ಓವಲ್: ಭಾನುವಾರ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಧೋನಿ ಗ್ಲೌಸ್ ವಿವಾದ ಬಳಿಕ ನಡೆಯುತ್ತಿರುವ ಮೊದಲ ಪಂದ್ಯ ಇದಾಗಿದ್ದು, ವಿಶೇಷ ಕುತೂಹಲ ಮೂಡಿಸಿದೆ.
ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ಕಪ್ತಾನ ಎಂ.ಎಸ್.ಧೋನಿ ಬಲಿದಾನ್ ಲಾಂಛನವಿರುವ ಗ್ಲೌಸ್ ಧರಿಸಿ ಕೀಪಿಂಗ್ ಮಾಡಿದ್ದರು. ತಡವಾಗಿ ಬೆಳಕಿಗೆ ಬಂದಿದ್ದ ಈ ವಿಚಾರ ಭಾರಿ ಸುದ್ದಿಯಾಗಿತ್ತು. ಸಂಪೂರ್ಣ ದೇಶವೇ ಧೋನಿಯ ಪರವಾಗಿ ನಿಂತಿತ್ತು.
ಟ್ವಿಟರ್ನಲ್ಲಿ ಧೋನಿ ಬೆಂಬಲಿಸಿದ ದೇಶದ ಜನತೆ...! ಮಾಹಿಗೆ ಬಿಸಿಸಿಐ ಫುಲ್ ಸಫೋರ್ಟ್.
ಧೋನಿ ಪರವಾಗಿ ಬ್ಯಾಟ್ ಬೀಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಗ್ಲೌಸ್ನಲ್ಲಿ ಬಲಿದಾನ್ ಲಾಂಛನ ಇರಲಿಲ್ಲ ಎಂಬುದಾಗಿ ಐಸಿಸಿಗೆ ತಿಳಿಸಿತ್ತು. ಆದರೆ ಐಸಿಸಿ, ಧೋನಿ ಮುಂದಿನ ಪಂದ್ಯಗಳಲ್ಲಿ ಈ ಲಾಂಛನದ ಗ್ಲೌಸ್ ಧರಿಸುವಂತಿಲ್ಲ ಎಂದು ಆದೇಶಿಸಿತ್ತು.
ಬಿಸಿಸಿಐಗೆ NO ಎಂದ ಐಸಿಸಿ, ಬಲಿದಾನದ ಲಾಂಛನ ಧರಿಸಲು ಧೋನಿಗಿಲ್ಲ ಅವಕಾಶ!
ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಕರೆದ ಸುದ್ದಿಗೋಷ್ಠಿಯಲ್ಲಿ ತಂಡದ ಉಪನಾಯಕ ರೋಹಿತ್ ಶರ್ಮಾಗೆ ಆಸೀಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಬಲಿದಾನ್ ಲಾಂಛನದ ಗ್ಲೌಸ್ ಧರಿಸುತ್ತಾರಾ ಎನ್ನುವ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ಜಾಣ ಉತ್ತರ ನೀಡಿದ ರೋಹಿತ್ ಶರ್ಮಾ, ಕಾದು ನೋಡಿ ಎಂದಿದ್ದಾರೆ.