ತುಮಕೂರು : ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಿಂದ ಕುಡಿಯೋದಕ್ಕಾಗಿ ತುಮಕೂರಿಗೆ ನೀರು ಹರಿಸಲಾಗಿದೆ.
ತುಮಕೂರು ಹೊರವಲಯದಲ್ಲಿರುವ ಬುಗುಡನಹಳ್ಳಿ ಕೆರೆಗೆ ಚಾನಲ್ಗಳ ಮೂಲಕ ನೀರು ಹರಿದು ಬರುತ್ತಿದ್ದು, ಶಾಸಕ ಜ್ಯೋತಿ ಗಣೇಶ್ ಹಾಗೂ ತುಮಕೂರು ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
300 ಎಂಸಿಎಫ್ಟಿಯಷ್ಟು ನೀರು ಸಂಗ್ರಹದ ಸಾಮರ್ಥ್ಯವನ್ನು ಬುಗುಡನಹಳ್ಳಿ ಕೆರೆ ಹೊಂದಿದೆ. ಈ ಬಾರಿ ಬೇಸಿಗೆಗೆ 150 ಎಂಸಿಎಫ್ಟಿಯಷ್ಟು ನೀರು ಹರಿದು ಬರುವ ವಿಶ್ವಾಸವಿದೆ ಎಂದು ಶಾಸಕ ಜ್ಯೋತಿ ಗಣೇಶ್ ತಿಳಿಸಿದ್ದಾರೆ.
ಪ್ರತಿ ನಿತ್ಯ ತುಮಕೂರು ನಗರಕ್ಕೆ 2 ಎಂಸಿಎಫ್ಟಿ ಬಳಕೆ ಮಾಡಲಾಗುತ್ತದೆ. ತಿಂಗಳಿಗೆ 60 ಎಂಸಿಎಫ್ಟಿ ನೀರು ಬಳಕೆಯಾಗುತ್ತಿದ್ದು, ಪ್ರಸ್ತುತ ಬುಗುಡನಹಳ್ಳಿ ಕೆರೆಗೆ ಹರಿಯುತ್ತಿರುವ ನೀರನ್ನು ಮುಂದಿನ ಮುಂಗಾರುವರೆಗೂ 3 ತಿಂಗಳ ಕಾಲ ಬಳಸಬಹುದಾಗಿದೆ ಎಂದು ಹೇಳಿದ್ದಾರೆ.