂದ ವಿಶ್ವಕಂಡ ಶ್ರೇಷ್ಠ ಆಲ್ರೌಂಡರನ್ನು ಮುಂಬೈ ತಂಡದಿಂದ ಕೈಬಿಟ್ಟಿತು. ಇದೀಗ ಅವರ ಪಾಲಿಗೆ ಬಹುತೇಕ ಇದೇ ಕೊನೆಯ ಐಪಿಎಲ್ ಆಗಲಿದ್ದು, ತನ್ನ ಕೊನೆಯ ಪಂದ್ಯವಾಡಲು ಮುಂಬೈ ಅವಕಾಶ ಕೊಡಲಿದೆಯಾ? ಎಂಬುದನ್ನು ಕೊಟ್ಯಾಂತರ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.
ಯುವರಾಜ್ 2007ರ ಟಿ20 ವಿಶ್ವಕಪ್ ಹಾಗೂ 2011 ರ ಟಿ20 ವಿಶ್ವಕಪ್ಗಳನ್ನು ಭಾರತಕ್ಕೆ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನಂತರ 2 ಎರಡು ವರ್ಷ ಕ್ಯಾನ್ಸರ್ ಚಿಕಿತ್ಸೆ ಪಡೆದು ಮತ್ತೆ 2013 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿ ಇಂಗ್ಲೆಂಡ್ ವಿರುದ್ಧ ಆಕರ್ಷಕ 150 ರನ್ ಹಾಗು 2017ರ ಚಾಂಪಿಯನ್ ಟ್ರೋಫಿಯಲ್ಲಿ ಪಾಕ್ ವಿರುದ್ಧ 32 ಎಸೆತಗಳಲ್ಲಿ 53 ರನ್ ಬಾರಿಸಿದರು. ಅವಕಾಶ ಸಿಕ್ಕ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದರೂ ಫಿಟ್ನೆಸ್ ಕಾಯ್ದುಕೊಳ್ಳುವಲ್ಲಿ ವಿಫಲರಾದ ಕಾರಣ ತಂಡದಿಂದ ಹೊರ ಹಾಕಲಾಗಿತ್ತು.
ಇದೀಗ ವೃತ್ತಿ ಜೀವನದ ಅಂತ್ಯದಲ್ಲಿರುವ ಲೆಜೆಂಡರಿ ಕ್ರಿಕೆಟಿಗನಿಗೆ ಅವಕಾಶ ಮಾಡಿಕೊಟ್ಟು ಸ್ಮರಣೀಯವನ್ನಾಗಿಸಬೇಕೆಂದು ಯುವಿ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.