ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆ ನೋಟ್ಬ್ಯಾನ್, ರೈತರ ಸಮಸ್ಯೆ, ಗಬ್ಬರ್ ಟ್ಯಾಕ್ಸ್(ಜಿಎಸ್ಟಿ) ಹಾಗೂ ರಫೇಲ್ ಹಗರಣದ ಮೇಲೆ ನಡೆಯುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ದೆಹಲಿಯ ಔರಂಗಜೇಬ್ ಲೇನ್ನಲ್ಲಿ ಮತದಾನ ಮಾಡಿದ ನಂತರ ಮಾಧ್ಯಮದ ಜೊತೆಗೆ ಮಾತನಾಡಿದ ರಾಗಾ, ಮೋದಿ ಪ್ರಚಾರದ ವೇಳೆ ದ್ವೇಷವನ್ನೇ ದಾಳವಾಗಿಸಿಕೊಂಡಿದ್ದಾರೆ. ಆದರೆ ನಾವು ಪ್ರೀತಿಯನ್ನು ನೀಡಿದ್ದೇವೆ, ಈ ಪ್ರೀತಿಯೇ ಗೆಲ್ಲಲಿದೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.
ಏಳು ರಾಜ್ಯಗಳ 59 ಕ್ಷೇತ್ರಗಳಲ್ಲಿ ಇಂದು ಆರನೇ ಹಂತದ ಮತದಾನ ನಡೆಯುತ್ತಿದ್ದು ಪ್ರಮುಖ ಗಣ್ಯರು ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸುತ್ತಿದ್ದಾರೆ.