ನವದೆಹಲಿ: ವಿಶ್ವಕಪ್ ತಂಡಕ್ಕೆ ಅಂಬಾಟಿ ರಾಯುಡು ರನ್ನು ಆಯ್ಕೆ ಮಾಡದಿರುವುದಕ್ಕೆ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ ತಂಡಕ್ಕೆ ಪಂತ್ ಆಯ್ಕೆಯಾಗಿಲ್ಲ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ, ಆದರೆ ನನ್ನ ಪ್ರಕಾರ ಅಂಬಾಟಿ ರಾಯುಡುರನ್ನ ಆಯ್ಕೆ ಮಾಡದಿರುವುದಕ್ಕೆ ಕಾರಣ ತಿಳಿಯುತ್ತಿಲ್ಲ. ಎಂಎಸ್ಕೆ ಪ್ರಸಾದ್ ಮತ್ತು ತಂಡ ಅನುಭವವಿಲ್ಲದಿದ್ದರೂ ಪರವಾಗಿಲ್ಲ ಕಳೆದ ಒಂದೆರಡು ವರ್ಷದಿಂದ ರಾಯುಡು ಪ್ರದರ್ಶನ ನೋಡಿ ಆಯ್ಕೆ ಮಾಡಬಹುದಿತ್ತು ಎಂದಿದ್ದಾರೆ.
ಆದರೆ ಯುವ ಆಟಗಾರ ಪಂತ್ ಬದಲು ಕಾರ್ತಿಕ್ರನ್ನು ಆಯ್ಕೆ ಮಾಡಿರುವುದಕ್ಕೆ ನನಗೆ ಆಶ್ಚರ್ಯವಾಗಿದೆ. ಇದಕ್ಕಿಂತಲೂ 33 ವರ್ಷ ದಾಟಿದರು 47 ರ ಸರಾಸರಿ ಹೊಂದಿದ್ದ ರಾಯುಡು ರನ್ನ ಕೈಬಿಟ್ಟಿರುವುದು ಮಾತ್ರ ವಿಷಾಧನೀಯ ಎಂದು ಗಂಭೀರ್ ಬೆಸರ ವ್ಯಕ್ತಪಡಿಸಿದ್ದಾರೆ.
ಪಂತ್ಗೆ ಇನ್ನು ವಯಸ್ಸಿದೆ , ಅನುಭವ ಸಾಲದು ಎಂದು ಕೈಬಿಟ್ಟಿರಬಹುದು ಆದರೆ ರಾಯುಡು ಉತ್ತಮ ಪ್ರದರ್ಶನ ತೋರಿತ್ತಿರುವುದರ ಹೊರೆತಾಗಿಯೂ ಕೈಬಿಟ್ಟಿರುವುದು ಸಹಿಸಲಾಗುತ್ತಿಲ್ಲ ಎಂದಿದ್ದಾರೆ.
ಆಯ್ಕೆ ಮಾಡಿರುವ ತಂಡದಲ್ಲಿ ಕೆಲವು ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ. ಅವರ ಮೇಲೆ ನಂಬಿಕೆ ಇಟ್ಟು ನಾಯಕ ಹಾಗೂ ಆಯ್ಕೆ ಸಮಿತಿ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದಾರೆ,2011ಕ್ಕಿಂತ ಈ ತಂಡದ ಬೌಲಿಂಗ್ ಬಲಿಷ್ಠವಾಗಿದೆ. ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ತಂಡ ವಿಶ್ವಕಪ್ ಗೆಲ್ಲಲು ಅರ್ಹವಾದ ತಂಡವಾಗಿದೆ ಎಂದಿದ್ದಾರೆ.