ಮಡಿಕೇರಿ: ಕೊಡಗು ಜಿಲ್ಲೆಯ ಜನರಿಗೆ ಮತ್ತೆ ಕಾಡಾನೆಗಳ ಭೀತಿ ಶುರುವಾಗಿದೆ. ಚೆಟ್ಟಳ್ಳಿ ಬಳಿಯ ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಕಾಡಾನೆಗಳು ಆಹಾರ, ನೀರನ್ನು ಅರಸಿ ಹಿಂಡುಗಟ್ಟಲೇ ಬರುತ್ತಿವೆ. ಈ ದೃಶ್ಯವನ್ನು ವ್ಯಕ್ತಿವೋರ್ವ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಪ್ರತಿದಿನ ಬೆಳಗ್ಗೆ ಆನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರು ಬೆಳಗಿನ ಜಾವ ಹಾಗೂ ಸಂಜೆ ಹೊತ್ತಲ್ಲಿ ಸಂಚರಿಸಲು ಭಯಪಡುವಂತಾಗಿದೆ.